ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ರಸ್ತೆಯಲ್ಲಿ ಇರುವ ತಹ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವದ ಅಂಗವಾಗಿ, ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಕಾರ್ಯದರ್ಶಿಯಾದ, ಸಯ್ಯದ್ ಶುಕುರ್ ರವರನ್ನು ಈ ಒಂದು ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಹ್ವಾನಿಸಲಾಗಿತ್ತು.

ಮತ್ತು ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ಕೊಡುವುದರ ಜೊತೆಗೆ ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ದೇಶದ ಅಭಿವೃದ್ಧಿಗೆ ನೀವಿನ್ನು ಹೆಚ್ಚಿನ ಮಟ್ಟದಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಎನ್ನುತ್ತಾ 74ನೇ ಗಣರಾಜ್ಯೋತ್ಸವ ಅಂಗವಾಗಿ.

ತಹ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ಭಾಷಾ ಸಾಬ್ ಅಮೀರ್ ಎ ಜಮಾತ್ ಕೂಡ್ಲಿಗಿ, ಅಖಿಲ್ ಮೌಲಾನಾ, ಹಿರಿಯ ಮುಖಂಡರಾದ ಮಾದಿಹಳ್ಳಿ ನಜೀರ್ ಸಾಬ್, ಮನ್ನನ್ ಅಣ್ಣನವರು, ಅಬ್ಬಾಸ್ ಸಾಬ್, ಇಸ್ಮಾಯಿಲ್ ಸಾಬ್, ಅಬ್ದುಲ್ ರೆಹಮಾನ್ ಅಣ್ಣನವರು, ಇಮ್ತಿಯಾಜ್ ಅಣ್ಣನವರು, ಹಾಗೂ ಮೌಲಾನಗಳು ಮತ್ತು ಮುಖಂಡರು ಉಪಸ್ಥಿತರಿದ್ದರು. ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ತಾಹಾ ಇಂಗ್ಲಿಷ್ ಮೇಡಂ ಸ್ಕೂಲಿನ ಶಿಕ್ಷಕರಿಗೂ ಹಾಗೂ ಮುಖ್ಯವಾಗಿ ಅಖಿಲ್ ಮೌಲಾನ ಇವರಿಗೆ ಧನ್ಯವಾದಗಳನ್ನು ತಿಳಿದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
