ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿದ ಗಣರಾಜ್ಯೋತ್ಸವ ದಿನ.
ಮುಖ್ಯ ಗುರುಗಳು ಹಾಗೂ ಎಸ್ ಡಿ ಎಂ ಸಿ. ಅಧ್ಯಕ್ಷರಿಂದ ಧ್ವಜಾರೋಹಣ ಮಾಡಲಾಯಿತು.
ನಂತರ ಎಸ್ ಡಿ ಎಂ ಸಿ. ಅಧ್ಯಕ್ಷ ಹೊನ್ನೂರಪ್ಪ ರವರು ಮಾತನಾಡಿ ಮಹಾತ್ಮ ಗಾಂಧಿ ಸುಭಾಷ್ ಚಂದ್ರ ಬೋಸ್ . ಸಂಗೊಳ್ಳಿ ರಾಯಣ್ಣ ಹಾಗೂ ಇನ್ನು ಅನೇಕ ಗಣ್ಯರು ನಮ್ಮ ದೇಶಕ್ಕೆ ಸ್ವತಂತ್ರವನ್ನು ನೀಡಿದ್ದಾರೆ ಅವರಂತೆ ಶಾಲೆ ಎಲ್ಲಾ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ವಿದ್ಯಾಭ್ಯಾಸ ಮಾಡಿ ಮುಂದಿನ ಜೀವನಕ್ಕೆ ನೆಲೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು..
ಹಾಗೂ ಮುಖ್ಯ ಗುರುಗಳಾದ ಟಿ. ಇಂದಿರಮ್ಮ ಇವರಿಂದ ಗಣಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು.
ಸ್ವಾಗತ ಭಾಷಣವನ್ನು ಶಿಕ್ಷಕರಾದ ಗಂಗಾಧರ್ ರವರು ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಂದ ಭಾಷಣ ಮತ್ತು ಡ್ಯಾನ್ಸ್ ಕಾರ್ಯಕ್ರಮ ಇನ್ನಿತರೆ ಕಾರ್ಯಕ್ರಮಗಳನ್ನು. ವಿದ್ಯಾರ್ಥಿಗಳ ನೆರವೇರಿಸಿ .
ಈ ಸಂದರ್ಭದಲ್ಲಿ. ಶಿಕ್ಷಕರಗಳಾದ ಕನಕಮ್ಮ ಮಂಜುನಾಥ್ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳು ಮಾಜಿ ಎಸ್ ಡಿ ಎಂ ಸಿ. ಅಧ್ಯಕ್ಷರುಗಳು ವಿದ್ಯಾರ್ಥಿಗಳು ತಂದೆ ತಾಯಿಗಳು ಈ ಒಂದು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಬಂದು ಸಂಭ್ರಮ ಕಂಡರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
