ಜ29ರಂದು:ಶ್ರೀಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ, ಧಾರ್ಮಿಕ ಸಭೆ ಇಷ್ಟಲಿಂಗ ಪೂಜೆ
ವಿಜಯನಗರ ಜಿಲ್ಲೆ ಕೂಡ್ಲಿಗಿ, ಪಟ್ಟಣದಲ್ಲಿ ಜ29ರಂದು ಶ್ರೀಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ1008ಜಗದ್ಗುರು, ಕೇದಾರನಾಥ ರಾಜಗುರುವರ್ಯ ಭೀಮಶಂಕರ ಲಿಂಗ ಶಿವಾಚಾರ್ಯ ರವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದ್ದು. ಪ್ರಯುಕ್ತ ಜ24ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸೇವಾ ಸಮಿತಿಯಿಂದ. ಆಧ್ಯಾತ್ಮಿಕ ಚಿಂತಕರಾದ ಕೆ.ಹೆಚ್.ಎಮ್.ಚಿದಾನಂದ ಸ್ವಾಮಿ, ಹಾಗೂ ಆರಾಧ್ಯ ಮಠದ ಬಸವರಜಯ್ಯಸ್ವಾಮಿ ಯವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಚಿದಾನಂದ ಸ್ವಾಮಿಗಳು ಮಾತನಾಡಿದರು, ಸನಾತನ ಧರ್ಮ ಜಾಗೃತಿ ಸಮಾರಂಭ, ಹಾಗೂ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಜರುಗಲಿದೆ. ಪಟ್ಟಣದ ಶ್ರೀಪೇಟೆಬಸವೇಶ್ವರ ಸೇವಾ ಸಮಿತಿ, ಶ್ರೀಕೇದಾರ ಜಗದ್ಗುರುಗಳ ಉತ್ಸವ ಸಮಿತಿ ಹಾಗೂ ಕೂಡ್ಲಿಗಿ ಪಟ್ಟಣ ಮತ್ತು ತಾಲೂಕಿನ ಸದ್ಭಕ್ತವೃಂದ ದವರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದುರು. ಜ29ರಂದು ಭಾನುವಾರ ಸಂಜೆ 4ಗಂಟೆಗೆ ಶ್ರೀಪೇಟೆಬಸವೇಶ್ವರ ದೇವಸ್ಥಾನದಿಂದ, ಶ್ರೀಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಳ್ಳುತ್ತದೆ. ಧಾರ್ಮಿಕ ವಿಧಿ ವಿಧಾನದಂತೆ ಶ್ರೀಅಡ್ಧಪಲ್ಲಕ್ಕಿ ಮೆರವಣಿಗೆ, ಪಟ್ಟಣದ ಪ್ರಮುಖ ಬೀದಿಗಳ ಮುಖಂತರ ಸಂಚರಿಸಿದೆ ಎಂದರು. ಉತ್ಸವ ಪಟ್ಟಣದ ಪಂಚಾ ಚಾರ್ಯ ಮಂಗಲ ಮಂದಿರದವರೆಗೆ ತೆರಳುವುದು, ನಂತರ ಸಂಜೆ 6ಗಂಟೆಗೆ ಚಂದ್ರಶೇಖರ ಆಜಾದ್ ರಂಗಮಂದಿರ(ಮೇನ್ ಬಾಯ್ಸ್ ಸ್ಕೂಲ್)ದಲ್ಲಿ. ಸನಾತನ ಧರ್ಮ ಜಾಗೃತಿ ಸಮಾರಂಭ ಜರುಗುವುದು, ಇದೇ ಸಂದರ್ಭದಲ್ಲಿ ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುವುದು. ಜ30ರಂದು ಬೆಳಿಗ್ಗೆ 8 ಗಂಟೆಗೆ, ಪಂಚಾ ಚಾರ್ಯಮಂಗಲ ಮಂದಿರಲ್ಲಿ. ಶ್ರೀಜಗದ್ಗರುಗಳ ಸಾನಿಧ್ಯದಲ್ಲಿ, ಸಂಗೀತ ಸಮೇತ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದೆ. ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಳ್ಳಬಯಸುವ ಶಿವ ಭಕ್ತರು, ಕಡ್ಡಾಯವಾಗಿ ಶುಚಿರ್ಭೂತರಾಗಿ ಧಾರ್ಮಿಕ ಸಂಪ್ರದಾಯ ಬದ್ದ ಉಡುಗೆಯೊಂದಿಗೆ ಲಿಂಗ ಧಾರಣೆಯನ್ನ ಮಾಡಿರಲೇಬೇಕಿದೆ. ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸುವ ಶಿವಭಕ್ತರು, ಮುಂಚಿತವಾಗಿಯೇ ಸೇವಾ ಸಮಿತಿಯನ್ನ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬೇಕಿದೆ ಎಂದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕು ಹಾಗೂ ನೆರೆ ಹೊರೆ ತಾಲೂಕುಗಳ ಸಕಲ ಭಕ್ತರು, ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಶ್ರೀಜಗದ್ಗುರುಗಳ ದಿವ್ಯ ಆಶೀರ್ವಾದ ಪಡೆಯಬೇಕೆಂದು ಅವರು ಕೋರಿದರು. ಈ ಸಂದರ್ಭದಲ್ಲಿ ಶ್ರೀಪೇಟೆಬಸವೇಶ್ವರ ಸ್ವಾಮಿ ಸೇವಾ ಸಮಿತಿ ಮುಖಂಡರಾದ, ತುಪ್ಪಳ್ಳಿ ಮೂಗಜ್ಜ ಹಾಗೂ ಉಗ್ಗಿ ಬಸವರಾಜ. ಶ್ರೀಜಗದ್ಗುರು ಸ್ವಾಮಿಗಳ ಉತ್ಸವ ಸಮಿತಿಯ ನಾಗರಾಜ ಕೊಟ್ರಪ್ಪನವರ, ವೀರಶೈವ ಪ್ರಮುಖರಾದ ಕೋಗಳಿ ಮಂಜುನಾಥ ಉಪಸ್ಥಿತರಿದ್ದರು.

ವರದಿ.ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
