ಯುವಕರು ಸಮಯ ಪ್ರಜ್ಞೆ ಯಾಗ ಬೇಕು. ಮಂಜಮ್ಮ ಜೋಗತಿ
ಹ.ಬೊ.ಹಳ್ಳಿ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ 5ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅನ್ನ ದಾಸೋಹ, ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ವು ಪಟ್ಟಣದ ಕುರುದ ಗಡ್ಡಿ ಯ ಯುವಶಕ್ತಿಯ ವೇದಿಕೆಯಲ್ಲಿ ನೆರವೇರಿತು. ಈ ಕಾರ್ಯಕ್ರಮವನ್ನು , ಜಾನಪದ ಪದ್ಮಶ್ರೀ ಪ್ರಶಸ್ತಿ ವಿಜೇತೆ,ಮಂಜಮ್ಮ ಜೋಗತಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿ, ನಾನು ಎಲ್ಲೆಲ್ಲಿಯೂ ಸಮಾನತೆ ಕಂಡವಳು ನಾನು ಅದೇ ರೀತಿಯಾಗಿ ಬದುಕುತ್ತಿರುವಳು ನನಗೆ ಪದ್ಮಶ್ರೀ ಬಂದಿದೆ ಅಂತ ನನಗೇನು ಜಂಬವಿಲ್ಲ ಇದು ನಿಮ್ಮಂಥ ಅಭಿಮಾನಿಗಳು ಕೊಟ್ಟಂತ ಬಿರುದು, ನೀವು ಯುವಶಕ್ತಿಗಳು ಯುವಅಂದರೆ ಯುವ ಪಡೆ ಶಕ್ತಿ ಎಂದರೆ ಆದಿಶಕ್ತಿ, ನಿಮ್ಮ ಯುವ ಶಕ್ತಿಯು ಹೀಗೆ ಒಗ್ಗಟ್ಟಾಗಿರಬೇಕು.ಈ, ನಿಮ್ಮ ಒಗ್ಗಟ್ಟಿಗೆ ಆದ್ಯತೆ ಕೊಡಬೇಕು. ಇಲ್ಲಿ ಅಧ್ಯಕ್ಷ ,ಸದಸ್ಯ ,ಎಲ್ಲರೂ ಒಂದೇ ಇಲ್ಲಿ ದೊಡ್ಡವರು, ಚಿಕ್ಕವರು, ಅನ್ನೋ ಭೇದಭಾವ ಇಲ್ಲದೆ ಒಂದೇ ಒಗ್ಗಟ್ಟಾಗಿ ಕೆಲಸ ಮಾಡಿ, ನೀವು ಭಕ್ತಿಯಿಂದ ಶ್ರದ್ಧೆಯಿಂದ ಸಮಯ ಪಾಲಕರಾಗಬೇಕು. ಜೀವನದಲ್ಲಿ ನಾವು ಸಮಯಕ್ಕೆ ಗೌರವ ಕೊಡಬೇಕು. ನೀವೆಲ್ಲರೂ ಸಮಯ ಪ್ರಜ್ಞಾವಂತರಾಗಬೇಕು. ನೀವು ಏನೇ ಮಾಡ್ರಿ ,ಏನೇ ಬಿಡ್ರಿ,, ದೈವದತ್ತ ಗಮನ ಕೊಡಬೇಕು. ಸಣ್ಣ ಕಲ್ಲಿಗೆ ದೊಡ್ಡ ಕಲ್ಲಿಗೆ ಆಸರೆ, ದೊಡ್ಡ ಕಲ್ಲಿಗೆ ಸಣ್ಣ ಕಲ್ಲಿಗೆ ಆಸರೆ, ಅನ್ನುವ ಹಾಗೆ ಇಲ್ಲಿ ಸಣ್ಣವರು ದೊಡ್ಡವರು ಅಂತ ಯಾವುದೇ ಭೇದಭಾವ ಇಲ್ಲದೆ ಒಗ್ಗಟ್ಟಾಗಿ ದುಡಿಯಿರಿ, ನಮ್ಮಲ್ಲೂ ದೇವರಿದ್ದಾನೆ ನಿಮ್ಮಲ್ಲಿಯೂ ದೇವರಿದ್ದಾನೆ, ನಾವು ಮಾಡುವ ಕರ್ತವ್ಯದಲ್ಲಿ ದೇವರನ್ನು ಕಾಣಬೇಕು. ಒಬ್ಬೊಬ್ಬರಿ ಒಂದೊಂದು ಕಲೆ ಇದ್ದೇ ಇರುತ್ತದೆ. ಆ ಕಲೆಗೆ ಬೆಲೆ ಕೊಡಿ, ಎಲ್ಲರೂ ಕಲಾವಿದರಾಗಿ, ಜೊತೆಗೆ ಹವ್ಯಾಸಿ ಕಲಾವಿದರಾಗಿ, ಯಾರ ಮಾತಿಗೂ ಕಿವಿಗೊಡದೆ ಧೈರ್ಯವಾಗಿ ನಿಮ್ಮ ಕರ್ತವ್ಯದಲ್ಲಿ ಮುನ್ನುಗ್ಗಿ, ಭಕ್ತಿಯಿಂದ ಶ್ರದ್ಧೆಯಿಂದ ಮುನ್ನಡೆಯಿರಿ. ಮುಂದೆ ಹೋಗುವವರನ್ನು ಕಾಲು ಎಳೆಯುವವರು ಬಹಳ ಜನ ಇದ್ದಾರೆ ಆದರೆ ಅದಕ್ಕೆ ಅಂಜದೇ ಕುಗ್ಗದೆ, ನಿಮ್ಮ ನಿಮ್ಮ ಕರ್ತವ್ಯದ ಕಡೆ ಮನಸ್ಸು ಕೊಡಿ, ಎಂದು ಯುವಕರಿಗೆ ಹೇಳಿದರು. ನಾನು ನನ್ನ ಇಷ್ಟದಂತೆ ನೀವು ನಿಮ್ಮಿಷ್ಟದಂತೆ ಬದುಕು ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು. ಪುಣ್ಯ ಸ್ಮರಣಾರ್ಥವಾಗಿ ಅನ್ನದಾಸೋಹ ಕಾರ್ಯಕ್ರಮವು ಜರುಗಿತು. ಹಾಗೂ ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ). ಮಸಾರಿ ನೆಲ್ಲು ಕುದುರೆ,2. ರಂಗ ಭೂಮಿ ಕಲಾವಿದರಿಂದ,”” ಜನಪದ ಸಂಗೀತ ಕಾರ್ಯಕ್ರಮ” ನಡೆಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಚರಂತೆಶ್ವರ ಮಹಾಸ್ವಾಮಿಗಳು, ಪುಣ್ಯಕ್ಷೇತ್ರನಂದಿಪುರ , ಶ್ರೀ ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಹಾಲಸ್ವಾಮಿ ಮಠ ಹ.ಬೊ. ಹಳ್ಳಿ. ಜೋಗಿ ಹನುಮಂತಪ್ಪ, ಸದಸ್ಯರು ಪುರಸಭೆ 23ನೇ ವಾರ್ಡ್. ನಿರೂಪಣೆ ಜಿ ಕನಕ ಮೂರ್ತಿ, ಪ್ರ . ಕಾರ್ಯದರ್ಶಿ, ಸ್ವಾಗತ, ಪಿ ವಿಶ್ವನಾಥ, ಪ್ರಾಸ್ತಾವಿಕ ಭಾಷಣ, ಪಿ. ಸೋಮಪ್ಪ ಅಧ್ಯಕ್ಷರು ಯು.ಶ.ವೇ.(ರಿ,)ಹರೀಶ ಗೌರವಾಧ್ಯಕ್ಷರು, ಯುವಶಕ್ತಿ ವೇದಿಕೆ (ರಿ) . ಏ ಮಂಜುನಾಥ ಉಪಾಧ್ಯಕ್ಷರು. ಹೆಚ್. ಗಾಳಪ್ಪ., ಪರಶುರಾಮ, ರಾಜ, ಹುಲುಗಪ್ಪ, ಅಜ್ಜಪ್ಪ, ಲಕ್ಷ್ಮಣ, ರಾಜಭಕ್ಷಿ, ವಿನಯ್, ಪ್ರಕಾಶ್, ಹಾಗೂ ಯುವಶಕ್ತಿ ವೇದಿಕೆ (ರಿ). ಸದಸ್ಯರು ಹಾಗೂ ಪದಾಧಿಕಾರಿಗಳು, ಮತ್ತು ಕುರುದ ಗಡ್ಡೆಯ, ಹಿರಿಯರು, ಗಣ್ಯ ವ್ಯಕ್ತಿಗಳು, ಹಾಗೂ ಕುರುದಗಡ್ಡಿ, ಗ್ರಾಮದ ದೈವಸ್ಥರು, ಪಾಲ್ಗೊಂಡಿದ್ದರು,..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
