ಈ ಫೋಟೋದಲ್ಲಿ ಇದ್ದ ವ್ಯಕ್ತಿ ಸತೀಶ ಕೆಂಬಾವಿಮಠ ಅಂತ ಸಾಮಾಜಿಕ ಜಾಲ ತಾಣಗಳಲ್ಲಿ ತಾನೊಬ್ಬ ಹಿರಿಯ ರಾಜಕೀಯ ವ್ಯಕ್ತಿ ಮತ್ತು ಹಿರಿಯ ಮಾಜಿ ಮುಖ್ಯಮಂತ್ರಿಗಳ ಆಪ್ತ ಎಂದು ಹೇಳಿಕೊಂಡು ಅದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ಹಲವಾರು ರಾಜಕೀಯ ವ್ಯಕ್ತಿಗಳ ಜೊತೆ ಮತ್ತು ಮತ್ತು ಗಣ್ಯ ವ್ಯಕ್ತಿಗಳ ಹಿರಿಯ ಚಿತ್ರನಟರ ಜೊತೆ ಮತ್ತು ರಾಜ್ಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮಠದ ಸ್ವಾಮಿಗಳ ಜೊತೆ ಫೋಟೊ ಹಂಚಿಕೊಂಡು ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟು ತಾನೊಬ್ಬ ಗಣ್ಯ ವ್ಯಕ್ತಿ ಎನ್ನುವಂತೆ,

ಬಿಂಬಿಸಿ ಕೊಂಡು ರಾಜ್ಯದ ಕೆಲವು ಕಡೆ ಅಮಾಯಕ ಯುವಕರಿಗೆ ಅವರ ನಿರುದ್ಯೋಗ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡು ತನ್ನದೇ ಆದ ಒಂದು ವಂಚನೆಯ ನೆಟ್ ವರ್ಕ್ ಕಟ್ಟಿಕೊಂಡು ನಿರುದ್ಯೋಗಿ ಯುವಕರು ಇರುವ ಸ್ಥಳಗಳನ್ನು ಆಯ್ಕೆ ಮಾಡಿ ಈ ಎಲ್ಲಾ ಫೋಟೊ ತೋರಿಸಿ ತಾನೊಬ್ಬ ರಾಜಕೀಯ ಪ್ರಭಾವಿ ತಾನು ಹೇಳಿದಲ್ಲಿ ಎಲ್ಲಾ ಕೆಲಸ ನಡೆಯುತ್ತೆ ನಿಮಗೆ ಒಳ್ಳೆಯ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ನಂಬಿಸಿ ಬಣ್ಣದ ವಂಚನೆಯ.

ಮಾತು ಆಡಿ ಯಾಮಾರಿಸಿ ರಾಜ್ಯದಲ್ಲಿ ತುಂಬಾ ಜನರಿಗೆ ಮೋಸ ಮಾಡಿರುವ ಸಾದ್ಯತೆ ಇದೆ ಅದರಲ್ಲಿ ಆದರೆ ಯಾರು ದೂರು ಕೊಡಲು ಬರ್ತಾ ಇಲ್ಲಾ ಕಾರಣ ಈ ವ್ಯಕ್ತಿ ಮೇಲೆ ದೂರು ಕೊಟ್ಟರೆ ತನ್ನ ರಾಜಕೀಯ ಪ್ರಭಾವ ಬಳಸಿ ನಿಮ್ಮನ್ನೇ ಜೈಲ್ ಗೆ ಹಾಕಿಸ್ತಿನಿ ಅಂತ ಬೆದರಿಸಿದ ಮಾಹಿತಿ ಇದ್ದು ಅದರಲ್ಲಿ ನಮ್ಮ ಕೆಲ ಯುವಕರು ಇದ್ದು ಕೆಲವರು ಏನಾದ್ರೂ ಆಗಲಿ ಎಂದು ಹೋರಾಟಕ್ಕೆ ಮುಂದಾದ ಕಾರಣ ಇದೆ 23/01/23 ರಂದು ಮೋಸ ಹೋದ ಯುವಕರು ಈ ವ್ಯಕ್ತಿ ಮನೆಯ ಜ್ಞಾನ ಭಾರತಿ ವ್ಯಾಪ್ತಿಯ ರಾಮಸಂದ್ರ ದಲ್ಲಿ (ಬರುವ ಮಾಧ್ಯಮ ಮಿತ್ರರಿಗೆ ವಾಟ್ಸಾಪ್ ನಲ್ಲಿ ನಿಖರ ಸ್ಥಳ ಕಳುಹಿಸಿ ಕೊಡುತ್ತೇವೆ) ಈ ವ್ಯಕ್ತಿಯ ಮನೆ ಮುಂದೆ ಪ್ರೆಸ್ಸ್ ಮೀಟ್ ಕರೆಯಲಾಗಿದ್ದು ಮಾಧ್ಯಮಗಳ ಮೂಲಕ.

ಈತನ ಹಗರಣ ಬಯಲು ಮಾಡಿದಲ್ಲಿ ಈತನಿಂದ ಮೋಸ ಹೋದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರಬಹುದು ಮತ್ತು ರಾಜ್ಯ ಸರ್ಕಾರ ಮತ್ತು ಪೊಲಿಸ್ ಇಲಾಖೆ ಇಂತವರ ವೀರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನೊಂದವರಿಗೆ ನ್ಯಾಯ ಕೊಡಿಸುವ ಭರವಸೆಯಿಂದ ಪ್ರೆಸ್ ಮೀಟ್ ಕರೆಯಲಾಗಿದ್ದು ಮತ್ತು ನ್ಯಾಯ ಸಿಗುವವರೆಗೆ ಮೋಸ ಮಾಡಿ ಪಡೆದ ದುಡ್ಡು ಮರಳಿ ಕೊಡೋವರೆಗು ಈ ವ್ಯಕ್ತಿಯ ಮನೆ ಮುಂದೆ ಧರಣಿ ಕೂಡಲಾಗುವುದು ಇನ್ನುಳಿದ ಈತನ ಜೊತೆ ಶಾಮೀಲು ಇರುವ ವ್ಯಕ್ತಿಗಳು ಹೆಸರನ್ನು ಪ್ರೆಸ್ ಮೀಟ್ ನಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಲಾಗುವುದು.
ಮೋಸ ಹೋದವರ ವಿವರ ಮತ್ತು ದಾಖಲೆಗಳಿಗಾಗಿ ಸಂಪರ್ಕಿಸಿ ಮುಕ್ಕಣ್ಣ ಹುಲಿಗುಡ್ಡ ಮೊಬೈಲ್ ನಂಬರ್ 8197437777…

ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
