ಸುಲಭ ಜೀವನಶೈಲಿನೆ ಆರೋಗ್ಯದ ಸೂತ್ರ: ಬಸವಾನಂದ ಶ್ರೀ
ಮಹಾಲಿಂಗಪುರ ನಗರದ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸಿ ಎಮ್ ಹುರಕಡ್ಲಿ ಫೌಂಡೇಶನ್ ವತಿಯಿಂದ ಲಿಂ. ಶಾಂತವ್ವ ಮಹಾದೇವಪ್ಪ ಹುರಕಡ್ಲಿ ದಂಪತಿ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗುರುಬಸವ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳು ಪಂಚಭೂತಗಳ ಪ್ರಕೃತಿ ಚಿಕಿತ್ಸೆ ತಿಳಿಸಿದುರು. ಖ್ಯಾತ ಆಯುರ್ವೇದ ತಜ್ಞರಾದ ಡಾ॥ ಹಣಮಂತ ಮಳಲಿ ಮಾತನಾಡಿ ಆಯುರ್ವೇದ ಚಿಕಿತ್ಸೆ ತಿಳಿಸಿ ಉಚಿತವಾಗಿ ಐದು ಜನರಿಗೆ ಕ್ಯಾನ್ಸರ್ ಔಷಧ ನೀಡಿದರು. ಸಮಾರು 15 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತಿದ್ದು, ಸುಮಾರು ಇಪ್ಪತೈದು ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡನೆ ಮಾಡಲಾಯಿತು. ಉಚಿತ ನೇತ್ರ ತಪಾಸಣೆ, ಬಿಪಿ,ಶುಗರ್, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ವರದಿ. ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
