;

ಜಾನಪದ ಕಲೆಯನ್ನು ಪ್ರೋತ್ಸಾಹಿಸಬೇಕು ಎಂ ಸ್ವರೂಪಾನಂದ…!!!

ಜಾನಪದ ಕಲೆಯನ್ನು ಪ್ರೋತ್ಸಾಹಿಸಬೇಕು
ಎಂ ಸ್ವರೂಪಾನಂದ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಲಾ ಭಾರತಿ ಕಲಾ ಸಂಘ ರಿ. ಹಿರೇಹೆಗ್ಡಳ್ಇವರ ಸಂಯುಕ್ತ ಆಶ್ರಯದಲ್ಲಿ ಕಲಾಚೇತನ ಕಾರ್ಯಕ್ರಮ ಸರಣಿ ಕಾರ್ಯಕ್ರಮ ಎರಡನೇ ಸಂಚಿಕೆ ಈ ಸಂಚಿಕೆಯಲ್ಲಿ ಪಾಲ್ಗೊಂಡ ಕಲಾವಿದರು ಗುಡೆಕೋಟೆ ಭಜನಾ ಮಂಡಳಿ ಹಾಗೂ ಉಪನ್ಯಾಸ ನೀಡಿದ ಎಂ ಸ್ವರೂಪಾನಂದ ಪೊಲೀಸ್ ಇಲಾಖೆ ಉಪನ್ಯಾಸವನ್ನು ನೀಡಿದರು.
ನಂತರ ಮಾತನಾಡಿ ಆಧ್ಯಾತ್ಮಿಕ ಬಗ್ಗೆ ಈ ಒಂದು ಜಾನಪದ ಕಲೆ ನಶಿಸಿಹೋಗುವುದನ್ನು ತಡೆಗಟ್ಟುವ ಬಗ್ಗೆ ಜನಜಾಗೃತಿಯ ಬಗ್ಗೆ ಮೊಬೈಲ್ ಮತ್ತು ಟಿವಿ ಮುಖಾಂತರ ಮಾರುಹೋಗುವುದನ್ನು ನಿಲ್ಲಿಸಿ ಧಾರ್ಮಿಕ ಮತ್ತು ಜಾನಪದ ಕಲೆಗೆ ಮತ್ತು ಸಂಸ್ಕೃತಿಗೆ ಒತ್ತು ಕೊಡಬೇಕೆಂದು ನುಡಿದರು .

ಇದೇ ಸಂದರ್ಭದಲ್ಲಿ ಬಣಕಾರ್ ಮೂಗಪ್ಪ ಅಧ್ಯಕ್ಷರು ಕಲಾಭಾರತಿ ಕಲಾ ಸಂಘ ಹಿರೇ ಹೆಗ್ಡಾಳ್ ಇವರಿಗೆ ಕಲೆಯ ಬಗ್ಗೆ ಪ್ರೋತ್ಸಾಹಿಸುವಂತಹ ನಮ್ಮ ಕಲಾಚೇತನ ಇಂದಿಗೂ ಜೀವಂತವಾಗಿ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಎಲ್ಲರ ಸಹಕಾರದೊಂದಿಗೆ ನಡೆದಿದೆ ಎಂದು ತಿಳಿಸಿದರು.
ಮತ್ತು ಕಲಾವಿದರು ಕಲೆಯನ್ನು ಪ್ರದರ್ಶಿಸುವುದಲ್ಲದೆ ಕಲೆಯ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ. ಕಲಾವಿದರಿಗೆ 60 ವರ್ಷದ ನಂತರ ಸರ್ಕಾರದಿಂದ ಕಲಾವಿದರ ಮಾಶಾಸನವನ್ನು ಪಡೆಯಬಹುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಜನಾ ಕಲಾವಿದರು ಪಾಲ್ಗೊಂಡಿದ್ದರು. ಮತ್ತು ಊರಮ್ಮ ಭಜನಾ ಮಂಡಳಿ ಯವರು ಸಹಕಾರದೊಂದಿಗೆ ಗುಡೆಕೋಟೆ ಕಲಾವಿದರಾದ ಬಸವೇಶ್ವರ. ಹುಲಿ ರಾಜಣ್ಣ. ತಿಪ್ಪೇಸ್ವಾಮಿ ಚಂದ್ರು ಪಾಲಣ್ಣ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು, ಇತರರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;