ಸಕಾರಾತ್ಮಕ ಚಿಂತನೆಯಿಂದ ಮನಸ್ಸಿಗೆ ಚೈತನ್ಯ!! ಕೂಡ್ಲಿಗಿ: ಮನಸ್ಸು ಸದೃಢವಾಗಿದ್ದರೆ ದೇಹವು ಸದೃಢವಾಗಿರುತ್ತದೆ ಎಂದು ಮನೋರೋಗ ತಜ್ಞ ಡಾ. ರವಿಕಿರಣ್ ಕಬ್ಬೂರ್ ಹೇಳಿದರು. ಪಟ್ಟಣದ ಜೆಸಿಐ ಗೋಲ್ಡನ್ ಬಳಗದ ಹಾಗೂ ಹುತಾತ್ಮರ ಸ್ಮಾರಕ ಸಮಿತಿಯು ಹುತಾತ್ಮರ ಭವನದಲ್ಲಿ ಆಯೋಜಿಸಿದ್ದ ಚಿಂತನ ಚೇತನ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಚಿಂತೆಗಳ ಗೂಡಾಗಿರುವ ಮನಸ್ಸಿಗೆ ಚೈತನ್ಯ ಚೇತನವಾಗಬೇಕಾದರೆ ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು. ಮನಸ್ಸು ಕುಗ್ಗಿ ಹೋದರೆ ಏನೂ ಮಾಡಲಾಗದು, ಆತ್ಮಹತ್ಯೆ ಕಠೋರ ನಿರ್ಧಾರಗಳಿಗೆ ಮನುಷ್ಯ ಬಲಿಯಾಗಿರುವ ಜ್ವಲಂತ ಉದಾಹರಣೆಗಳಿವೆ ಆದ್ದರಿಂದ ಇದ್ದುದರಲ್ಲಿ ಸಂತೋಷವಾಗಿ, ಹಸನ್ಮುಖಿಗಳಾಗಿ ನಗುನಗುತ ವರ್ತಿಸಬೇಕು ಎಂದು ಸಲಹೆ ನೀಡಿದರು. ಕೊರಗದಿರಿ, ಭಯಗ್ರಸ್ಥರಾಗದಿರಿ, ಮುಂದೇನಾಗುವುದೋ ಎಂಬುದನ್ನು ತೊಡೆದುಹಾಕಿ ಇಂದಿನ ಬಗ್ಗೆ ಯೋಚಿಸಿ ಮುಂದೆ ಇಡಿ ಅದು ಒಳಿತಾಗಲಿ ಕೆಡುಕಾಗಲಿ ಅತಿಯಾದ ಯೋಚನೆಯಿಂದ ಭಾವನೆಗಳನ್ನು ತೀವ್ರಗೊಳಿಸಿ ಖಿನ್ನತೆಗೆ ಜಾರದಿರಿ ಎಂದು ಎಚ್ಚರಿಸಿದರು. ಜೆ ಸಿ ಐ ಗೋಲ್ಡನ್ ಬಳಗದ ಕೊಟ್ರಪ್ಪನವರ ನಾಗರಾಜ್, ಜಿಲಾನ್, ರಿಜ್ವಾನ್, ಐಲಿ ರವಿ, ಡಾ.ಗುರುರಾಜ, ಸ್ಮಾರಕ ಸಮಿತಿಯ ಡಿ.ನಾಗರಾಜ ಅನೇಕರಿದ್ದರು..

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
