ಶ್ರೀ ಮಲ್ಲಿಯಮ್ಮ ದೇವಿಯ ಪಟ ಹರಾಜು ₹ 2,30,000 ಕ್ಕೆ ತನ್ನದಾಗಿಸಿಕೊಂಡ ಗೌಡ್ರು ಪಾಲಯ್ಯ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಹೋಬನಹಳ್ಳಿ ಹಾಗೂ ವ್ಯಾಸರಹಟ್ಟಿ ಗ್ರಾಮದಲ್ಲಿ ಶ್ರೀ ಮಲೆಯಮ್ಮ ದೇವಿ ಜಾತ್ರೆ ಕಾರ್ಯಕ್ರಮವು ದಿನಾಂಕ : 10-01-2023 ಮಂಗಳವಾರ ರಾತ್ರಿ ಶ್ರೀ ಮಲಿಯಮ್ಮ ದೇವಿಯನ್ನು ಸೆಟ್ಟಿನ ಮೇಲೆ ಅಲಂಕರಿಸಿ.

ಜುಮ್ಮೋಬನಹಳ್ಳಿ ಹಾಗೂ ಮ್ಯಾಸರಹಟ್ಟಿ ಗ್ರಾಮದ. ಎಲ್ಲಾ ವಾರ್ಡ್ ಗಳಲ್ಲಿ ಮೆರವಣಿಗೆಯ ಮುಖಾಂತರ ವಿಜೃಂಭಣೆಯಿಂದ ದೇವಿಯನ್ನು ಗುಡಿ ತುಂಬಿಸಲಾಯಿತು ನಂತರ ಬುಧವಾರ ದೇವಿಯ ಹರಕೆಯನ್ನು ಬಾಯಿ ಬೀಗ ಹಾಕಿ ಅರಕೆಯನ್ನು ಭಕ್ತಾದಿಗಳು ನೆರವೇರಿಸಿದರು ನಂತರ ಗುರುವಾರ ಸಂಜೆ . ದೇವಿಯ ದೇವಸ್ಥಾನದ ಆವರಣದಲ್ಲಿ ಗಾವ್ ಕಾರ್ಯಕ್ರಮವನ್ನು ನೆರವೇರಿಸಲಾಯಿತು ನಂತರ ಶುಕ್ರವಾರ ಬೆಳಗ್ಗೆ ಶ್ರೀ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ಮಲಿಯಮ್ಮ ದೇವಿಯ ಪಟ ಹಾಗೂ ಹೂವಿನ ಹಾರ ಹರೆಜು ನಡೆಯಿತು ಶ್ರೀ ಮಲಿಯಮ್ಮ ದೇವಿಯ ಪಟವನ್ನು ಜುಮ್ಮೋಬನಹಳ್ಳಿ. ಗ್ರಾಮದ ಗೌಡ್ರು ಪಾಲಯ್ಯ.2.3.0.000 ರೂಗಳಿಗೆ ಪಟವನ್ನು ಪಡೆದುಕೊಂಡರು. ಈ ಹಿಂದೆ ನಡುಗೆಡ್ಡೆ ಬೋರಯ್ಯ. ರವರು 1.30.000 ರೂಗಳಿಗೆ ಪಡೆದುಕೊಂಡಿದ್ದರು ಇಂದಿನ ವರ್ಷಕ್ಕಿಂತ ಅತಿ ಹೆಚ್ಚು ದರದಲ್ಲಿ ಪಟ ಹೋಗಿದ್ದು ಭಕ್ತಾದಿಗಳಲ್ಲಿ ಮಂದಹಾಸ ಉಂಟಾಗಿದೆ ನಂತರ. ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರೆ ಮಹೋತ್ಸವವನ್ನು ಯಶಸ್ವಿಗಳಿಸಿದರು ಈ . ಸಂದರ್ಭದಲ್ಲಿ. ಜುಮ್ಮೋಬನಹಳ್ಳಿ ಹಾಗೂ ಮ್ಯಾಸರಹಟ್ಟಿ ಗ್ರಾಮದ ಗ್ರಾಮಸ್ಥರು ಅಕ್ಕ ಪಕ್ಕ ಹಳ್ಳಿಯ ಎಲ್ಲಾ ಭಕ್ತಾದಿಗಳು ಇದ್ದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
