;

ಕಾಲೇಜು ವಿಧ್ಯಾರ್ಥಿಗಳಿಂದ ಸಂಕ್ರಾಂತಿ ಉತ್ಸವ…!!!

ಕಾಲೇಜು ವಿಧ್ಯಾರ್ಥಿಗಳಿಂದ ಸಂಕ್ರಾಂತಿ ಉತ್ಸವ

ಮಹಾಲಿಂಗಪುರ ಸಮೀಪದ ರನ್ನ ಬೆಳಗಲಿಯ ಮಹಾಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿಧ್ಯಾರ್ಥಿಗಳು ಭಾರತದ ಡೊಡ್ಡ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಮಣದ ಪ್ರಯುಕ್ತವಾಗಿ ಸಂಕ್ರಾಂತಿ ಉತ್ಸವ ಮಾಡಿ ಸಂಭ್ರಮಿಸಿದರು. ಕರೋನಾ ಮಹಾಮಾರಿಯಿಂದ ಸಾಮಾನ್ಯವಾಗಿ ಆಚರಿಸುತ್ತಿದ್ದ ಸಂಭ್ರಮಚಾರಣೆಯನ್ನು ಈ ವರ್ಷ ಕಾಲೇಜಿನಲ್ಲಿ ವಿಜೃಂಭಣೆಯಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಭಾರತ ಅತೀ ಹೆಚ್ಚು ಹಳ್ಳಿಗಳನ್ನು ಒಳಗೊಂಡು ಕೃಷಿ ಆಧಾರಿತ ಸಮೃದ್ಧ ರಾಷ್ಟ್ರವಾಗಿದ್ದು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಿಕೆಗೊಳಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಹಳ್ಳಿಯ ಸೊಗಡು ಕೃಷಿಕ ಜನತೆ ರೊಟ್ಟಿ ಬುತ್ತಿ ಕಿಚಡಿಯ ಗಡಿಗೆ ಕಟ್ಟಿಕೊಂಡು ಬಂದಿದ್ದು ಭಾರತೀಯತೆಯ ಶ್ರೀಮಂತಿಕೆ ತೋರಿಸುತ್ತದೆ. ಕಳೆದ ಡೆಸೆಂಬರ್ 31 ಮಧ್ಯೆ ರಾತ್ರಿ ಹೊಸ ವರ್ಷದ ಆಗಮನ ಎಂದು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಯುವ ಜನತೆಯ ವರ್ತನೆ ನಾವೆಲ್ಲ ನೋಡಿದ್ದು ಸಾಮಾನ್ಯ ಇದರ ಮಧ್ಯೆ ಪರಿಪೂರ್ಣವಾಗಿ ದೇಶಿಯ ಸಂಸ್ಕೃತಿಯನ್ನು ಎತ್ತಿ ಹಿಡಿದಂತೆ ಕಾಲೇಜಿನ ವಿಧ್ಯಾರ್ಥಿನಿಯರು ಇಳಕಲ್ ಸೀರೆ ಕುಬಸದ ಕಣ ಧರಸಿ ಗಮನ ಸೆಳೆದರೆ ವಿಧ್ಯಾರ್ಥಿಗಳು ಬಿಳಿ ಪಂಚೆ ಅಂಗಿ ತೋಟ್ಟಿದ್ದು ಆಕರ್ಷಣೆಯಾಗಿತ್ತು. ಹಲವಾರು ಕಲಾ ತಂಡಗಳಾಗಿ ವಿವಿಧ ವಾದ್ಯಗಳೊಂದೆಗೆ ಸಂಪ್ರದಾಯಕ ಡೊಳ್ಳು,ಜಾಂಜ ಸ್ವತಃ ತಾವೆ ನುಡಿಸಿ ಎತ್ತಿನ ಬಂಡಿಗಳಲ್ಲಿ ಮೆರವಣಿಗೆ ಮಾಡಿ ಜನರಲ್ಲಿ ಭಾರತೀಯ ಸಂಸ್ಕೃತಿಯನ್ನು ಮರುಕಳಿಸಿದರು. ಸಂಕ್ರಾಂತಿ ಉತ್ಸವ ಯಾತ್ರೆ ಬೆಳಗಲಿ ಪಟ್ಟದ ಪ್ರಮುಖ ಬೀದಿಗಳಲ್ಲಿ ಹಾದು ಮಧ್ಯಾಹ್ನ ಸುಮಾರಿಗೆ ಎಸ್ ಜಿ ಎಮ್ ಬಿವಿಎಸ್ ಕಾಲೇಜು ಆವರಣ ತಲುಪಿತು. ಕಾಲೇಜಿನ ವಿಧ್ಯಾರ್ಥಿಗಳು ಸುಮಾರು 280 ಬಗೆಯ ವಿಧ ವಿಧವಾದ ಆಹಾರ ಪದಾರ್ಥಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಬೆಳಗಲಿಯ ಗ್ರಾಮದ ಜನತೆಗೆ ತಾವು ತಯಾರಿಸಿದ ಆಹಾರ ಖಾಧ್ಯಗಳನ್ನು ಉಣಬಡಿಸಿದರು.


ವರದಿ.ಬಸವರಾಜ ನಂದೆಪ್ಪನವರ ಬೆಳಗಲಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;