;

ನವೋದ್ಯಮಕ್ಕೆ ದೇಶದಲ್ಲಿ ವಿಪುಲ ಅವಕಾಶ: ಪ್ರೊ.ಸಿದ್ದು.ಪಿ ಅಲಗೂರ…!!!

ನವೋದ್ಯಮಕ್ಕೆ ದೇಶದಲ್ಲಿ ವಿಪುಲ ಅವಕಾಶ: ಪ್ರೊ.ಸಿದ್ದು.ಪಿ ಅಲಗೂರ
ಬಳ್ಳಾರಿ,: ನಮ್ಮ ದೇಶದಲ್ಲಿ ನವೋದ್ಯಮ ಹಾಗೂ ನವ ಭಾರತ ನಿರ್ಮಾಣಕ್ಕೆ ವಿಪುಲ ಅವಕಾಶಗಳಿವೆ ಎಂದು ಕುಲಪತಿಗಳಾದ ಪ್ರೊ.ಸಿದ್ದು.ಪಿ ಆಲಗೂರ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಇನ್‍ಸ್ಟಿಟ್ಯೂಟ್ ಆಫ್ ಸೆಕ್ರೆಟರಿಸ್ ಆಫ್ ಇಂಡಿಯಾ ಬೆಂಗಳೂರು ಇವರ ಸಹಯೋಗದಲ್ಲಿ ‘ನವೋದ್ಯಮ-ನವಭಾರತ’ ಎಂಬ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಧೀನದ ಉಪನ್ಯಾಸಕರುಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಆರ್ಥಿಕತೆಯು ಕಳೆದ ಐದು ವರ್ಷಗಳಲ್ಲಿ ಶೇ.24 ಪ್ರತಿಶತ ನವೋದ್ಯಮವನ್ನು ಹೆಚ್ಚಿಸಿದೆ. ಸಮೀಕ್ಷೆಯೊಂದರ ಪ್ರಕಾರ 2016 ರಲ್ಲಿ 471 ನವೋದ್ಯಮಿಗಳಿದ್ದರು, ಇದು ಕಳೆದ ವರ್ಷದಲ್ಲಿ 20,160 ಸಂಖ್ಯೆಗೆ ಹೆಚ್ಚಿತ್ತು. ಪ್ರಸ್ತುತ ದೇಶದಲ್ಲಿ 90,500 ನವೋದ್ಯಮಿಗಳಿದ್ದು ಇದು ನವಭಾರತ ನಿರ್ಮಾಣದ ಪೂರಕ ಅಂಶವಾಗಿದೆ ಎಂದರು.


ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‍ಐ) ಬೆಂಗಳೂರು ವಲಯದ ಮುಖ್ಯಸ್ಥರಾದ ಸಿ.ಎಸ್.ನಮನ ಜೋಶಿ ಮಾತನಾಡಿ, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗೆ ಚಿನ್ನದ ಪದಕ, ಪ್ರಮಾಣ ಪತ್ರ, ವಿಭಾಗದ ಸಿಬ್ಬಂದಿಗೆ ವಿವಿಧ ತರಬೇತಿ ಕಾರ್ಯಕ್ರಮಗಳ ಆಯೋಜನೆ ಮತ್ತು ಆಧುನಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಸೇರಿದಂತೆ ಇನ್ನಿತರ ಶೈಕ್ಷಣಿಕ ಸಂಬಂಧಿತ ಕಾರ್ಯಕ್ರಮಗಳಿಗೆ ಉತ್ತೇಜಿಸುವುದು ಮುಖ್ಯ ಉದ್ದೇಶಗಳಾಗಿವೆ ಎಂದು ಹೇಳಿದರು.


(ಐಸಿಎಸ್‍ಐ) ಮಾಜಿ ಅಧ್ಯಕ್ಷರಾದ ಸಿ.ಎಸ್.ಕನ್ನನ್ ಮಾತನಾಡಿ, ವಾಣಿಜ್ಯ ಅಧ್ಯಯನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಕಂಪನಿ ಕಾರ್ಯದರ್ಶಿಗಳಾಗಿ ತರಬೇತಿ ನೀಡುವುದು, ವಿಭಾಗದ ಬೋಧಕ ಸಿಬ್ಬಂದಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಐಸಿಎಸ್‍ಐ ಸಂಸ್ಥೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಜೀಲನ್ ಬಾಷಾ ಅವರಿಗೆ ಐಸಿಎಸ್‍ಐ ನೆನೆಪಿನ ಕಾಣಿಕೆ ನೀಡಿ ಗೌರವಿಸಿತು. ಕಾರ್ಯಕ್ರಮದಲ್ಲಿ ಪ್ರೊ.ಭೀಮನಗೌಡ, ಸಿಡಿಸಿ ನಿರ್ದೇಶಕರಾದ ಡಾ.ಕೆ.ಸಿ.ಪ್ರಶಾಂತ, ಡಾ.ಸಿದ್ದಪ್ಪ ಮತ್ತು ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳು ಹಾಜರಿದ್ದರು.
ವಿಶ್ವವಿದ್ಯಾಲಯದ ಅಧೀನದ ಸಂಯೋಜಿತ ಕಾಲೇಜುಗಳ 60 ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು, ಸಂಶೋಧನಾ ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವರದಿ. ಉಮೇಶ್ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;