;

ಕಲಾವಿದರ ಒತ್ತಾಸೆ ಮೇರೆಗೆ ಜಾನಪದ ಕಲೋತ್ಸವ 2023 ಕಾರ್ಯಕ್ರಮ!!!!

ಕಲಾವಿದರ ಒತ್ತಾಸೆ ಮೇರೆಗೆ ಜಾನಪದ ಕಲೋತ್ಸವ 2023 ಕಾರ್ಯಕ್ರಮ!!!! ಕೂಡ್ಲಿಗಿ: ದಿನಾಂಕ 8-1-23 ರಂದು ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ನಡೆದ ಜಾನಪದ ಕಲೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮವನ್ನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಮನೂರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀ ವೀರೇಶ ಪ್ರಸಾದ್ ಉದ್ಘಾಟನೆ ನೆರವೇರಿಸಿದರು ಹಾಗೂ ಅಧ್ಯಕ್ಷತೆಯನ್ನು ವಹಿಸಿದ್ದ ಯಮನೂರಪ್ಪಕ್ಕೆ ಇವರು ವಾದ್ಯಗೋಷ್ಠಿಗಳನ್ನು ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷರು ಮಾತನಾಡಿ ತಾಲೂಕಿನ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಯಮನೂರಪ್ಪ ಕೆ ಅವರ ಶ್ಲಾಘನೀಯವಾದದ್ದು ಎಂದು ತಿಳಿಸಿದರು ನಂತರ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಯಮನೂರಪ್ಪ ಕೆ ಇವರು ನಾನು ಒಬ್ಬ ರೈತನ ಮಗ ನನಗೆ ಸಮಾಜ ಸೇವೆ ಮಾಡಬೇಕೆಂಬ ಉದ್ದೇಶದಿಂದಲೇ ರಾಜಕೀಯಕ್ಕೆ ಧುಮುಕಿದ್ದೇನೆ ಅದಕ್ಕಾಗಿ ಈ ತಾಲೂಕಿನಲ್ಲಿ ಹೆಚ್ಚು ಕಲಾವಿದರನ್ನು ಹೊಂದಿರುವ ಕ್ಷೇತ್ರವಾದ್ದರಿಂದ ಇಲ್ಲಿಯೇ ಸ್ಪರ್ಧೆ ಮಾಡುತ್ತಿದ್ದೇನೆ ನಾನು ಕಲಾವಿದರ ಅಭಿಮಾನಿ ಅದಕ್ಕಾಗಿ ಈ ಬಾರಿ ನನ್ನನ್ನು ಬೆಂಬಲಿಸಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಲಾವಿದರ ವಿಜಯನಗರ ಜಿಲ್ಲಾ ಅಧ್ಯಕ್ಷ ಆರ್.ಬಿ. ನಿಂಗಪ್ಪ, ಸಮಾಜ ಸೇವಕರಾದ ಸಂತೋಷ್ ಕುಮಾರ್, ನವೀನ್ ಕುಮಾರ್,ಅಶ್ವಿನ್ ಕುಮಾರ್, ಬಿ.ಎಸ್ ಪ್ರಶಾಂತ್ ಗೌಡ, ಬಿ ಎಚ್ ಬಸವರಾಜ್, ಕನ್ನಾರು ಚಂದ್ರಣ್ಣ, ಸಿ.ಬಿ ನಾಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಣ್ಣ, ಸದಸ್ಯರಾದ ವೀರೇಶ್, ತಿಪ್ಪೇಸ್ವಾಮಿ, ತಾಲೂಕಿನ ಕಲಾವಿದರು ಹುರಳಿಹಾಳ್ ಗ್ರಾಮದವರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;