ಕೃಷಿ ಮಾರುಕಟ್ಟೆ ಕಛೇರಿ ಆವರಣದ ಮರಗಳ ಕಡಿದು ಪರಿಸರಕ್ಕೆ ಹಾನಿ

ಮಹಾಲಿಂಗಪುರದ ಸ್ಥಳೀಯ ಅಂತರ ರಾಜ್ಯ ಮಟ್ಟದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಕಛೇರಿ ಆವರಣದ ಮರಗಳ ಮಾರಣ ಹೋಮ ಮಾಡಿರುವುದು ಕಂಡು ಬಂದಿದೆ. ಕೃಷಿ ಮಾರುಕಟ್ಟೆ ಮುಖ್ಯ ಕಚೇರಿ ಆವರಣದಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತಿದ್ದ ಬೃಹತ್ ಗಾತ್ರದ ಮರಗಳನ್ನು ಕಡೆದು ಸಾ.ಮಿಲ್ ಉದ್ಯಮಕ್ಕೆ ಮಾರಾಟ ಮಾಡಿ ಪರಿಸರಕ್ಕೆ ಹಾನಿ ತಂದಿರುವುದು ವಿಪರ್ಯಾಸವಾಗಿದೆ. ಒಂದೆಡೆ ಸರ್ಕಾರ ಮರಗಳನ್ನು ಉಳಿಸಿ ಪರಿಸರ ಸಂರಕ್ಷಿಸಿ ಎಂದು ಹೇಳುದರ ಮಧ್ಯೆ ಇನ್ನೊಂದೆಡೆ ಅದೇ ಸರ್ಕಾರಕ್ಕೆ ಒಳಪಡುವ ಕಛೇರಿಯಲ್ಲಿನ ಮರಗಳನ್ನು ಕಡಿದು ಆವರಣ ಸಂಪೂರ್ಣ ಬಯಲು ಮಾಡಲಾಗಿದೆ. ಪಕ್ಕದಲ್ಲೆ ಇರುವ ಜಾನುವಾರುಗಳ ಮಾರುಕಟ್ಟೆ ಕೂಡಾ ಸರಿಯಾದ ಸೌಲಭ್ಯಗಳು ಇಲ್ಲದೆ ಬಿಕೋ ಎನ್ನುತ್ತಿರುವುದು ವಿಷಾದನೀಯ. ಮರಗಳನ್ನು ಕಡಿಯಲು ಅನುಮತಿ ನೀಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ವರದಿ.
ಬಸವರಾಜ ನಂದೆಪ್ಪನವರ ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
