;

ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ಪೀರ್ ತಂಡದ ಭೇಟಿ ಹಗರಿಬೊಮ್ಮನ ಹಳ್ಳಿ:..!!!

ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ಪೀರ್ ತಂಡದ ಭೇಟಿ
ಹಗರಿಬೊಮ್ಮನ ಹಳ್ಳಿ:
ಸ್ಥಳೀಯ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜಿಗೆ ಡಾ.ನೀಲಮಣಿ ಪ್ರಸಾದ್ ವರ್ಮ ನೇತೃ ತ್ವದ ದೆಹಲಿಯ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಕಮಿಟಿಯ ತಂಡ ಗುರುವಾರ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮೌಲ್ಯಮಾಪನ ಪರಿಶೀಲಿಸಿದರು.

ಡಾ ಎಸ್ ಎಂ. ಕೆ.ಖಾದ್ರಿ , ಡಾ. ಆಶೋಕ್ ಬಾಬರ್. ಸದಸ್ಯರನ್ನು ಒಳಗೊಂಡ ತಂಡ ಕಾಲೇಜಿನ ವಿವಿಧ ವಿಭಾಗಗಳ ಶೈಕ್ಷಣಿಕ ಗುಣಮಟ್ಟದ ಕುರಿತು ದಾಖಲೆಗಳ‌ ಪರಿಶೀಲನೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗದ ಪ್ರಗತಿಯ ಕುರಿತು ಮಾಹಿತಿ ಪಡೆದರು. ಕಾಲೇಜಿನ ಅಭಿವೃದ್ಧಿ, ಶೈಕ್ಷಣಿಕ ಪ್ರಕ್ರಿಯೆಗಳು, ಫಲಿತಾಂಶ, ಬೋಧನೆ, ಕಲಿಕಾ ಸಾಮಗ್ರಿ, ಮಹಾವಿದ್ಯಾಲಯದ ಮೂಲ ಸೌಕರ್ಯ, ಕಲಿಕಾ ಸಂಪನ್ಮೂಲಗಳು, ಸಂಘಟನೆ, ಆಡಳಿತ, ವಿದ್ಯಾರ್ಥಿಗಳ ಕುರಿತು ಮಾಹಿತಿ ಕಾಲೇಜಿನ ಮೂಲಸೌಕರ್ಯಗಳು,ಬೋಧಕೇತರ ಕಾರ್ಯವೈಖರಿ,ತರಗತಿಗಳ ಅವಲೋಕನ, ಹಳೇ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಶೋಧನೆ,ಗಣಕ ವಿಜ್ಞಾನ, ವಿಜ್ಞಾನ ವಿಭಾಗ, ಇತಿಹಾಸ ವಿಭಾಗದ ವಸ್ತುಸಂಗ್ರಹಾಲಯ, ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮುಂತಾದ ವಿಭಾಗಗಳಿಗೆ, ಅವಲೋಕಿಸಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡದಲ್ಲಿದ್ದ ನ್ಯಾಕ್‌ ಪೀರ್‌ ಕಮಿಟಿ ಅಧ್ಯಕ್ಷ ಡಾ.ನೀಲಮಣಿ ಪ್ರಸಾದ್ ವರ್ಮ
ಅವರು ಮಾತನಾಡಿ ಕಾಲೇಜಿನ ಸಿಬ್ಬಂದಿಗೆ, ಕಾಲೇಜು ವಿಶಾಲ ಆವರಣ ಹೊಂದಿದೆ.ಅತ್ಯುತ್ತಮವಾದ ಸೌಲಭ್ಯಗಳನ್ನು ಹೊಂದಿದ್ದು ಕಲಿಕೆಗೆ ಸರ್ಕಾರಿ ಪದವಿಕಾಲೇಜು ಪೂರಕವಾಗಿದೆ ” ಎಂದರು .
ನಂತರ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿ‌ ಅಭಿಪ್ರಾಯ ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಾಲೇಜಿನ ನ್ಯಾಕ್ ಕಮಿಟಿಯ ಕೋಅಡಿನೇಟರ್, ಡಾ.ತಿಪ್ಪೇಸ್ವಾಮಿ. ಪ್ರಾಂಶುಪಾಲರಾದ ಡಾ. ಕೆ.ವೆಂಕಟೇಶ.
, ಡಾ.ಸತೀಶ್ ಪಾಟೀಲ್, ಡಾ.ಗುರುರಾಜ್ , ವೀರೇಶ್ ಬಡಿಗೇರ. ಡಾ.ಗುರು ಪ್ರಸಾದ್‌ H.S, ಡಾ.ವಿಜಯಲಕ್ಷ್ಮಿಡಾ.ಬುಳ್ಳಪ್ಪ ರಾಜಲಿಂಗಪ್ಪ, ಮುಂತಾದ ಕಾಲೇಜಿನ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಾದ,ಎಂ. ಶಿವಮೂರ್ತಿ, ಎಲ್ ಶಿವಕುಮಾರ್ ನಾಯಕ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲಕರು, ಇದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;