;

ಇಟ್ಟಿಗಿ ಗ್ರಾ.ಪಂ.ಕೂಲಿಕಾರ್ಮಿಕ ರಿಂದ ಉದ್ಯೋಗ ಖಾತ್ರಿ ಯೋಜನೆ 16ನೇ ವರ್ಷದ ಹೊಸ ವರ್ಷದ ಸಂಭ್ರಮಾಚರಣೆ…!!!

ಇಟ್ಟಿಗಿ ಗ್ರಾ.ಪಂ.ಕೂಲಿಕಾರ್ಮಿಕ ರಿಂದ ಉದ್ಯೋಗ ಖಾತ್ರಿ ಯೋಜನೆ 16ನೇ ವರ್ಷದ ಹೊಸ ವರ್ಷದ ಸಂಭ್ರಮಾಚರಣೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾ.ಪಂ.ಕೂಲಿಕಾರ್ಮಿಕ ರಿಂದ ಉದ್ಯೋಗ ಖಾತ್ರಿ ಯೋಜನೆ 16ನೇ ವರ್ಷದ ಹೊಸವರ್ಷದ ಕೇಕ್ ನ್ನು ಹಿರಿಯ ಕೂಲಿ ಕಾರ್ಮಿಕರಿಂದ ಕಟ್ ಮಾಡುವುದರೊಂದಿಗೆ ಆಚರಿಸಲಾಯಿತು.ಇಟ್ಟಿಗಿ ಗ್ರಾಮದ ಕೊಟ್ರೇಶಪ್ಪನ ಹೊಲದ ಹತ್ತಿರದ ಚೆಕ್ ಡ್ಯಾಮ್ ನಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಆಹ್ವಾನಿಸಿದ್ದ ಗ್ರಾ ಪಂ ಸದಸ್ಯರಾದ ಶ್ರೀ ರುದ್ರಚಾರಿ ಯವರು, ಕ್ಲರ್ಕ್ ಕಂ ಡಿ ಇ ಒ ಪ್ರಕಾಶ್ ರವರು ಕಾಯಕಮಿತ್ರರಾದ ಶ್ರೀಮತಿ ಶಾಂತಮ್ಮ, ರಾಯಭಾರಿ ಟಿಪ್ಪುಸುಲ್ತಾನ್ ಎಲ್ಲಾ ಕಾಯಕಬಂಧುಗಳ ಹಾಗೂ ಎಲ್ಲಾ ಕೂಲಿಕಾರ್ಮಿಕರ ಸಮ್ಮುಖದಲ್ಲಿ ಆಚರಣೆ ಮಾಡಲಾಯಿತು. ಸಂಭ್ರಮಾಚಾರಣೆಯನ್ನುದ್ದೇಶಿಸಿ ಡಿ ಇ ಒ ಪ್ರಕಾಶ್ ರವರು ಯೋಜನೆಗೆ 16ನೇ ವರ್ಷ ತುಂಬಿರುವುದನ್ನು ಇಲ್ಲಿ ಆಯೋಜನೆ ಮಾಡಿರುವ ನಿಮ್ಮಿಂದ ತಿಳಿದಾಗ ತುಂಬಾ ಸಂತೋಷದ ಜೊತೆ ಆಶ್ಚರ್ಯ ಆಯ್ತು… ಏನೇ ಆಗ್ಲಿ ನೀವೆಲ್ಲರೂ ಯೋಜನೆಯೊಂದಿಗೆ ಇರುವುದು ಮತ್ತು ಯೋಜನೆಯ ಕಾಮಗಾರಿಯಲ್ಲಾಗುವ ಹಲವಾರು ತಾಂತ್ರಿಕ ಬದಲಾವಣೆ ಯಲ್ಲಿ ಸಕ್ರಿಯವಾಗಿ ತಾವೆಲ್ಲರೂ ತೊಡಗಿಸಿಕೊಂಡಿರುವಿರಿ.

ಯೋಜನೆಯೊಂದಿಗೆ ಸಹಕರಿಸುತ್ತ ಕೆಲಸ ನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ತುಂಬಾ ಸಂತೋಷ ತಂದಿದೆ,,,,, ಸದಾ ನಿಮ್ಮ ಕಾರ್ಯ ಶೀಲತೆಯಲ್ಲಿ ಇಂಥ ವಿಶೇಷ ಆಚರಣೆಯನ್ನು ಮಾಡುವುದರಿಂದ ನಿಮ್ಮಲ್ಲಿರುವ ನರೇಗಾ ಯೋಜನೆಗೆ ನೀವು ನೀಡುತ್ತಿರುವ ಪ್ರೀತಿ ವಿಶ್ವಾಸಕ್ಕೆ ಇಟ್ಟಿಗಿ ಗ್ರಾ ಪಂ ಯು ನಿಮ್ಮನ್ನು ಸದಾ ಶ್ಲಾಘಿಸುವಂತದ್ದಾಗಿದೆ ಎಂದರು,
ಹಾಗೆಯೇ ಅಮರಶಿಲ್ಪಿ ಜಕಣಾಚಾರಿ ಜಯಂತಿ ಈ ದಿನ ಆಚರಿಸುತ್ತಿರುವುದರ ಬಗ್ಗೆ ಮಾತನಾಡಿ ಅವರ ಜೀವನ ಚರಿತ್ರೆ ಯನ್ನು ಹೇಳಿದರು,,, ಹಿರಿಯ ಕೂಲಿ ಕಾರ್ಮಿಕರಾದ ಡಿ ಪರಮಜ್ಜ, ಓಮಯ್ಯ, ವೀರಾಚಾರಿಯವರಿಂದ ಕೇಕ್ ಕತ್ತರಿಸುವುದರೊಂದಿಗೆ ಸಂಭ್ರಮಾಚಾರಣೆ ಪ್ರಾರಂಭಿಸಲಾಯಿತು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;