. ಮರಳು ಲಾರಿಗಳ ಸಂಚಾರದಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮರಳುವಲಾರಿಗಳನ್ನು ಬೆಳ್ಳ ಬೆಳಗ್ಗೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಮೈಲಹಳ್ಳಿ ಗ್ರಾಮದಿಂದ ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಿಗೆ ಹಗಲು ರಾತ್ರಿ ಲಾರಿಗಳಲ್ಲಿ ದುರ್ಗಾವರ ಗ್ರಾಮದ ಕಿರಿದಾದ ರಸ್ತೆ ಮೇಲೆ ಸಂಚಾರದಿಂದ ರಸ್ತೆ ಕಿತ್ತು ಹೋಗಿ ವರ್ಷಗಳೇ ಕೆದಿದ್ದು. ಕಿತ್ತು ಹೋದ ರಸ್ತೆಗೆ ಜಲ್ಲಿ ಹಾಗೂ ಜಲ್ಲಿ ಪುಡಿ ಹಾಕಿರುವುದರಿಂದ ಲಾರಿಗಳ ಸಂಚಾರಕ್ಕೆ ಧೂಳಿನಿಂದ ರೈತರ ಬೆಳೆಗಳು.ಮನೆಗಳಿಗೆ ಧೂಳು ನುಗ್ಗಿ ಬೆಳೆಗಳ ಹಾಳು ಹಾಗು ಜನರಿಗೆ ನೆಗಡೆ.ಕೆಮ್ಮಿನಂತಹಬಸಾಂಕ್ರಮಿಕ ರೋಗಗಳಿಗೆ ತುತ್ತಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿಬೆದುರಾಗಿದೆ. ದಿನಂಪ್ರತಿ ಹದಿನೈದಕ್ಕೂ ಹೆಚ್ಚು ಮರಳಿನ ಲಾರಿಗಳು ಈ ಗ್ರಾಮೀಣ ಸಂಪರ್ಕ ರಸ್ತೆ ಮೂಲಕ ಹಾದು ಹೋಗುತ್ತಿರುವುದರಿಂದ ರಸ್ತೆ ಬಹುತೇಕ ಕಡೆ ಹಾಳಾಗಿದೆ. ಮರಳು ಸಾಗಾಟಕ್ಕೆ ನಮ್ಮದು ಅಭ್ಯಾಂತರ ವಿಲ್ಲ ಯಾವ ಮಾರ್ಗದಲ್ಲಿ ಪರವಾನಿಗೆ ಪಡೆದಿದ್ದಾರೆ ಆ ರಸ್ತೆ ಮೇಲೆ ಮರಳು ಲಾರಿಗಳು ಸಂಚರಿಸಲಿ ಲಾರಿ ಚಾಲಕರಿಗೆ ಯಾವ ಮಾರ್ಗ ಇದೆ ಎಂದರೆ ಮಾಹಿತಿ ನೀಡುತ್ತಿಲ್ಲ . ಈ ಮಾರ್ಗದಲ್ಲಿ ಸಂಚರಿಸಲು ಗ್ರಾಮಪಂಚಾಯಿತಿ ಸದಸ್ಯರಿಗೆ ಹಣ ನೀಡಿದ್ದೇವೆ ಎನ್ನುತ್ತಾರೆ ಸದಸ್ಯರನ್ನು ಕೇಳಿದರೆ ಯಾರಿಂದಲೂ ಹಣ ಪಡೆದಿಲ್ಲ ಎನ್ನುತ್ತಾರೆ . ಹಗಲು ರಾತ್ರಿ ಮರಳು ಲಾರಿಗಳ ಸಂಚಾರದಿಂದವರಸ್ತೆಗಳು ಕಿತ್ತು ಹೋದರೂ ಸಂಬಂಧಪಟ್ಟ ಅಧಿಕಾರಿಳು ಮೌನವಹಿಸಿರುವುದು ಅನುಮಾನಕ್ಕೆ ಎಡಮಾಡಿದ್ದು ಕಿತ್ತು ಹೋದವರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಹೈರಾಣಾಗಿದ್ದಾರೆ.. ಬಿದ್ದು ಕೈಕಾಲು ಮುರಿದು ಕೊಂಡ ಪ್ರಕರಣಗಳಿವೆ ಎಗ್ಗಿಲ್ಲದೆ ಮರಳು ಲಾರಿಗಳುಸಂಚರಿಸುತ್ತಿದ್ದರೂ ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದರಿಂದ ಮರಳು ಸಾಗಾಣೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕೋಟ್ಯಂತರ ರು.ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮೀಣ ರಸ್ತೆ ಹಾಳಾಗಿವೆ ರಸ್ತೆಗಳ ದುರಸ್ಥಿ ಹಾಗೂ ರಸ್ತೆಗಳ ಉಳಿವಿಗಾಗಿ ಗ್ರಾಮೀಣ ಜನರು ಲಾರಿಗಳನ್ನು ತೆಡೆದು ಬೆಳ್ಳಂ ಬೆಳಗ್ಗೆ ಪ್ರತಿಭಟನೆ ಮುಟ್ಟಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟವರು ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚರಿಸುವ ಮರಳು ಸಾಗಾಣೆಗೆ ಕಡಿವಾಣ ಹಾಕುವ ಮೂಲಕ ರಸ್ತೆಯನ್ನು ಸಂರಕ್ಷಿಸಲು ಮುಂದಾಗುವಂತೆ. ಗ್ರಾಮ ಪಂಚಾಯತಿ ಸದಸ್ಯಗೋಪಿ ವಕೀಲರು.ಆರ್. ನಾಗೇಶ್ ಗ್ರಾಮಸ್ಥರಾದ ಮಹಾಲಿಂಗಪ್ಪ.ಸುರೇಶ. ರಂಗಸ್ವಾಮಿ. ಬಸವರಾಜ್. ಮಂಜಣ್ಣ. ರಂಗಸ್ವಾಮಿ.ಸತೀಶ್. ಹನುಮಣ್ಣ ನಿಂಗಪ್ಪ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಎಚ್ಚರಿಕೆ ನೀಡಿದ್ದಾರೆ…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
