ಮನೆಗಳ್ಳತನ ಮಾಡಿದ ಆರೋಪಿ ಬಂಧನ: ಆಭರಣ ಜಪ್ತಿ
ಕೂಡ್ಲಿಗಿ: ತಾಲೂಕಿನ ಗುಡೇಕೋಟೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಕೆ.ತಿಪ್ಪೇಸ್ವಾಮಿ ಎಂಬುವವರ ಮನೆಯ ಬೀಗ ಮುರಿದು ಕಳ್ಳತನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಆರೋಪಿತರ ಪತ್ತೆಗೆ ಮಾನ್ಯ ಶ್ರೀಹರಿಬಾಬು ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮತ್ತು ಹರೀಶ್.ಜಿ. ಡಿ.ಎಸ್.ಪಿ ಕೂಡ್ಲಿಗಿ ರವರ ಮೇಲ್ವಿಚಾರಣೆಯಲ್ಲಿ, ವಸಂತ್ ಅಸೋದೆ ಸಿ.ಪಿ.ಐ ಕೂಡ್ಲಿಗಿ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ ಗುಡೇಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಶುಕ್ರವಾರ ಆರೋಪಿಯನ್ನು ಬಂಧಿಸಿ, ಕಳ್ಳತನವಾಗಿದ್ದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಗುಡೇಕೋಟೆ ಗ್ರಾಮದ ನಿವಾಸಿ ಹಾಗೂ ಕಬ್ಬಿಣದ ಗಾಡ್ರೇಜ್ ಕೆಲಸ ಮಾಡುತ್ತಿದ್ದ ಸದ್ದಾಂ ಹುಸೇನ್ ಎನ್ನುವವರು ಮನೆಗಳ್ಳತನ ಮಾಡಿದ ಆರೋಪಿಯಾಗಿದ್ದು, ಆತನಿಂದ 5.17 ಲಕ್ಷ ರೂ. ಮೌಲ್ಯದ ಬಂಗಾರದ 2 ಬ್ರಾಸ್ ಲೆಟ್, 2. ಕೊರಳ ಚೈನ್, ಒಂದು ಉಂಗುರ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ, ಗುಡೇಕೋಟೆ ಪೊಲೀಸರ ಕಾರ್ಯಕ್ಕೆ ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿಗಾರರು : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
