ಹೊಳಲ್ಕೆರೆ ಕೃಷಿ ಇಲಾಖೆವತಿಯಿಂದ ಅರ್ಥ ಪೂರ್ಣವಾಗಿ ರೈತ ದಿನಾಚರಣೆ, ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಹೊಳಲ್ಕೆರೆ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಗಿಡಕ್ಕೆ ನೀರು ಎರೆದು ಮಾಜಿ ಪ್ರಧಾನ ಮಂತ್ರಿ ಚೌದ್ರಿ ಚರಣ್ ಸಿಂಗ್ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ. ರೈತ ಗೀತೆಯನ್ನು ಹಾಡುವುದರ ಮೂಲಕ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಇನ್ನು ಕಾರ್ಯಕ್ರಮದಲ್ಲಿ ತಾಲೂಕಿನ ರೈತರು ಹಾಗೂ ರೈತ ಮುಖಂಡರು ಭಾಗಿಯಾಗಿದ್ದು, ತಾಲೂಕಿನ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೆಶಕ ಮಂಜುನಾಥ್ ಅವರು ಸರ್ಕಾರದಿಂದ ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ತರಲಾಗಿದೆ ಎಲ್ಲ ಯೋಜನೆಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಜೊತೆಗೆ ಹೈನುಗಾರಿಕೆ ಕೋಳಿಸಾಕಾಣಿಕೆ, ಮೀನು ಸಾಕಾಣಿಕೆ ಮಾಡಿ ರೈತರು ಹೆಚ್ಚೆಚ್ಚು ಆದಾಯತೆಗೆಯಬಹುದು ಎಂದು ಸಲಹೆ ನೀಡಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದವೀರಪ್ಪ ಅವರು ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಉತ್ತಮವಾದ ಬೆಲೆಯನ್ನು ಕೋಡಬೇಕು. ನಮ್ಮ ಜಿಲ್ಲೆಯ ರೈತರಿಗೆ ಕಾಲುವೆಗಳನ್ನು ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಹರಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಅಲ್ಲದೆ ರೈತರು ಬೆಳೆದ ಬೆಳೆಗಳನ್ನು ಮಾರಲು ಸೂಕ್ತವಾದ ಮಾರುಕಟ್ಟೆಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ವಿಜ್ಞಾನಿಗಳಾದ ಜೋತಿ ಅವರು ಮಾತಾನಾಡಿ ರೈತರು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಮೂಲಕ ಯಾವ ರೀತಿ ಉತ್ತಮ ಬೆಳೆಗಳನ್ನು ಬೆಳೆಯಬಹುದು ಎಂಬ ಮಾಹಿತಿಯನ್ನು ರೈತರಿಗೆ ನೀಡಿದರು. ಇನ್ನು ಕೃಷಿ ಇಲಾಖೆಯ ಅಧಿಕಾರಿಗಳಾದ ಗೋಪಿನಾಥ್ ಅವರು ಪ್ರಾರ್ಥನೆ ಮಾಡಿದರು. ಸಹಾಯಕ ಕೃಷಿ ಅಧಿಕಾರಿ ಪರಮೇಶ್ವರಪ್ಪ ಸ್ವಾಗತಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷರಾದ ಸತೀಶ್, ಪುರಸಭೆ ಅಧ್ಯಕ್ಷರಾದ ಅಶೋಕ್, ಸಿದ್ದೇಶ್, ಬಸವರಾಜಯ್ಯ, ಕೃಷಿ ಇಲಾಖೆ ಸಿಬಂದಿಗಳಾದ ಆಶಾ, ಹನುಮಂತಪ್ಪ, ಜಯರಾಮ್, ತಾಲೂಕಿನ ಅನೇಕ ರೈತರು ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,..

ವರದಿ. ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
