ಅಸ್ಪøಶ್ಯತಾ ನಿವಾರಣಾ ಸಪ್ತಾಹ ಕಾರ್ಯಕ್ರಮ
ಸಾಮರಸ್ಯದಿಂದ ಬಾಳೋಣ: ಶಾಷು
ಬಳ್ಳಾರಿ,: ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಚಿಗುರು ಕಲಾತಂಡ ವತಿಯಿಂದ ಆಸ್ಪøಶ್ಯತಾ ನಿವಾರಣಾ ಸಪ್ತಾಹ ಕಾರ್ಯಕ್ರಮ ನಿಮಿತ್ತ ಯರ್ರಂಗಳಿ ಗ್ರಾಮ ಮತ್ತು ಶ್ರೀರಾಂಪುರ ಕಾಲೋನಿಯಲ್ಲಿ ಗುರುವಾರ ಬೀದಿನಾಟಕ ಮೂಲಕ ಅಸ್ಪøಶ್ಯತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಾಷು ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಒಂದೇ, ಯಾರು ಮೇಲು-ಕೀಳಲ್ಲ, ತಾರತಮ್ಯ ಮಾಡದೇ ಸಾಮರಸ್ಯದಿಂದ ಎಲ್ಲರೂ ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ ಮತ್ತು ಯರ್ರಂಗಳಿ ಗ್ರಾಮದ ಪಿ.ಡಿ.ಓ ಸೇರಿದಂತೆ ಶಾಲೆಯ ಮೂಖ್ಯೋಪಾಧ್ಯಾರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.

ವರದಿ.ವಿರೇಶ್, ಎಚ್, ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
