ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ಮಹಿಳಾ ಒಕ್ಕೂಟದಿಂದ. ಅಕ್ರಮ ಮಧ್ಯ ಮಾರಾಟದ ಬಗ್ಗೆ ಮನವಿ.ಸಲ್ಲಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ದಂತೆ ತಕ್ಷಣವೇ ಅಕ್ರಮ ಮಧ್ಯ ಮಾರಾಟ ತಡೆಯುವಂತೆ. ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧವಾಗಬೇಕೆಂದು ಮಹಿಳೆಯರು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಹೆಗ್ ಇಲ್ಲದೆ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದು ಈಗಾಗಲೇ ಮಹಿಳೆಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರು ಸಹ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬುವಂತೆ ವರ್ತಿಸುತ್ತಿರುವುದು. ಸರಿಯಲ್ಲ ಉಚ್ಚ ನ್ಯಾಯಾಲಯ ತಕ್ಷಣ ಅಕ್ರಮ ಮಧ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಆದೇಶ ನೀಡಿದೆ ಆದರೆ ಎಲ್ಲೂ ಅಕ್ರಮ ಮಧ್ಯ ಮಾರಾಟ ನಿಂತಿಲ್ಲ. ಎಂದು. ರಾಜ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು 1)ಬಾಚಿಕೊಂಡನಹಳ್ಳಿ ಎಂ ಎಸ್ ಆಯಿಲ್ ಬಾರ್. ಮೇನ್ ರೋಡಿನಲ್ಲಿದೆ ಸ್ಥಳ ಬದಲಾವಣೆ ಆಗಬೇಕು ಎಂದು ಏಕೆಂದರೆ ಸುತ್ತಮುತ್ತಲಿನ ಹಳ್ಳಿಗಳ ಶಾಲಾ ಹೆಣ್ಣು ಮಕ್ಕಳು ಓಡಾಡುತ್ತಾರೆ ಇದರಿಂದ ಸಮಸ್ಯೆ ಆಗುತ್ತಿರುವುದರಿಂದ ಸ್ಥಳ ಬದಲಾವಣೆ ಮಾಡಬೇಕೆಂದು ಮತ್ತು 2) ಬೆಣಕಲ್ಲು ಗ್ರಾಮದಲ್ಲಿ ಎಂ ಎಸ್ ಆಯಿಲ್ ಬಾರ್ ಶಾಲೆಯ ಪಕ್ಕ ಮತ್ತು ಗ್ರಾಮ ಪಂಚಾಯಿತಿಯ ಪಕ್ಕದಲ್ಲಿದ್ದು ಹಾಗೂ ನಡು ಊರಲ್ಲಿದ್ದು ಇದು ಕೂಡ ಶಾಲಾ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಸಮಸ್ಯೆ ಆಗುತ್ತಿದ್ದು ಇದನ್ನು ಸಹ ಸ್ಥಳ ಬದಲಾವಣೆ ಮಾಡಬೇಕು ಎಂ ಎಸ್ ಆಯಿಲ್ ಇರುವ ಎಲ್ಲಾ ಗ್ರಾಮಗಳಲ್ಲೂ ಮನೆ ಮನೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ತಹಸಿಲ್ದಾರ್ ಅನ್ನದಾನೇಶ್ವರ ಇವರಿಗೆ ಮನವಿ ಸಲ್ಲಿಸಿದರು. ರಾಜ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
