ಗಡಿ ವಿವಾದಕ್ಕೆ ಕೇಂದ್ರ ಸರ್ಕಾರ ಮಧ್ಯ ವಹಿಸಲಿ : ದೊಡ್ಡ ಬಸವರಾಜ್ ಬಡಗಿ
ಕಂಪ್ಲಿ: ಕರ್ನಾಟಕ ಕನ್ನಡಿಗರ ಶಾಂತಿಯತೆಯನ್ನು ದೌರ್ಬಲ್ಯ ಎಂದು ಭಾವಿಸುವ ಸರ್ಕಾರಗಳು ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳಿಗೆ ಪೊಲೀಸರ ಎದುರಿಗೆ ಮಸಿ ಬಳಸುತ್ತಿದ್ದರು ಮೌನ ವಹಿಸುವ ಮಹಾರಾಷ್ಟ್ರ ಸರ್ಕಾರ ಆದರೆ ಕರ್ನಾಟಕದಲ್ಲಿ ಮಹಾರಾಷ್ಟ್ರದ ಗಾಡಿಗಳಿಗೆ ರಕ್ಷಣೆ ನೀಡಿ ತಾರತಮ್ಯ ಮಾಡಲಾಗುತ್ತಿದೆ ಹಾಗೆಯೇ ನಮ್ಮ ಗೃಹ ಸಚಿವರು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದ್ದರು ಮಹಾರಾಷ್ಟ್ರದ ಉದ್ದಟತನ ಕಡಿಮೆಯಾಗಿಲ್ಲ ಕನ್ನಡಿಗರು ಎಲ್ಲಾ ವನ್ನು ಸಹಿಸಿಕೊಳ್ಳುವ ಪರಿಸ್ಥಿತಿಗೆ ಸರ್ಕಾರ ತಂದೊದಗಿಸಿದೆ. ಎಂಇಎಸ್ ಪುಂಡಾಟಕ್ಕೆ ಕೊನೆಯಿಲ್ಲದಂತಾಗಿದೆ ಕರ್ನಾಟಕದ ಆಸ್ಮಿತೆಗೆ ದಕ್ಕೆ ತರುತ್ತಿದ್ದರು ಸ್ಥಳೀಯವಾಗಿ ಬೆಳಗಾವಿಯಲ್ಲಿ ಅವರು ಉಪಟಳವನ್ನು ನೋಡುತ್ತಾ ಕೂತಿದೆ ಒಟ್ಟಾರೆ ಯಾವುದೇ ಚುನಾಯಿತ ಜನಪ್ರತಿನಿಧಿಗಳು ಕೂಡ ಕನ್ನಡಿಗರಿಗೆ ಏನೇ ಅನ್ಯಾಯವಾದರೂ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಕಾರಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಶಾಂತಿ ಸ್ಥಾಪಿಸಿ ಎಂಇಎಸ್ ಪುಂಡರ ಅಟ್ಟಹಾಸವನ್ನು ಮಟ್ಟ ಹಾಕಬೇಕಾಗಿ ಕರ್ನಾಟಕ ರಾಜ್ಯ ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ಕಾರ್ಯದರ್ಶಿ ದೊಡ್ಡ ಬಸವರಾಜ್ ಬಡಗಿ ಆಗ್ರಹಿಸಿದ್ದಾರೆ. ಈ ವೇಳೆ ಸಂಘಟನೆಯ ಪದಾಧಿಕಾರಿಗಳಾದ ಅಧ್ಯಕ್ಷರಾದ ಕೆ ರಾಮಕೃಷ್ಣ ಉಪಾಧ್ಯಕ್ಷರಾದ ನಬಿಸಾಬ್ ಸಂಘಟನಾ ಕಾರ್ಯದರ್ಶಿಯಾದ ನಾಯಕರ ನಾಗರಾಜ್ ಜಿಲ್ಲಾಧ್ಯಕ್ಷರಾದ ಹೆಚ್ ವೆಂಕಟೇಶ್, ತಾಲೂಕಾಧ್ಯಕ್ಷರಾದ ಮಂಜುನಾಥ್ ಬಡಗಿ, ತಾಲೂಕು ಉಪಾಧ್ಯಕ್ಷರಾದ ಕಲ್ಯಾಣಿ ಚನ್ನಬಸವ, ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಅಂಬಿಗರ ಸುರೇಶ್, ಸಹ ಕಾರ್ಯದರ್ಶಿಯಾದ ನಾಯಕರ ಮನೋಜ್, ಹೆಚ್, ರೇಣುಕಪ್ಪ, ಮೊಹಮ್ಮದ್ ರಫಿ, ಬಡಿಗೆ ಮಾರುತಿ, ಮಡಿವಾಳ ವೀರೇಶ್, ನಾಯಕರ ಮಾರುತಿ, ಪಲ್ಲಕ್ಕಿ ಪರಶುರಾಮ್ ಕೆ ಜಯಣ್ಣ ಕಲ್ಯಾಣಿ ವಿನಾಯಕ ಎಂ ನಾಗರಾಜ ಬಡಿಗೆ ಮಲ್ಲಿಕಾರ್ಜುನ್ ಮುಂತಾದವರು ಇದ್ದರು,…

ವರದಿ. ಬಸವರಾಜ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
