ದಾಖಲೆಗಳೊಂದಿಗೆ ಮಾಜಿ ಶಾಸಕರ ಹಗರಣ ಬಿಚ್ಚಿಟ್ಟ – ಶಾಸಕ ನಾಡಗೌಡ.
ಸಿಂಧನೂರು ನ.27 .ಹಂಪನಗೌಡರದು ತೆರೆದ ಪುಸ್ತಕವಲ್ಲ, ವ್ಯವಸ್ಥಿತವಾಗಿ ಕಾಮಗಾರಿ ಮಾಡದೆ ಹಣ ನುಂಗುವ ಕೆಲಸ ಐವತ್ತು ಲಕ್ಷ ರೂ ಚೆಕ್ ಡ್ಯಾಂ ಕಾಮಗಾರಿ ಎಲ್ಲಿ ತೋರಿಸಿ ಎಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ತಿರುಗೇಟು ನೀಡಿದರು.
ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ತಮ್ಮ ಕಾರ್ಯಕರ್ತರ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಗರದಲ್ಲಿ ಮಾಡಿದ ಸಿ.ಸಿ ರಸ್ತೆಗಳು ಬಿರುಕು ಬಿಟ್ಟಿದ್ದು, ಕಮಿಷನ್ ಆಸೆಗೆ ಕಳಪೆ ಕಾಮಗಾರಿ ನಿರ್ವಹಿಸಿದ್ದಾರೆಂದು ಆರೋಪಿಸಿದ್ದರ ವಿರುದ್ಧ ಪ್ರತಿಕ್ರಿಯಿಸಿದ ಶಾಸಕರು 2012 -13 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 50 ಲಕ್ಷ ರೂ ರೌಡಕುಂದಾ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಮಾಡದೆ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಈ ಕಾಮಗಾರಿ ಮಾಡದೆ ಹಣ ಎತ್ತಿರುವ ಕೆಲಸ ಹಂಪನಗೌಡರಿಂದಾಗಿದೆ ಈ ಕಾಮಗಾರಿ ಎಲ್ಲಿ ಆಗಿದೆ ? ತೋರಿಸಿ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಶಾಸಕ ವೆಂಕಟರಾವ್ ನಾಡಗೌಡ ಸವಾಲು ಹಾಕಿದರು.
ತಾಲೂಕಿನ ರೌಡಕುಂದಾ ಗ್ರಾಮದ ಹತ್ತಿರ ಗುತ್ತೆದಾರ ವಿರೇಶ ನಾಗರಬೆಂಚಿ ಹೆಸರಿನಲ್ಲಿ ನಬಾರ್ಡ್ (ಆರ್.ಐ.ಡಿ.ಎಫ್ ) ನಲ್ಲಿ ಕಾಮಗಾರಿ ಅಗ್ರಿಮೆಂಟ್ ಆಗಿದೆ ಮತ್ತು ನಗರದ ತುಂಬೆಲ್ಲಾ ಸಿ.ಸಿ ರಸ್ತೆ ಮಾಡಿದ್ದು ಕಾಣಲಿಲ್ಲ ಮೂವತ್ತು ಟನ್ ಬಾರ ಹೊಂದಿದ ವಾಹನಗಳು ಟೈಲ್ಸ್ ಅಂಗಡಿಗೆ ಹೋಗಿ ಬರುವಾಗ ಸಿಸಿ ರಸ್ತೆ ಬಿರುಕು ಬಿಟ್ಟಿದೆ. ಅದನ್ನು ತೋರಿಸಿದ್ದಕ್ಕೆ ಸ್ವಾಗತ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೆನೆಂದರು.ಆದರೆ ಕಾಮಗಾರಿ ಮಾಡದೆ 50 ಲಕ್ಷ ಹಣ ಎತ್ತಿದ್ದಾರೆ ಕಾಮಗಾರಿ ಮಾಡಿದ್ದು ಎಲ್ಲಿ ..? ನನ್ನ ಗಂಗಳದಲ್ಲಿ ನೋಣ ಬಿದ್ದಿದ್ದು ತೋರಿಸುವ ಅವರಿಗೆ ತಮ್ಮ ಗಂಗಳದಲ್ಲಿ ಕತ್ತೆ ಬಿದ್ದಿರುವುದು ಕಾಣುತ್ತಿಲ್ವಾ ಎಂದು ಶಾಸಕರು ಖಾರವಾಗಿ ಪ್ರತಿಕ್ರಿಯಿಸಿದರು.
ನನ್ನ ಮೇಲೆ 40 ಪರ್ಸೆಂಟ್ ಕಮಿಷನ್ ಆಪಾದನೆ ಮಾಡಿದ್ದಾರೆ ಹಾಗೂ ನನ್ನ ಸಂಬಂಧಿಕರು ಕಾಮಗಾರಿ ಮಾಡುವದಕ್ಕೆ ಗುತ್ತಿಗೆದ್ದಾರಿಕೆ ನೀಡಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಹಾಗೂ ಗುತ್ತಿಗೆದಾರ ಮಾಡುವವರು ನನ್ನ ಸಂಬಂಧಿಕ ಎಂದು ಹೇಳುವ ಬಾಬುಗೌಡ ಬಾದರ್ಲಿ ಅವರಿಗೆ ದಾಖಲಾತಿಗಳು ಇದಿಯಾ.ಯಾರೋ ಒಬ್ಬ ಗುತ್ತಿಗೆದಾರರು ದೂರದ ಊರಿನ ಮುದ್ದೇಬಿಹಾಳದಿಂದ ಬಂದು ಇಲ್ಲಿ ಕಾಮಗಾರಿ ಮಾಡಿದರೆ ಅವರು ನನ್ನ ಸಂಬಂಧಿಕರು ಹೇಗೆ ಆಗುತ್ತಾರೆ. ಗುತ್ತೇದಾರ ನನ್ನ ಸಂಬಂಧಿಕ ಎಂದು ನಿಮ್ಮ ಬಳಿ ದಾಖಲೆ ಇದ್ದರೆ ತೋರಿಸಿ ಎಂದರು.
ಜೆಡಿಎಸ್ ವಕ್ತಾರರಾದ ಚಂದ್ರುಭೂಪಾಲ್ ನಾಡಗೌಡ ಮಧ್ಯಪ್ರವೇಶಿಸಿ ಮಾತನಾಡುತ್ತಾ 2013 ರಲ್ಲಿ ಮಾಜಿ ಶಾಸಕ ಹಂಪನಗೌಡ ಗೆದ್ದ ಒಂದು ವಾರದಲ್ಲಿ ಮನೆ ಮುಂದೆ ಸಿಸಿ ಹಾಕಿಸಿಕೊಂಡರು ಅದು ಕಿತ್ತು ಹೋಗಿತ್ತು ಮತ್ತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಕಾರಣದಿಂದ ಮರಳಿ ಸಿಸಿ ರಸ್ತೆ ಪುನಃ ಹಾಕಲಾಯಿತು ಇದು ಕ್ಷೇತ್ರದ ಜನರಿಗೆ ಗೊತ್ತಿಲ್ವಾ ? ಹಂಪನಗೌಡರು ಮಳಿಗೆಗಳನ್ನು ಬಾಡಿಗೆ ನೀಡಿ ಪ್ರತಿ ತಿಂಗಳು ದುಡ್ಡು ತಿನ್ನುತ್ತಿದ್ದರಲ್ಲ ಅದು ನಾವು ಕೊಟ್ಟ ಭಿಕ್ಷೆ ಹಾಗೂ ಇಸ್ಪೀಟು ,ಮಟ್ಕಾ ,ಅಕ್ರಮ ಮರಳು ದಂದೆ , ಸರಾಯಿ ಪ್ರತಿಯೊಂದರಲ್ಲಿಯೂ ಬಾಬುಗೌಡ ಅಂಜಿ ಎಂಬ ದಂದೆಕೊರನಿಂದ ಕಮಿಷನ್ ತಿನ್ನುವುದು ಯಾರಿಗೂ ಗೊತ್ತಿಲ್ವಾ …? ನಮಗೆ 4800 ಎಕರೆ ಜಮೀನು ಇತ್ತು ಅದರಲ್ಲಿ ಎರಡು ಸಾವಿರ ಎಕರೆ ದಾನ ನೀಡಿದ್ದೇವೆ. ನೀವು ಒಂದು ಗುಂಟೆ ಜಮೀನು ಯಾರಿಗಾದರೂ ದಾನ ಕೊಟ್ಟಿದ್ದರೆ ತೋರಿಸಿ ನೋಡೋಣ. ತಿಮ್ಮಾಪುರದಲ್ಲಿ ಕೆರೆ ಮಾಡುತೇವೆ ಎಂದು ಜಿಲ್ಲಾಧಿಕಾರಿಗಳಿಂದ ಜನರಿಗೆ ಕುಡಿಯುವುದಕ್ಕೆ ನೀರು ಕೊಡುತ್ತೇವೆ ಎಂದು ಅನುಮೋದನೆ ಮಾಡಿಕೊಂಡು ತಮ್ಮ ಹೊಲಗಳಿಗೆ ನೀರು ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ಒಂದು ಹನಿಯು ನೀರು ಕೊಟ್ಟಿಲ್ಲ. ಮತ್ತು ನಗರದಲ್ಲಿನ ಬಸವೇಶ್ವರ ಬ್ಯಾಂಕ್ ,ಟಿ.ಎ.ಪಿ.ಸಿ. ಎಂ.ಸಿ ( ಕುರಿ ಸಂತೆ ) ಜಾಗ ,ಸಿ.ಪಿ.ಎಸ್.ಸಿ ಶಾಲೆಯ ಜಾಗ ಇವೆಲ್ಲವೂಗಳನ್ನು ಅಕ್ರಮವಾಗಿ ಪಡೆದುಕೊಂಡು ಬಾಡಿಗೆ ನೀಡಿ ಪ್ರತಿ ತಿಂಗಳು ಬಾಡಿಗೆ ತಿನ್ನುತ್ತಿದ್ದಿರಿ, ಇದು ನಿಮ್ಮ ಹಣೆ ಬರಹ ಏನು ಎಂಬುದನ್ನು ತೋರಿಸುತ್ತದೆಂದು ಜೆಡಿಎಸ್ ವಕ್ತಾರರಾದ ಚಂದ್ರು ಭೂಪಾಲ್ ನಾಡಗೌಡ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ವಿರುದ್ಧ ಗುಡುಗಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಧರ್ಮನಗೌಡ ,ಅಭಿಷೇಕ್ ನಾಡಗೌಡ , ವೆಂಕಟೇಶ ನಂಜಲದಿನ್ನಿ ,ನಾಗೇಶ ಹಂಚಿನಾಳ ,ಗ್ರಾಮಸ್ಥರಾದ ಕನಕಪ್ಪ ,ಕರಿಯಪ್ಪ ಸೇರಿದಂತೆ ಹಲವಾರು ರೈತರು ಕೂಡ ನಮ್ಮ ಭಾಗದಲ್ಲಿ ಯಾವುದೇ ಚೆಕ್ ಡ್ಯಾಂ ಮಾಡಿಲ್ಲ ಎಂದು ಪ್ರತ್ಯಕ್ಷ ಸಾಕ್ಷಿ ನೀಡಿದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
