ಅಂಬೇಡ್ಕರ್ ಉದ್ಯಾನವನದಲ್ಲಿ ಸಂವಿಧಾನ ಸಮರ್ಪಣ ದಿನ ಆಚರಣೆ.
ಸಿಂಧನೂರು :ನ.26. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ದಿನಾಚರಣೆಯನ್ನು ನಗರದ ತಾಲೂಕ ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ದಲಿತ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳೆ ಪರ ಸಂಘಟನೆಗಳ ಮುಖಂಡರೊಂದಿಗೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಂವಿಧಾನ ಸಮರ್ಪಣ ದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಎಂ.ಗಂಗಾಧರ ಮಾತನಾಡಿ 2 ವರ್ಷ 11 ತಿಂಗಳು 18 ದಿನಗಳಷ್ಟು ಕಾಲಾವಕಾಶವನ್ನು ತೆಗೆದುಕೊಂಡು 395 ವಿಧಿಗಳು 8 ಅನುಸೂಚಿಗಳು 22 ಭಾಗಗಳು ಮತ್ತು 280 ಪುಟಗಳನ್ನು ಒಳಗೊಂಡ ಮಹಾನ್ ಸಂವಿಧಾನವನ್ನು ಸಮರ್ಪಿಸಿ ಡಾ. ಬಿ ಆರ್.ಅಂಬೇಡ್ಕರ್ ಅವರು ಹೊರ ಬರುವಾಗ ಮಾಧ್ಯಮದವರು ಕೊನೆಗೆ ನೀವು ಸಂವಿಧಾನವನ್ನು ಯಶಸ್ವಿಯಾಗಿ ಸಮರ್ಪಿಸಿದ ಈ ಸುದಿನ ಮತ್ತು ಶುಭ ಗಳಿಗೆಯಲ್ಲಿ ನೀವು ಏನನ್ನು ಹೇಳಬಯಸುವುರಿ ಎಂದು ಪ್ರಶ್ನೆ ಹಾಕಿದರು?
ಆಗ ಅಂಬೇಡ್ಕರ್ ಅವರು ಸಂವಿಧಾನವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸ್ಥಾನದಲ್ಲಿ ನನ್ನ ವಿರೋಧಿಗಳು ಹೋಗಿ ಕುಳಿತುಕೊಂಡಿದ್ದಾರೆ. ತಕ್ಷಣ ನನ್ನ ಜನ ಎಚ್ಚೆತ್ತುಕೊಂಡು ಆ ಸ್ಥಾನವನ್ನು ಆಕ್ರಮಿಸಿಕೊಳ್ಳದೆ ಹೋದರೆ ಇಷ್ಟೊಂದು ಕಷ್ಟಪಟ್ಟು ನಾನು ಬರೆದ ಸಂವಿಧಾನ ಉಳಿದು ಯಶಸ್ವಿಯಾಗಿ ಜಾರಿಯಾಗುತ್ತದೆ ಎಂದು ಹೇಳಿದರು.
ಇಂದು ದೇಶದಲ್ಲಿ ಹಿಂದುತ್ವವಾದಿ ಕೋಮುವಾದಿ ಶಕ್ತಿಗಳು ಸಂವಿಧಾನವನ್ನು ಬದಲಾಯಿಸಿ ಅದರ ಜಾಗದಲ್ಲಿ ಮನುಸ್ಮೃತಿಯನ್ನು ತರಲು ಹೊರಟಿದ್ದಾರೆ. ಇದರ ವಿರುದ್ಧ ದೇಶದ ದಲಿತ ಅಲ್ಪಸಂಖ್ಯಾತ ದಮನಿತ ಶೋಷಿತ ಸಮುದಾಯಗಳು ಬಲಾಢ್ಯವಾದ ಮಹಾನ್ ಚಳುವಳಿಯನ್ನು ಕಟ್ಟಿ ಹೋರಾಡುವುದರೊಂದಿಗೆ ಈ ಕೋಮುವಾದಿ, ಬ್ರಾಹ್ಮಣವಾದಿ ಮತ್ತು ಬಂಡವಾಳವಾದಿ ಶಕ್ತಿಗಳ ವಿರುದ್ಧ ಹೋರಾಡಬೇಕೆಂದರು.
ನಂತರ ಹುಲಗಪ್ಪ ಮಲ್ಕಾಪುರ್ ಮಾತನಾಡಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಭಾರತ ದೇಶದ ಜಾತಿ ವ್ಯವಸ್ಥೆಯು ಹೋಗಲಾಡಿಸಲು ಬಾಬಾ ಸಾಹೇಬರು ಬಹುದೊಡ್ಡ ಚಳುವಳಿಯನ್ನೇ ಕೈಗೊಂಡರು. ಆದರೂ ಕೂಡ ಇಂದು ಮನುವಾದಿಗಳು ವರ್ಣವ್ಯವಸ್ಥೆಯನ್ನು ವ್ಯವಸ್ತಿತವಾಗಿ,ಇಂದಿಗೂ ಕೂಡ ಜೀವಂತವಿದೆ.
ಈ ಮನುವಾದಿಗಳಿಂದ ಇಂದು ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಇದರ ವಿರುದ್ಧ ಎಲ್ಲಾ ಸಮುದಾಯದ ಜನರು ಚಳುವಳಿಯನ್ನು ರೂಪಿಸುವವರೊಂದಿಗೆ ಸಂಪೂರ್ಣ ಸಂವಿಧಾನದ ಜಾರಿಗಾಗಿ ಬೃಹತ್ ಚಳವಳಿಯನ್ನು ಕಟ್ಟಬೇಕೆಂದರು.
ಈ ಸಂದರ್ಭದಲ್ಲಿ ಸಂವಿಧಾನದ ಪರವಾಗಿ ಘೋಷಣೆಗಳನ್ನು ಮೊಳಗಿಸಲಾಯಿತು. ರೈತ ಮುಖಂಡರಾದ ಅಮೀನ್ ಪಾಶಾ ದಿದ್ಧಿಗಿ, ಕೆ. ಮರಿಯಪ್ಪ ಬಿಎಸ್ಪಿ, ವಿದ್ಯಾರ್ಥಿ ಮುಖಂಡ ಮೌನೇಶ ಜಾಲವಾಡಗಿ, ಮಂಜುನಾಥ ಸಾಸಲಮರಿ ,ಮಹಮ್ಮದ್ ಅಲಿ, ಬೇಗಂ, ವಿರುಪಣ್ಣ ರಾಮತ್ನಾಳ, ಶಶಿಕುಮಾರ ವಿರುಪಾಪುರ, ಶರಣಪ್ಪ ಹಂಚಿನಾಳ, ಹನುಮಂತ ಗೋನ್ವಾರ, ವಿಜಯಕುಮಾರ, ಅಶೋಕ ಸಾಗರ ಕ್ಯಾಂಪ್ ಇನ್ನಿತರರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
