;

ನ್ಯೂಮೋನಿಯಾ ಲಕ್ಷಣಗಳನ್ನು ಗುರುತಿಸಿ ಮಕ್ಕಳನ್ನು ರಕ್ಷಿಸಿ : ಡಾ.ಅಲಕನಂದಮಳಗಿ…!!!

ನ್ಯೂಮೋನಿಯಾ ಲಕ್ಷಣಗಳನ್ನು ಗುರುತಿಸಿ ಮಕ್ಕಳನ್ನು ರಕ್ಷಿಸಿ : ಡಾ.ಅಲಕನಂದಮಳಗಿ
ಕೊಪ್ಪಳ, ನವೆಂಬರ್ ನ್ಯೂಮೋನಿಯಾ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಕ್ಕಳನ್ನು ರಕ್ಷಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದಾ ಮಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ನಗರದ ಹಳೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಸಭಾಭವನದಲ್ಲಿ ಜಿಲ್ಲಾಮಟ್ಟದಲ್ಲಿ ವೈದ್ಯಾಧಿಕಾರಿಗಳಿಗೆ ಆಯೋಜಿಸಿದ್ದ ನ್ಯೂಮೋನಿಯಾವನ್ನು ಯಶಸ್ವಿಯಾಗಿ ನಿವಾರಣೆ ಮಾಡಲು ಸಾಮಾಜಿಕ ಜಾಗರೂಕತೆ ಮತ್ತು ಕ್ರಿಯಾತ್ಮಕ ಚಟುವಟಿಕೆಗಳು” (SAANS) ಕಾರ್ಯಕ್ರಮದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯೂಮೋನಿಯ ಮಕ್ಕಳ ಆರೋಗ್ಯಕ್ಕೆ ಸಂಬಧಿಸಿದoತೆ ಅನೇಕ ಅಪಾಯಕಾರಿ ಅಂಶಗಳ ಸೇರ್ಪಡೆಯಿಂದ ಉಂಟಾಗುತ್ತದೆ. ಕಲುಷಿತ ಗಾಳಿ, ನೀರು, ಬ್ಯಾಕ್ಟೀರಿಯಾ, ವೈರಸ್, ಕಡಿಮೆ ತೂಕದ ನವಜಾತ ಶಿಶು, ಅಪೌಷ್ಠಿಕತೆ, ಮೊದಲ 06 ತಿಂಗಳವರೆಗೆ ಸ್ತನ್ಯಪಾನ ನೀಡದೇ ಇರುವುದು, ಒಳಾಂಗಣ ವಾಯುಮಾಲಿನ್ಯ, ರೋಗನಿರೋಧಕ ಶಕ್ತಿ ಕೊರತೆ, ನೈರ್ಮಲ್ಯದ ಕೊರತೆ ಹಾಗೂ ಇತರೆ ಸಾಮಾಜಿಕ, ಆರ್ಥಿಕ ಅಂಶಗಳು ಮಕ್ಕಳಲ್ಲಿ ನ್ಯೂಮೋನಿಯಾ ಖಾಯಿಲೆಗೆ ಕಾರಣವಾಗುತ್ತವೆ. 05 ವರ್ಷದೊಳಗಿನ ಮಕ್ಕಳ ಮರಣಕ್ಕೆ ನ್ಯೂಮೋನಿಯಾ ಪ್ರಮುಖ ಕಾರಣಗಳಲ್ಲಿ ಮೊದಲನೆಯದಾಗಿದ್ದು, ಅದನ್ನು ತಡೆಗಟ್ಟಬೇಕಾಗಿದೆ. ಆರಂಭದಲ್ಲಿಯೇ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಪ್ರಾ.ಆ.ಕೇಂದ್ರ, ಸ.ಆ.ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ತಾಯಂದಿರಿಗೆ ನ್ಯೂಮೋನಿಯಾ ಖಾಯಿಲೆ ಕುರಿತು ಅರಿವು ಮೂಡಿಸಬೇಕು ಹಾಗೂ ನ್ಯೂಮೋನಿಯಾ ಖಾಯಿಲೆಯು ಮಕ್ಕಳಲ್ಲಿ ಕಂಡು ಬರುವ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಪಕ್ಕೆ ಸೆಳೆತ, ತೀವ್ರ ಜ್ವರದಂತಹ ಲಕ್ಷಣಗಳು ಕಂಡುಬoದರೆ ಆದಷ್ಟು ಬೇಗ ಗುರುತಿಸಿ, ಚಿಕಿತ್ಸೆ ನೀಡಿ ಮಕ್ಕಳನ್ನು ರಕ್ಷಿಸಬೇಕು. ಈ ಮೂಲಕ ಕೊಪ್ಪಳ ಜಿಲ್ಲೆಯನ್ನು ನ್ಯೂಮೋನಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಕರೆ ನೀಡಿದರು.


ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಪ್ರಕಾಶ ವಿ. ಅವರು ಮಾತನಾಡಿ, ಮಕ್ಕಳಲ್ಲಿ ಕಂಡುಬರುವ ಖಾಯಿಲೆಗಳಲ್ಲಿ ನ್ಯೂಮೋನಿಯ ಖಾಯಿಲೆ ಕೂಡ ಒಂದಾಗಿದೆ. ಮಕ್ಕಳ ಆರೋಗ್ಯ ರಕ್ಷಣೆಗಾಗಿ ಖಾಯಿಲೆಗಳ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ತಿಳಿದುಕೊಂಡು ತಮ್ಮ ಅಧೀನದಲ್ಲಿ ಬರುವ ಸಿಬ್ಬಂದಿಗಳಿಗೂ ತಿಳಿಸಬೇಕು. ಜಿಲ್ಲೆಯಲ್ಲಿ ನವೆಂಬರ್ 12 ರಿಂದ 28 ರವರೆಗೆ ನವಜಾತು ಶಿಶು ಸಪ್ತಾಹ ಕಾರ್ಯಕ್ರಮ ಆಚರಿಸಿ ಸಮುದಾಯಕ್ಕೆ ಅರಿವು ಮೂಡಿಸುವಂತೆ ತಿಳಿಸಿದರು.
ಯಲಬುರ್ಗಾ ತಾಲೂಕಾ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞರಾದ ಡಾ|| ಮೀನು ಅವರು ಮಾತನಾಡಿ, ನ್ಯೂಮೋನಿಯಾ ಖಾಯಿಲೆ ಉಂಟಾಗಲು ಕಾರಣ, ಪತ್ತೆ ಹಚ್ಚುವುದು, ಅದರ ಲಕ್ಷಣಗಳ ಕುರಿತು ಮಾಹಿತಿ ನೀಡಿದರು. ಸ.ಆ.ಕೇಂದ್ರ ಮುನಿರಾಬಾದ್‌ನ ಚಿಕ್ಕಮಕ್ಕಳ ತಜ್ಞ ಡಾ|| ರಾಜಶೇಖರ ಅವರು ನ್ಯೂಮೋನಿಯಾ ಖಾಯಿಲೆ ನಿಯಂತ್ರಣ, ಚಿಕಿತ್ಸೆ, ಕಾರ್ಯಕ್ಷೇತ್ರದಲ್ಲಿ ಆರೋಗ್ಯ ನೀರಿಕ್ಷಣಾಧಿಕಾರಿಗಳು, ಸಿ.ಹೆಚ್.ಒ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಗಾರದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ|| ವೆಂಕಟೇಶ, ತಜ್ಞ ವೈದ್ಯರಾದ ಡಾ|| ಸಿ.ಎಂ. ಹಿರೇಮಠ, ಡಿ.ಹೆಚ್.ಇ.ಒ ಶಿವಾನಂದ ವ್ಹಿ.ಪಿ, ಮೃತ್ಯುಂಜಯ, ಜೈಹಿಂದ್ ಹಾಗೂ ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು…

ವರದಿ. ಸಂಗೀತ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;