ಗ್ರಾಮ ಪಂಚಾಯಿತಿ ಕುಂದು ಕೊರತೆ ಚರ್ಚಿಸಿದ ತಾಲೂಕು ಅಧ್ಯಕ್ಷ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರಳಿ ರಾಜ್ . ಕೆ ರವರು ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಂದು ಕೊರತೆಯ ಚರ್ಚಿಸಿ. ಅವರು ಸದಸ್ಯರನ್ನು ಉದ್ದೇಶಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಸದಸ್ಯರ ವೇತನದ ಸಮಸ್ಯೆಗಳು ಅಥವಾ ನಿಮ್ಮ ಇನ್ನಿತರೆ ಯಾವುದೇ ಕಷ್ಟಗಳಿಗೆ ನಮ್ಮ ಒಕ್ಕೂಟ ನಿಲುವಿದೆ ನೀವು ಯಾವ ಸಮಯದಲ್ಲಿ ಯಾವ ಕೆಲಸಕ್ಕೆ ನನ್ನ ನಂಬರಿಗೆ ಸಂಪರ್ಕಿಸಬಹುದು ಮತ್ತು ಅಧಿಕಾರಿಗಳು ಮಾಡುತ್ತಿರುವ ದಬ್ಬಾಳಿಕೆಯನ್ನು ತಡ ಹಿಡಿದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರುಗಳಿಗೆ ಸ್ಪಂದಿಸುವಂತೆ ನಾವು ಮುಂದಿನ ದಿನಮಾನಗಳಲ್ಲಿ ಅಧಿಕಾರಿಗಳಿಗೆ ಸೂಚಿಸೋಣ ಮತ್ತು ಜುಮ್ಮೋಗನಹಳ್ಳಿ ಅಭಿವೃದ್ಧಿ ಅಧಿಕಾರಿಯದ ನಾನು ಹೇಳುವುದರಲ್ಲಿ ಅರ್ಥ ಮಾಡಿಕೊಂಡು ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸದಸ್ಯರುಗಳಿಗೆ ಮತ್ತು ಊರಿನ ಜನರಿಗೆ ಸಮಾಜ ಸೇವಕರಿಗೆ ಮುಖ್ಯವಾಗಿ ಪತ್ರಕರ್ತರಿಗೆ ದಬ್ಬಳಿಕೆ ಮಾಡುವುದನ್ನು ಹೊರತುಪಡಿಸಿ ಅವರಿಗೆ ಸ್ಪಂದಿಸುವಂತೆ ಈ ಒಂದು ಸಭೆಯಲ್ಲಿ ಅಧಿಕಾರಿಗೆ ಅರ್ಥಮಾಡಿಕೊಳ್ಳುವಂತೆ ಸೂಚಿಸುತ್ತೇನೆ. ಹಾಗೂ ಸದಸ್ಯರ ಆರೋಗ್ಯ ಸಮಸ್ಯೆ ಉಂಟಾದಲ್ಲಿ ನೀವು ಯಾವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಯಾರಾದರೂ ಸರಿಯಾಗಿ ಸ್ಪಂದಿಸಿಲ್ಲವೆಂದರೆ ಕೂಡಲೇ ನನ್ನನ್ನು ಸಂಪರ್ಕಿಸಿ ನಾನು ಮಧ್ಯರಾತ್ರಿಯಾದರೂ ಪರವಾಗಿಲ್ಲ ನಿಮ್ಮ ಸೇವೆಯಲ್ಲಿ ಚಿರಋಣಿ ಯಾಗಿರುತ್ತೇನೆ ಮತ್ತು ನಮ್ಮ ಸದಸ್ಯರೆಲ್ಲರೂ ಒಗ್ಗಟ್ಟಾಗಿ ನಮ್ಮ ಒಕ್ಕೂಟವನ್ನು ಇನ್ನಷ್ಟು ಬೆಂಬಲಿಸೋಣ ಹಾಗೂ ಬಲಪಡಿಸೋಣ ಎಂದು ಈ ಸಂದರ್ಭದಲ್ಲಿ ಮಾತನಾಡಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ. ದುರ್ಗಮ್ಮ. ದುರ್ಗಪ್ಪ ರವರಿಗೆ ನೀವು ಇಂದಿನ ದಿನಮಾನಗಳಲ್ಲಿ ಅಧ್ಯಕ್ಷರ ಆಗಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ ಮತ್ತು ನಿಮ್ಮ ಪಂಚಾಯತಿಯಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ನಿಮ್ಮನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಅದರಂತೆ ನೀವು ಸಹ ಸದಸ್ಯರುಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸವನ್ನು ಮಾಡಿ ಕೈಜೋಡಿಸಿ ಎಂದು ಅವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ.ದುರ್ಗಮ್ಮ ದುರ್ಗಪ್ಪ. ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ಗೊಂಚಗ್ಯಾರು ನಾಗರಾಜ್ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚನ್ನಬಸಮ್ಮ ಬಸಣ್ಣ ಹಾಗೂ ಗ್ರಾಮ ಪಂಚಾಯಿತಿಗೆ ಸೇರಿರುವ ಎಲ್ಲಾ ಹಳ್ಳಿಯ ವಾರ್ಡ್ಗಳ ಸದಸ್ಯರುಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀ ಮಹಾಂತೇಶಯ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರುಳಿ ರಾಜ ಕೆ ಹಾಗೂ ಪಂಚಾಯತಿ ಎಲ್ಲಾ ಸಿಬ್ಬಂದಿಗಳು ಮುಖ್ಯವಾಗಿ ಪತ್ರಿಕಾ ಮಾಧ್ಯಮದವರು ಇದ್ದರು :
ವರದಿ ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
