;

ಉಪ್ಪಳ ದನ ಕಾಯುವ ವ್ಯಕ್ತಿ ನದಿಯಲ್ಲಿ ಸಾವು, ಶವ ಪತ್ತೆ…!!!

ಉಪ್ಪಳ ದನ ಕಾಯುವ ವ್ಯಕ್ತಿ ನದಿಯಲ್ಲಿ ಸಾವು, ಶವ ಪತ್ತೆ.

ಸಿಂಧನೂರು:ನ.5. ತಾಲ್ಲೂಕಿನ ದಡೇಸುಗೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಪ್ಪಳ ಗ್ರಾಮದ ಚಿಂಚರಡಿ ಕ್ಯಾಂಪಿನ ಹತ್ತಿರ ತುಂಗಾಭದ್ರ ನದಿ ಪಾತ್ರದ ನಡುಗಡ್ಡೆಯಲ್ಲಿ ನವಂಬರ್ 3 ರಂದು ಮಧ್ಯಾನ್ಹ 2.15.ರ ಸುಮಾರಿಗೆ ಎಂದಿನಂತೆ ದನ ಕಾಯಲು ಹೋದ ವ್ಯಕ್ತಿ ಹುಚ್ಚಪ್ಪ ತಂದೆ ಯಲ್ಲಪ್ಪ ಚಲವಾದಿ ವಯಸ್ಸು 55 ನದಿಯಲ್ಲಿ ಕೊಚ್ಚಿಕೊಂಡು ಹೊದ ವ್ಯಕ್ತಿಯಾಗಿದ್ದಾನೆ.
ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಮೇಯಲು ಹೋಗಿದ್ದ ಧನಗಳನ್ನು ಹೊಡೆದು ಕೊಂಡು ಬರುವಾಗ ಈಜು ಬಾರದೆ ನದಿಯಲ್ಲಿ ಹರಿದು ಹೋಗಿದ್ದು ಹುಡುಕಿ ಕೊಡಲು ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಟುಂಬಸ್ಥರ ದೂರಿನ ಅನ್ವಯ ಗ್ರಾಮೀಣ ಠಾಣೆಯ ಪಿಎಸ್ಐ ಯರಿಯಪ್ಪ ತನಿಖೆ ಕೈಗೊಂಡು ತಮ್ಮ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿ ಬೋಟ್ ಮೂಲಕ ನದಿಯಲ್ಲಿ ಹರಿದು ಹೋದ ಹುಚ್ಚಪ್ಪನ ಶವಕ್ಕಾಗಿ ನಿರಂತರ ವಾಗಿ ಹುಡುಕಾಟ ನಡೆಸಿದಾಗ ನವಂಬರ್ 4 ರಂದು ಹುಚ್ಚಪ್ಪನ ಶವ ಸಿಕ್ಕಿದ್ದು ಶವನ್ನು ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ನೀಡಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;