ಕಬ್ಬು ಬೆಳೆಗಾರರ ಸಂಘ ಮತ್ತು ರೈತರಿಂದ ಬೆಲೆ ನಿಗದಿಗಾಗಿ ಪ್ರತಿಭಟನೆ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮುತ್ತುಗೆ ಹಾಕಿ ರೈತರು ಮತ್ತು ಕಬ್ಬು ಬೆಳಗಾರರ ಸಂಘದಿಂದ ಪ್ರತಿಭಟನೆ ನಡೆಸಿದರು. ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿನ ಬೆಳೆಗಳಿಂದ ಜಿಲ್ಲೆಯಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಸುತ್ತವೆ ಆದರೆ ಪ್ರತಿ ವರ್ಷ ದೀಪಾವಳಿ ಸರಿಸುಮಾರಿಗೆ ಕಬ್ಬು ಕಟಾವು ಹಂಗಾಮು ಪ್ರಾರಂಭವಾಗಿ ಕಾರ್ಖಾನೆಗಳು ಕಬ್ಬು ನುರಿಸಲು ಶುರುವಾಗುತ್ತದೆ ಆದರೆ ವಾಡಿಕೆಯಂತೆ ಬೆಲೆ ನಿಗದಿಯಾಗದೆ ಇರುವ ಮತ್ತು ಕಬ್ಬು ಬೆಳೆಗಾರರ ಸಮ್ಮುಖದಲ್ಲಿ ಬೆಲೆ ನಿಗದಿ ಘೋಷಿಣೆ ಮಾಡದೆ ಇರುವ ಕಾರಣ ಸೈದಾಪುರ ಸಮೀರವಾಡಿಯ ಗೋದಾವರಿ ಸಕ್ಕರೆ ರೈತರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಬಹಿರಂಗವಾಗಿ ಬೆಲೆ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದು ಇಂದು ಕಾರ್ಖಾನೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ಒಂದುವೇಳೆ ಬೆಲೆ ನಿಗದಿ ಮಾಡದೆ ಕಾರ್ಖಾನೆ ಪ್ರಾರಂಭಗೊಳಿಸಿದರೆ ಕಾರ್ಖಾನೆಗೆ ಬರುವ ಕಬ್ಬನ್ನು ತಡೆದು ನಿಲ್ಲಿಸುದಾಗಿ ಆಕ್ರೋಶದಿಂದ ನುಡಿದರು ಕಾರ್ಖಾನೆಯ ಪರವಾಗಿ ಮಾತನಾಡಿದ ಹಿರಿಯ ಕಾರ್ಖಾನೆ ಅಧಿಕಾರಿ ಹುಕ್ಕೇರಿಯವರು ರೈತರ ಸಮ್ಮುಖದಲ್ಲೆ ಬೆಲೆ ನಿಗದಿ ಮಾಡಿ ಕಬ್ಬು ಕಟಾವು ಪ್ರಾರಂಭಗೊಳಿಸಲಾಗುವುದು ಎಂದು ಹೇಳಿದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
