ಜಾಗತಿಕ ಹೂಡಿಕೆದಾರರ ಸಭೆ ವಿರೋಧಿಸಿ ರೈತ ಸಂಘ ಪ್ರತಿಭಟನೆ.
ಸಿಂಧನೂರು.ನ.2.ಜಾಗತಿಕ ಹೂಡಿಕೆದಾರರ ಸಭೆ ವಿರೋಧಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು,ರೈತರ ಭೂಮಿ,ಆಹಾರ,ಉದ್ಯೋಗ, ಹಕ್ಕುಗಳನ್ನು ರಕ್ಷಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಸಮಿತಿ ( KPRS ) ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ತಹಸೀಲ್ ಕಾರ್ಯಾಲಯದವರೆಗೆ ಸರ್ಕಾರದ ವಿರುದ್ಧ ದಿಕ್ಕಾರ, ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮೂಲಕ ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಬಂದೊದಗಿದ ಅತಿ ವೃಷ್ಟಿ ಬರಗಾಲ ಹಾಗೂ ಕೋವಿಡ್,ಲಾಕ್ ಡೌನ್ ಮುಂತಾದ ಪ್ರಕೃತಿ ವಿಕೋಪಗಳ ಜೊತೆಗೆ ರೈತರ ಬದುಕು ನೀರಿನಲ್ಲಿ ಕೊಚ್ಚಿಹೋಗಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ರೈತರು ಬೆಳೆ ಬೆಳೆಯಲು ಹಾಕಿದ್ದ ಲಕ್ಷಾಂತರ ರೂಪಾಯಿ ಬಂಡವಾಳ ಅತಿವೃಷ್ಟಿ ಪರಿಣಾಮದಿಂದಾಗಿ ನಷ್ಟವಾಗಿದ್ದರು ರೈತಾಪಿ ಸಮುದಾಯದ ಬಂಡವಾಳ ರಕ್ಷಣೆಗೆ ಯಾವುದೇ ಮಾತನಾಡದ ರಾಜ್ಯ ಬಿಜೆಪಿ ಸರ್ಕಾರ ರೈತ ಭೂಮಿ ವಿದ್ಯುತ್ ನೀರು ಇತ್ಯಾದಿ ಅಸ್ತಿಗಳನ್ನು ಕಾರ್ಪೋರೇ ಟರ್ ಕಂಪನಿಗಳಿಗೆ ದಾರೆಯರಿಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯನ್ನುನವಂಬರ್ 2ರಿಂದ 4 ವರೆಗೆ 2022ರಂದು ಮೂರು ದಿನಗಳ ಕಾಲ ಬೆಂಗಳೂರು ಹೊರವಲಯದಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದೊಂದು ರೈತ ವಿರೋಧಿ ಜನ ವಿರೋಧಿ ಕ್ರಮವಾಗಿದೆ ಎಂದು ಲಿಂಗಪ್ಪ.ಬಿ ಮಾತನಾಡಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ರದ್ದುಪಡಿಸಬೇಕು, ವಿದ್ಯುತ್ ತಿದ್ದುಪಡಿ ಮಸೂದೆ 2022ಸಂಸತ್ ನಿಂದ ವಾಪಸ್ ಪಡೆಯಲು ರಾಜ್ಯ ಸರ್ಕಾರ ಅಗ್ರಹಿಸಬೇಕು. ಅತಿವೃಷ್ಟಿಗೆ ಮಳೆ ಬೆಳೆ ಕಳೆದುಕೊಂಡ ರೈತ ಕೂಲಿಕಾರರ ವೈಜ್ಞಾನಿಕ ಪರಿಹಾರ ನೀಡಬೇಕು. ಎಲ್ಲಾ ಗ್ರಾಮೀಣ ಜನತೆಗೆ ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು.ರೈತರ ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮ ಮಾಡಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ, ಬ್ಯಾಂಕ್ ಸಾಲ ನೀಡಲು ಕ್ರಮ ತೆಗೆದುಕೊಳ್ಳ ಬೇಕು, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಹೆಚ್ಚು ತ್ತಿರುವ ದೌರ್ಜನ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಹಾಗೂ ಮನೆ -ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವಂತರಾಯಗೌಡ, ರಾಮನಗೌಡ,ಮಲ್ಲಿಕಾರ್ಜುನಗೌಡ ಮುಳ್ಳೂರು, ನಾಗೇಶಗೌಡ.ಪಿ.ಪಿ, ಶೇಕ್ಷಾಖಾದ್ರಿ, ಯಂಕಪ್ಪ ಕೆಂಗಲ್, ಪೂಜಾರಿ ಬಸಪ್ಪ ಕಲ್ಲೂರು, ವೆಂಕೋಬ ಕುರುಬರ ಕಲ್ಲೂರು, ಅದನಗೌಡ ಪಗಡದಿನ್ನಿ ಕ್ಯಾಂಪ್, ಬಸನಗೌಡ ಮಲ್ಲಾಪುರ ರವಿ, ಶಿವು, ಲಚಮರಡ್ಡಿ, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
