ರಂಗ ಮಂದಿರಕ್ಕೆ ಪುನೀತ್ ಹೆಸರಿಡಲು ಕರಪ ಒತ್ತಾಯ…!!!

ರಂಗ ಮಂದಿರಕ್ಕೆ ಪುನೀತ್ ಹೆಸರಿಡಲು ಕರಪ ಒತ್ತಾಯ.

ಸಿಂಧನೂರು:ನ.2.ಕನ್ನಡ ನಾಡಿನ ಹೆಮ್ಮೆಯ ಪುತ್ರ ಮನೆ ಮನೆಗಳಲ್ಲಿ ಇಂದು ರಾರಾಜಿಸುತ್ತಿರುವ ರಾಜಕುಮಾರ, ಚಲನ ಚಿತ್ರದ ಮೂಲಕ ಕನ್ನಡ ನಾಡು,ನುಡಿ,ನೆಲ,ಜಲ ರಕ್ಷಣೆಯನ್ನು ಬಿಂಬಿಸಿದ ಮಹಾನ ಅವತಾರ ಪುರಷ, ಶ್ರೀಗಂಧದ ಗುಡಿಯ ನೇತಾರ,ಕರ್ನಾಟಕ ಯವಕರ ಕಣ್ಮಣಿ, ಕಲಾರತ್ನ, ಕೊಡುಗೈ ದಾನಿ, ಕಲಾರತ್ನ ಬಿರುದಾಂಕಿತ ಇತಿಹಾಸ ಪುರುಷ , ಮಹಾನ್ ಕಲಾವಿದ ಡಾ.ಪುನೀತ ರಾಜಕುಮಾರ ರವರ ಹೆಸರನ್ನು ಸಿಂಧನೂರು ರಂಗಮಂದಿರಕ್ಕೆ ಇಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ಪಡೆ(ನೋಂ) ವತಿಯಿಂದ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್‌ ನಾಡಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ಪಡೆ (ನೋಂ) ಜಿಲ್ಲಾಧ್ಯಕ್ಷ ಸಿ. ಮೌನೇಶ ದೊರೆ ಮಾತನಾಡಿ ಡಾ.ಪುನೀತ ರಾಜ ಕುಮಾರ ಕೇವಲ ಒಂದು ವ್ಯಕ್ತಿ ಯಾಗಿರುವದಿಲ್ಲ ಅವರು ಕರ್ನಾಟಕ ಶಕ್ತಿಯಾಗಿದ್ದು,ಇಂದು ವಯೋ ವೃದ್ಧರಾಗಿ,ಸಾಹಿತಿಗಳು, ಚಿಂತಕರು,ಸಂಶೋಧಕರು, ಸಾಹತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ಮಹಾನುಭಾವ ರು ಸೇರಿದಂತೆ ನಾಡಿನ ಉದ್ದಗಲಕ್ಕೂ ಮಕ್ಕಳು, ಮಹಿಳೆಯರು, ಪಾಲಕರು ಸೇರಿದಂತೆ ಎಲ್ಲಾ ಗಣ್ಯ ಮಾನರು, ಇವರನ್ನು ನೆನೆಯದ ಮನವೆ ಇರುವದಿಲ್ಲ ಎಂದರೆ ಅತಿಶಯೋಕ್ತಿಯಾಗದು ಎಂದರು.
ಪುನೀತ್ ರಾಜಕುಮಾರ ಮಹಾನ ಕಲಾವಿದ ನಾಗಿದ್ದು, ದೊಡ್ಡನೆ ಹುಡುಗನಾಗಿದ್ದರೂ, ಕಿಂಚಿತ್ತು ದೌಲತ್ತು ಇರದೆ, ಸುಮಾರು 1800 ಮಕ್ಕಳಿಗೆ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ, ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುವ ಮೂಲಕ ಸಮಾಜ ಸೇವೆ ಮಾಡಿರುವ ಈ ರಾಜಕುಮಾರ ತನ್ನ ಸಾವಿನಲ್ಲಿಯೂ ಕೂಡಾ ತನ್ನ ಅಂಗಾಂಗಗಳನ್ನು ದಾನ ಮಾಡಿದ ಅಭಿನವ ಕರ್ಣನಾಗಿದ್ದಾನೆ ಇಂಥವರ ಹೆಸರು ರಂಗ ಮಂದಿರ ಕ್ಕೆ ಹೆಸರಿಡುವುದು ಸೂಕ್ತ. ಈ ವಿಷಯದಲ್ಲಿ ಕಾಳಜಿ ವಹಿಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ಪಡೆ (ನೋಂ)ಜಿಲ್ಲಾ ಸಮಿತಿ ಮನವಿ ಪತ್ರದ ಮೂಲಕ ಶಾಸಕರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಮನೂರಪ್ಪ ಕಾನೂನು ಸಲಹೆಗಾರರು, ಮಾನೇಶ ಪತ್ತಾರ, ಎನ್ ಕರ್ಣನ್, ಅಮರೇಶ ಗೋರೆಬಾಳ, ಜುಬೇರ್, ಸುರೇಶ ಬಡಿಗೇರ, ಹುಸೇನ್ ಭಾಷ, ಬಸವರಾಜ, ಹನುಮಂತಪ್ಪ,ಸಿದ್ದಪ್ಪ ಪೂಜಾರಿ, ಸದ್ದಾಂಹುಸೇನ್ ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend