ತಾಯಕನಹಳ್ಳಿ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಣೆ…!!!

ತಾಯಕನಹಳ್ಳಿ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದೆ ವೇಳೆ ಮುಖ್ಯ ಶಿಕ್ಷಕರಾದ ಸುನಿತಾ ಗುರುರಾಜ್ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಪೂಜಿ ಸಲ್ಲಿಸಿ ನಂತರ 67ನೇ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು. ಪುಟಾಣಿ ಮಕ್ಕಳು ನಾಡ ಗೀತೆ, ನಿತ್ಯೋತ್ಸವ ಗೀತೆ.ಮತ್ತು ಕನ್ನಡ ಸಾಹಿತಿಗಳು ರಚಿಸಿದ ವಿವಿಧ ಹಾಡುಗಳನ್ನು ಹಾಡಿ ದರು. ನಂತರ ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಬಿ.ಟಿ. ಮಂಜಣ್ಣ, ಶಾಲೆಯ ಸಹಶಿಕ್ಷಕರಾದ ಪ್ರಭಾಕರ್. ಮಂಜುಳ, ಸುಮಿತ್ರ. ಪ್ರಿಯಾಂಕಾ ,ಸರೋಜಾ, ರುದ್ರಮ್ಮ, ಹಾಗೂ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend