ಹಿರೇಕುಂಬಳಗುಂಟೆಯ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ೬೭ ನೇ ನಾಡ-ನುಡಿಯ ರಾಜ್ಯೋತ್ಸವ ಆಚರಣೆ…!!!

೬೭ ನೇ ಕನ್ನಡ ರಾಜ್ಯೋತ್ಸವ. ಕೂಡ್ಲಿಗಿ ತಾಲೂಕಿನ ಹಾಗೂ ವಿಜಯನಗರ ಜಿಲ್ಲೆಯ ಗಡಿಗ್ರಾಮ ಹಿರೇಕುಂಬಳಗುಂಟೆಯ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ೬೭ ನೇ ನಾಡ-ನುಡಿಯ ರಾಜ್ಯೋತ್ಸವ ಆಚರಣೆಯ ನ್ನು ತಾಯಿ ಭುವನೇಶ್ವರಿ ಯ ಭಾವಚಿತ್ರದ ಪೂಜೆಯೊಂದಿಗೆ


ಮಕ್ಕಳು ತಮ್ಮದೇಆದರೀತಿಯಲ್ಲಿ ನಾಡು-ನುಡಿಗೆ ಭಾಷಣದ ಮೂಲಕ ನಮನಗೈದರು. ಶಿಕ್ಷಕರಾದ ಶ್ರೀ ಮಂಜುನಾಥ,ಹಾಗೂ ಬಸವರಾಜ ಅವರು ೨೦೦೦ ವರ್ಷಗಳ ಇತಿಹಾಸದ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ರಾಷ್ಣೀಯ ಸ್ಥಾನಮಾನಗಳ ಬಗ್ಗೆ ತಿಳಿಸಿದರು. ಮಕ್ಕಳು ನಾಡಿನ ಹಾಗೂ ನುಡಿಗಳ ಸಾಹಿತ್ಯ ಕ್ಕೆ ಹೆಜ್ಜೆಹಾಕುತ್ತಾ ನೃತ್ಯ ಪ್ರದರ್ಶನ ಮಾಡಿದರು. ಧ್ವಜಾರೋಹಣ ವನ್ನು ಮುಖ್ಯಗುರುಗಳಾದ ಶ್ಯಾಮಸುಂದರ ಸಪಾರೆ ನೆರವೇರಿಸಿ ರಾಷ್ಟ್ರ ಮತ್ತು ನಾಡಿನ ಐಕ್ಯತೆಯ ಸಂಕೇತವಾಗಿ ಮಾತೃಭಾಷಾ ಶಿಕ್ಷಣ ನೀಡುವುದು ಉತ್ತಮ ಹಾಗೂ ಶ್ರೇಷ್ಠವಾದ ವಿಚಾರವಾಗಿದೆ ಎಂಬುದನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಶಿಕ್ಷಕರಾದ ಹನುಮಂತರಡ್ಡಿ, ರಫೀಕ್, ಶಾರದ,ರೂಪ, ಶರಣಯ್ಯ ಹಾಗೂ ಅಕ್ಷರ ದಾಸೋಹದ ಸಿಬ್ಬಂದಿ ,ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್ ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend