25ನೇ ವರ್ಷದ ರಜತ ಮಹೋತ್ಸವ ಸಂಭ್ರಮ ಸ್ಪರ್ಧಾತ್ಮಕ ತರಬೇತಿ ಕಾರ್ಯಾಗಾರ…!!!

25ನೇ ವರ್ಷದ ರಜತ ಮಹೋತ್ಸವ ಸಂಭ್ರಮ ಸ್ಪರ್ಧಾತ್ಮಕ ತರಬೇತಿ ಕಾರ್ಯಾಗಾರ.

ಸಿಂಧನೂರು.ಸ.23. ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಿಂಧನೂರು ಶಾಖೆಯ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮವರ್ಷವನ್ನು ರಾಯಚೂರು ಜಿಲ್ಲೆಯಾದಂತೆ ಪದವಿದರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರೆಯುವ ವಿದ್ಯಾರ್ಥಿಗಳಿಗೆ ಒಂದು ವಾರಗಳ ಕಾಲ ನುರಿತ ಶಿಕ್ಷಣ ಸಂಸ್ಥೆಗಳ ಅಕಾಡೆಮಿಯಿಂದ ನಗರದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲು ನಿರ್ದರಿಸಲಾಗಿದೆ ಎಂದು ಸಹಕಾರಿ ಅಧ್ಯಕ್ಷ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು

ನಗರದ ಗಂಗಾವತಿ ರಸ್ತೆಯಲ್ಲಿರುವ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಶಾಖೆ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಡ ವಿದ್ಯಾರ್ಥಿಗಳು ಯಾವ ರೀತಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂಬ ನಿಟ್ಟಿನಲ್ಲಿ ಈ ಒಂದು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಹುಟ್ಟು ನಿಶ್ಚಿತ, ಸಾವು ಖಚಿತ, ಇದರಲ್ಲಿ ಬಡವ, ಶ್ರೀಮಂತ ಎಂಬ ಭೇದ ಭಾವವಿಲ್ಲ. ನಗರದಲ್ಲಿ ಪ್ರತಿಯೊಂದು ಸಮಾಜದ ರುದ್ರಭೂಮಿ ಸಾಕಷ್ಟು ದೂರವಿರುವುದರಿಂದ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವ ದೃಷ್ಟಿಕೋನ ಹಿಟ್ಟುಕೊಂಡು ಈ ನಮ್ಮ ಸಹಕಾರ ಸಂಘದಿಂದ ಸುಸಜ್ಜಿತವಾದ ವೈಕುಂಠವಾಹನವನ್ನು ನಿರ್ಮಿಸಿ ಒಂದಿಷ್ಟು ಕಡಿಮೆ ದರವನ್ನು ನಿಗದಿಮಾಡಿ ವಾಹನ ಚಲಾಯಿಸುವ ಚಾಲಕನನ್ನು ನೇಮಕ ಮಾಡಿ ಸಮಾಜಕ್ಕೆ ಹಾಗೂ ಒಂದು ಸಂಸ್ಥೆಗೆ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗುವುದು ಎಂದರು.

ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಿಂಧನೂರು ಶಾಖೆಯು ಗುಲ್ಬರ್ಗ ವಿಭಾಗದಲ್ಲಿ ಮಾದರಿ ಸಂಸ್ಥೆಯಾಗಿದೆ ಇದರಕಾರ್ಯವ್ಯಾಪ್ತಿಯು ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಹೊಂದಿದ್ದು, ಸಿಂಧನೂರು, ಪೋತ್ನಾಳ, ಸಿರಿವಾರ, ಕಂಪ್ಲಿ, ಕನಕಗಿರಿ, ಶಹಾಪುರ, ಕಾರಟಗಿ,ಸಿರುಗುಪ್ಪಗಳಲ್ಲಿ ಶಾಖೆಗಳನ್ನುಹೊಂದಿದೆ. ದೇವದುರ್ಗ, ಲಿಂಗಸೂಗೂರು, ಹುಣಸಗಿ ಮೂರು ಹೊಸ ಶಾಖೆಗಳನ್ನು ಮೂರು ನಾಲ್ಕು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ನಮ್ಮ ಸಹಕಾರಿಯು ಅನೇಕ ಯೋಜನೆಗಳನ್ನು ಗ್ರಾಹಕರಿಗಾಗಿ ರೂಪಿಸಿದ್ದೇವೆ. ವ್ಯವಹಾರದ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ನಾವು ಹಿಂದೆ ಬಿದ್ದಿಲ್ಲ. ಕೋವಿಡ್ ಸಂದರ್ಭದಲ್ಲಿ ರೋಗಿಗಳ ಅನುಕೂಲ ಕ್ಕಾಗಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‌ ಗಳನ್ನು ನೀಡಿದ್ದೇವೆ. ಬಡವರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದೇವೆ. ಉಚಿತ ಆರೋಗ್ಯ ಶಿಬಿರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ನಮ್ಮದಾಗಿದೆ ಎಂದರು.

ಐದು ವರ್ಷಗಳಲ್ಲಿ ಠೇವಣಿ : 2017 -18 ರಲ್ಲಿ 63 ಕೋಟಿ 1ಲಕ್ಷ, 2018 -19 ರಲ್ಲಿ 67 ಕೋಟಿ 71ಲಕ್ಷ, 2019-20 ರಲ್ಲಿ 73 ಕೋಟಿ 15 ಲಕ್ಷ,2020-21ರಲ್ಲಿ 67 ಕೋಟಿ 50 ಲಕ್ಷ,2021- 22 ರಲ್ಲಿ 69 ಕೋಟಿ 36 ಲಕ್ಷ ಠೇವಣಿ ಹೊಂದಿದೆ.

ಸಾಲ ವಿತರಣೆ : 2017-18 ರಲ್ಲಿ 57 ಕೋಟಿ 48 ಲಕ್ಷ, 2018-19ರಲ್ಲಿ 62 ಕೋಟಿ 76 ಲಕ್ಷ, 2019-20ರಲ್ಲಿ 61 ಕೋಟಿ 56 ಲಕ್ಷ,2020-21ರಲ್ಲಿ 56 ಕೋಟಿ 68 ಲಕ್ಷ, 2021-22 ರಲ್ಲಿ 65 ಕೋಟಿ 11ಲಕ್ಷ ವಿವಿಧ ಸಾಲಗಳನ್ನು ಸಹಕಾರಿ ಸದಸ್ಯರಿಗೆ ವಿತರಿಸಿದೆ.

ಟರ್ನವರ್ನ್: 2017-18 ರಲ್ಲಿ 120 ಕೋಟಿ 49ಲಕ್ಷ, 2018-19 ರಲ್ಲಿ 130 ಕೋಟಿ 47 ಲಕ್ಷ, 2019-20 ರಲ್ಲಿ 134 ಕೋಟಿ 74 ಲಕ್ಷ, 2021-22 ರಲ್ಲಿ 124 ಕೋಟಿ 14 ಲಕ್ಷ, 2022-23 ರಲ್ಲಿ 134 ಕೋಟಿ 47 ಲಕ್ಷ ವಾರ್ಷಿಕ ಟರ್ನವರ್ನ ಆಗಿದೆ.

25 ವರ್ಷಗಳ ಅವಧಿಯಲ್ಲಿ ಈ ಸಹಕಾರಿಯು 7799 ಸದಸ್ಯರನ್ನು ಹೊಂದಿದ್ದು . 2021 -22ನೇ ಸಾಲಿನ 3 ಕೋಟಿ 68 ಲಕ್ಷ ಶೇ 18 ರ ಲಾಭಾಂಶ ಹೊಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಪಂಪನಗೌಡ ಬಾದರ್ಲಿ,ಶರಣೇಗೌಡವಿರುಪಾಪುರ, ಪಂಪನಗೌಡ ಎಲೆಕೂಡ್ಲಗಿ, ಮಾಬುಸಾಬ್, ಡಾ.ಬಿ. ಎನ್ .ಪಾಟೀಲ್‌, ಸಿಇಓ ಪಂಪನಗೌಡ ಮಲ್ಲಾಪುರ ಸೇರಿದಂತೆ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend