ಸಮಯ ಹಾಗೂ ಜೀವನ ಹಾಳು ಮಾಡಿ ಕೊಳ್ಳದೆ ಕಷ್ಷಪಟ್ಟು ಅಭ್ಯಾಸ ಮಾಡಿ -ವೆಂಕಟಪ್ಪ ನಾಯಕ.
ಸಿಂಧನೂರ : ಸೆ.23 ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ವಾದ ಸಮಯ ಹಾಗೂ ಜೀವನವನ್ನು ಹಾಳು ಮಾಡಿಕೊಳ್ಳದೆ ಕಷ್ಷಪಟ್ಟು ಅಭ್ಯಾಸ ಮಾಡಿ ಉತ್ತಮ ಜೀವನ ನಡೆಸುವ ಮೂಲಕಸಮಾಜದಲ್ಲಿ ಉತ್ತಮ ನಾಗರಿಕರಾಗಿ ಸುಂದರವಾದ ಬದುಕು ಸಾಗಿಸಬೇಕು ಎಂದು ಡಿವೈಎಸ್ಪಿ ವೆಂಕಟಪ್ಪನಾಯಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಸತ್ಯಗಾರ್ಡನ್ ನಲ್ಲಿ ಅನಿಕೇತನ ಪದವಿ ಪೂರ್ವ ಹಾಗೂ ಪದವಿ ಮಹಾ ವಿದ್ಯಾಲಯದ ಪ್ರಥಮ ಪಿಯುಸಿ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿ ಗಳಿಗೆ ಸ್ವಾಗತ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಮುಖ್ಯ.ಪರಿಶ್ರಮದಿಂದ ಓದಿ ಉನ್ನತ ಸ್ಥಾನ ಪಡೆದು ವಿಧ್ಯಾ ಕಲಿಸಿದ ಶಾಲೆಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ಗೌರವ ತರುವ ಕೆಲಸ ಮಾಡಬೇಕು. ಜೋತಿಷಿಗಳು ದಾರಿ ತೋರಿಸುತ್ತಾರೆ ಬದುಕು ರೂಪಿಸುವುದಿಲ್ಲ, ಆದರೆ ಶಿಕ್ಷಕರು ವಿದ್ಯಾರ್ಥಿಗಳ ಕೈಹಿಡಿದು ಬದುಕುವ ರೂಪಿಸಿ ದಾರಿ ತೋರಿಸು ತ್ತಾರೆ. ಆದರೆ ವಿದ್ಯಾ ಕಲಿಸಿದ ಗುರುಗಳನ್ನು ಹಾಗೂ ಪಾಲಕರನ್ನು ನಾವೆಂದು ಮರೆಯಬಾರದು. ಒಬ್ಬ ಉತ್ತಮ ಶಿಕ್ಷಕ ಒಬ್ಬ ವಿದ್ಯಾರ್ಥಿಯನ್ನು ಉತ್ತಮ ನಾಗರಿಕರನ್ನಾಗಿ ಮಾಡಬಹುದು ಇಲ್ಲ ದೇಶಕ್ಕೆ ಕಂಟಕನಾಗುವ ವ್ಯಕ್ತಿಯನ್ನಾಗಿ ಮಾಡುವ ಅಘಾದ ಶಕ್ತಿ ಹೊಂದಿದ್ದಾರೆ. ಸರ್ಕಾರದ ಸೌಲಭ್ಯ ಪಡೆದು ಕೊಂಡು ಶಿಕ್ಷಕರು ಮಾಡುವ ಪಾಠವನ್ನು ಗಮನ ಕೊಟ್ಟು ಕೇಳಿ ಉನ್ನತ ಸ್ಥಾನ ಪಡೆದುಕೊಂಡು ದೇಶದ ಉತ್ತಮ ನಾಗರಿಕರಾಗಿ ಬದುಕು ಸಾಗಿಸ ಬೇಕು ಎಂದರು.
ತಹಶೀಲ್ದಾರ ಅರುಣ್ ಕುಮಾರ ಹೆಚ್. ದೇಸಾಯಿ, ಅನಿಕೇತನ ಕಾಲೇಜಿನ ಅಧ್ಯಕ್ಷರಾದ ಡಿ.ಎಚ್. ಕಂಬಳಿ ಸೇರಿದಂತೆ ಇತರರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ನಾಗರಾಜ ಮುಕುಂದಾ, ಪ್ರಾಚಾರ್ಯರಾದ ಡಾ.ಸಿ. ಬಿ ಚಿಲ್ಕರಾಗಿ,ಪ್ರಾಂಶುಪಾಲರಾದ ತಿಮ್ಮಣ್ಣ ರಾಮ ತ್ನಾಳ , ಗ್ಯಾನಪ್ಪ ಕನ್ನಾಪೇಟೆ, ಶೇಖರ ಯರದಿಹಾಳ, ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು..

ವರದಿ, ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
