ಭಾರತದಲ್ಲಿ ಸತ್ಯಾವಂತ ಪತ್ರಕರ್ತರ ಸಂತತಿ ನಶಿಸಿ ಹೋಗುತ್ತಿದೆ – ಶಿವಾಸುಂದರ…!!!

ಭಾರತದಲ್ಲಿ ಸತ್ಯಾವಂತ ಪತ್ರಕರ್ತರ ಸಂತತಿ ನಶಿಸಿ ಹೋಗುತ್ತಿದೆ – ಶಿವಾಸುಂದರ.

ಸಿಂಧನೂರು : ಸ.18. ಭಾರತದಲ್ಲಿ ಸತ್ಯಾವಂತ ಪತ್ರಕರ್ತರ ಸಂತತಿ ನಶಿಸಿ ಹೋಗುತ್ತಿದೆ. 2017 ರಿಂದ 2022 ರವರೆಗೆ ಈ ದೇಶದಲ್ಲಿ ಸುಮಾರು 22 ಪತ್ರಕರ್ತರ ಹತ್ಯೆ ಹಾಗೂ 80 ಪತ್ರಕರ್ತರ ಮೇಲೆ ಮಾರಣಾಂತಿಕ ದಾಳಿಗಳಾಗಿವೆ ಎಂದು ಖ್ಯಾತ ಅಂಕಣಕಾರ ಶಿವಾಸುಂದರ ಬೆಂಗಳೂರು ಹೇಳಿದರು.

ತಾಲೂಕಿನ ಹೊಸಳ್ಳಿ ಇ.ಜೆ. ಕ್ಯಾಂಪ್‌ ನಲ್ಲಿ ಯಲಿ ಮಂಚಾಲಿ ವಾಸುದೇವರಾವ್‌ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾ ಘಟಕ ರಾಯಚೂರು ಹಾಗೂ ತಾಲ್ಲೂಕು ಘಟಕ ಸಿಂಧನೂರು ಇವರ ಸಂಯುಕ್ತಾ ಶ್ರಯದಲ್ಲಿ ತಾಲ್ಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ರಾಯಚೂರು ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

100ಕ್ಕೂಹೆಚ್ಚು ಪತ್ರಕರ್ತ ಸಂಸ್ಥೆಯ ಮೇಲೆ ದಾಳಿ, ಒಂದು ಕಡೆ ಸತ್ಯ ಮೀತ್ಯ ಪತ್ರಕರ್ತ ಎದೆಗುಂದದೆ ನಿರ್ಭಿತ ಪತ್ರಕರ್ತ ದಾಳಿಗಳನ್ನು ಎದುರಿಸದೇ ಬೀದಿಗೆ ಬಿದ್ದಿದ್ದಾರೆ. ಇನ್ನೊಂದು ಪೀಳಿಗೆ ಕೆಲವು ಪತ್ರಕರ್ತರು ಐಷ್ಯಾರಾಮಿ ಜೀವನ ನಡೆಸುತ್ತಿದ್ದಾರೆ. ಅವರು ಪತ್ರಿಕೋದ್ಯಮವನ್ನು ಹಾಗೂ ಪತ್ರಿಕೆ ಶೀಲವನ್ನು ಹಾಳು ಮಾಡಿದ್ದಾರೆ. 8 ರಿಂದ 10 ವರ್ಷದಲ್ಲಿ ಹಿಂದಿಯಲ್ಲಿ ಗೋಲಿ ಮಾಧ್ಯಮವೆಂದು ಹೆಸರು ಪಡೆದಿವೆ.ಸರಕಾರದ ಸಾಕು ಮಾಧ್ಯಮಗಳು ಎಂದು ಕರೆಯಬಹುದು. ಮಾಧ್ಯಮಕ್ಕೆ ಪ್ರಜಾತಂತ್ರ ದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ, ಮಾಧ್ಯಮವನ್ನು 4ನೇ ಸ್ತಂಭ ಎಂದು ಕರೆಯುತ್ತಾರೆ. ಅದರೆ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಆದರೆ ದೇಶದಾದ್ಯಂತ ಇರುವ ಟಿವಿ ಮಾಧ್ಯಮಗಳು ಮಾರಾಟವಾಗಿದ್ದು ಮುಂದಿನ ದಿನಗಳಲ್ಲಿ ಇಡೀ ಮಾಧ್ಯಮವನ್ನು ಅದಾನಿ, ಅಂಬಾನಿ ಖರೀದಿ ಮಾಡುವ ಕಾಲ ದೂರ ಇಲ್ಲಾ. ಇವರಿಂದ ಜನ ಯಾವ ರೀತಿಯ ಸುದ್ದಿಗಳನ್ನು ನಿರೀಕ್ಷಲು ಸಾದ್ಯ. ಜ್ಞಾನ, ಶೀಲ, ಕರುಣೆ, ಮಾತೃ ಈ ನಾಲ್ಕು ಇಟ್ಟು ಕೊಂಡು ಪತ್ರಕರ್ತರು ಕೆಲಸ ಮಾಡಬೇಕು ಎಂದರು.

ಪತ್ರಿಕಾರಂಗ ಸೇರಿದಂತೆ ಇಂದು ಎಲ್ಲಾ ರಂಗಗಳಲ್ಲಿ ಮೌಲ್ಯ ಕುಸಿದು ಹೋಗಿದ್ದು, ನಾ ಮೊದಲು ಸುದ್ದಿ ಬರೆಯಬೇಕು ಎನ್ನುವ ಅವಸರದಲ್ಲಿ ಸುದ್ದಿ ಬರೆಯಲು ಹೋಗಿ ಅನೇಕ ಅನಾಹುತಗಳಿವೆ. ಸುದ್ದಿ ಬರೆಯಬೇಕಾದರೆ ಆತ್ಮಾವಲೋಕನ ಮಾಡಿಕೊಂಡು ಸತ್ಯ ನಿಷ್ಠೆ ವರದಿ ಮಾಡಬೇಕು. ಸತ್ಯವನ್ನು ಬಿಂಬಿಸಲಾಗದ ಸ್ಥಿತಿಯಲ್ಲಿ ಮಾಧ್ಯಮ ಗಳಿವೆ. ಸುಳ್ಳುಗಳನ್ನು ತೋರಿಸಿ ಈಗ ಸತ್ಯವಾಗಿ ಬಿಟ್ಟಿವೆ. ಮಾಧ್ಯಮಗಳ ಮೇಲೆ ಜನರಲ್ಲಿ ವಿಶ್ವಾಸ ಕಡಿಮೆಯಾಗಿದೆ. ಪತ್ರಕರ್ತರು ತಮ್ಮಗಳ ಜವಾಬ್ದಾರಿ ಅರಿತು ನಡೆಯಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಪತ್ರಕರ್ತರಿಗೆ ಸಲಹೆ ನೀಡಿದರು.

ಪತ್ರಕರ್ತರು ನೈಜ್ಯ ಸ್ಥಿತಿಯನ್ನು ಬಿಂಬಿಸುವ ಕೆಲಸ ಮಾಡಬೇಕು. ಈ ದೇಶದಲ್ಲಿ ಪ್ರಜಾತಂತ್ರ ಉಳಿಯಬೇಕು, ಬೆಳೆಯಬೇಕು ಅಂದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ,ಇವುಗಳಿಗೆ ಪತ್ರಿಕಾರಂಗ ಆದಾರ ಸ್ತಂಭವಾಗಿ ಉಳಿಬೇಕು. ಜನಸಾಮಾನ್ಯರಿಗೆ ತಮ್ಮ ಕರ್ತವ್ಯ ಸೇವೆ ಮಾಡಿ ಸಲ್ಲಿಸಬೇಕು.ದೇಶದಲ್ಲಿ ಆಗುತ್ತಿರುವ ಭ್ರಷ್ಟಾಚಾರ ವನ್ನು ಸರಿಪಡಿಸುವ ಕೆಲಸ ಪತ್ರಿಕಾ ರಂಗದಿಂದ ಆಗಬೇಕು.ಇವತ್ತು ಪ್ರಜಾತಂತ್ರ ವ್ಯವಸ್ಥೆ ನಶಿಸಿದೆ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದೆ, ಇದು ಆಗಬಾರದು.ಯಾವ ರೀತಿ ಸರಿಪಡಿಸಬೇಕು ಎನ್ನುವ ವಿಚಾರ ಪತ್ರಿಕೆ ಮಾಧ್ಯಮ ನೈಜತೆಯನ್ನು ಬಿಂಬಿಸುವ ಕೆಲಸ ಪತ್ರಿಕಾಮಾಧ್ಯಮ ಮಾಡಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಗುರುನಾಥ ತಾಲೂಕು ಅಧ್ಯಕ್ಷರಾದ ಡಿ.ಎಚ್ ಕಂಬಳಿ ಸೇರಿದಂತೆ ಇತರರು ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೋಷ್ಠಿ1ರಲ್ಲಿ ಡಾ.ಪದ್ಮನಾಭ ಸಹಾಯಕ ಪ್ರಾಧ್ಯಾಪಕರು, ಎಸ್‌ಡಿಎಂ ಪಿಜಿ ಸೆಂಟ‌ರ್ ಉಜಿರೆ ‘ಸುದ್ದಿ ಮಾಧ್ಯಮ ವೃತ್ತಿಪರತೆ ಮತ್ತು ಸವಾಲುಗಳ ಬಗ್ಗೆ ವಿಷಯ ಮಂಡನೆ ಮಾಡಿದರು. ಅಧ್ಯಕ್ಷತೆ ಯನ್ನು ಪ್ರಹ್ಲಾದಗುಡಿ ಮಾಜಿ ಅಧ್ಯಕ್ಷರು ವಹಿಸಿದ್ದರು.ಸಿದ್ರಾಮಯ್ಯಸ್ವಾಮಿ ಅಧ್ಯಕ್ಷರು ಮಾನ್ವಿ ಎಂ.ಗುಂಡಪ್ಪ ಅಧ್ಯಕ್ಷರು ಸಿರವಾರ, ಅಮರೇಶ ಅಲಬನೂರು ಮಹ್ಮದ್ ಮುಸ್ತಫಾ ಖಜಾಂಚಿ, ಪತ್ರಕರ್ತರಾದ ಶ್ರೀಮತಿ ನಾಗರತ್ನ ಶರಣೇಗೌಡ ಗೊರೇಬಾಳ ಪತ್ರಕರ್ತರು ಉಪಸ್ಥಿತರಿದ್ದರು.

ಗೋಷ್ಠಿ 2 ರಲ್ಲಿಡಾ.ಶಿವರಂಜನ್ ಸತ್ಯಂಪೇಟೆ ಪತ್ರಕರ್ತರು ಮತ್ತು ಸಾಹಿತಿಗಳು ಕಲಬುರಗಿ ರವರು ಸುದ್ದಿ ಮತ್ತು ವರದಿಗಾರಿಕೆ ಬಗ್ಗೆ ವಿಷಯ ಮಂಡನೆ ಮಾಡಿದರು. ಅಧ್ಯಕ್ಷತೆಯನ್ನು ಯಮನಪ್ಪ ಪವಾರ್‌ ಮಾಜಿ ಅಧ್ಯಕ್ಷರು, ಗುರುರಾಜ ಗೌಡೂರು ಲಿಂಗಸುಗೂರು ಅಧ್ಯಕ್ಷರು, ಪ್ರಕಾಶ ಅಧ್ಯಕ್ಷರು ಮಸ್ಕಿ, ಪತ್ರಕರ್ತರಾದ ಚಿದಾನಂದ ದೊರೆ, ಉಪಾಧ್ಯಕ್ಷರಾದ ಚಂದ್ರಶೇಖರ ಬೆನ್ನೂರು, ಸಹ ಕಾರ್ಯದರ್ಶಿ, ದುರುಗೇಶ, ಉಪಾಧ್ಯಕ್ಷರಾದ ಶಿವಪುತ್ರ ಧನಶೆಟ್ಟಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ ಹಾಗೂ ಅಭಿನಂದನಾ ಪತ್ರ ವಿತರಣೆಯ ಅಧ್ಯಕ್ಷತೆಯನ್ನು ಬಿ.ಶ್ಯಾಮ್‌ ಕುಮಾರ ಮಾಜಿ ಅಧ್ಯಕ್ಷರು ವಹಿಸಿದ್ದರು. ಆರ್. ಗುರುನಾಥ ಜಿಲ್ಲಾಧ್ಯಕ್ಷರು ರಾಯಚೂರು, ಶಿವಮೂರ್ತಿ ಹಿರೇಮಠ ರಾಜ್ಯ ಸಮಿತಿ ಸದಸ್ಯರು ರಾಯಚೂರು, ಪಾಷಾ ಹಟ್ಟಿ ಪ್ರಧಾನ ಕಾರ್ಯದರ್ಶಿ ರಾಯಚೂರು,ಬಾಬುಅಲಿ ಅಧ್ಯಕ್ಷರು ದೇವದುರ್ಗ, ಉಪಾಧ್ಯಕ್ಷರಾದ ಚಂದ್ರಶೇಖರ ಯರದಿಹಾಳ, ಪತ್ರಕರ್ತರಾದ ಬೀರಪ್ಪ ಸಹ ಖಜಾಂಚಿ, ರಾಘವೇಂದ್ರ ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend