ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ…!!!

ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿಗಳು ಬಿ.ಟಿ. ಮಂಜಣ್ಣ ಅವರಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ಕಲ್ಯಾಣ ಕರ್ನಾಟಕ ಉತ್ಸವದ ಬಗ್ಗೆ ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತ ಸ್ವಾತಂತ್ರ್ಯಗೊಂಡ ನಂತರ ಹೈದರಾಬಾದ್ ನಿಜಾಮ ಭಾರತಕ್ಕೆ ಒಳಪಡುವದಕ್ಕೆ ವಿರೋದಿಸಿದ್ದ ಮಹಾರಾಷ್ಟ್ರ, ಆಗಿನ ಆಂಧ್ರಪ್ರದೇಶ, ಕರ್ನಾಟಕದ ಏಳು ಜಿಲ್ಲೆಗಳ ಹೈದ್ರಾಬಾದ್ ನಿಜಾಮನ ವಶದಲ್ಲಿ ಇದ್ದವು, ಹೈದ್ರಾಬಾದ್ ಕರ್ನಾಟಕಕ್ಕೆ ಅಂದಿನ ಗೃಹಮಂತ್ರಿ ಹಾಗೂ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದ ಸರ್ದಾರ್ ವಲ್ಲಭಾಯಿ ಪಟೇಲರು ಮಿಲಿಟರಿ ಸಹಾಯದಿಂದ ನಿಜಾಮನ ಸೈನ್ಯವನ್ನು ಸದೆಬಡಿದು ಅನೇಕರ ಸಾವು ನೋವುಗಳ ಮದ್ಯೆ ಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದಿದ್ದೇವೆ. ಅನೇಕರ ಹೋರಾಟ, ತ್ಯಾಗದ ಫಲವಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ನಿಜಾಮರ ಆಡಳಿತದಿಂದ ಸೆಪ್ಟೆಂಬರ್ 17 ಮುಕ್ತಿ ಹೊಂದಿದ್ದೇವೆ, ಏಳು ಜಿಲ್ಲೆಗಳಲ್ಲಿ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಬಾಗ್ಯ ಒದಗಿಬಂದಿದೆ ಎಂದು ಮಕ್ಕಳಿಗೆ ಮಾಹಿತಿ ನೀಡಿದರು. ಹಾಗೂ ವಿಶ್ವಕರ್ಮ ಜಯಂತಿ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಮಂಜಣ್ಣ, ಶಾಲೆಯ ಶಿಕ್ಷಕಿಯಾದ ಸುನಿತಾ ಗುರುರಾಜ್, ಶಿಕ್ಷಕರಾದ ಪ್ರಭಾಕರ್, ಸುಮಿತ್ರ, ಮಂಜುಳಾ ಸೇರಿದಂತೆ ಶಿಕ್ಷಕರು, ಪಾಲಕರು, ಪೋಷಕರು ಮಕ್ಕಳು ಹಾಜರಿದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend