ಕುಮತಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಆರೋಗ್ಯ ಮೇಳ…!!!

ಕುಮತಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಆರೋಗ್ಯ ಮೇಳ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮತಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಿಂದ 30 ವರ್ಷ ಮೇಲ್ಪಟ್ಟ ಮಹಿಳೆ ಹಾಗೂ ಪುರುಷರಿಗೆ ಬಿಪಿ ಮತ್ತು ಶುಗರ್ ಒರಲ್ ಕ್ಯಾನ್ಸರ್ ವಿಶೇಷವಾಗಿ ತಪಾಸಣೆ ಮಾಡಲಾಯಿತು ಮತ್ತು ಗರ್ಭಿಣಿಯ ಮಹಿಳೆಯರನ್ನು ಆರೋಗ್ಯ ತಪಾಸಣೆ ಹಾಗೂ ಪೋಷ್ಟಿಕಾಂಶ ಬಗ್ಗೆ ಚರ್ಚಿಸಿದರು ಇನ್ನಿತರೆ ಎಲ್ಲಾ ಆರೋಗ್ಯದ ಸಮಸ್ಯೆ ಬಗ್ಗೆ ಊರಿನ ಜನರ ಜೊತೆ ಚರ್ಚೆ ನಡೆಸಿ ಸಮಸ್ಯೆಯಿದ್ದ ವ್ಯಕ್ತಿಗಳಿಗೆ ಸರ್ಕಾರದಿಂದ ನೀಡಿರುವ ಔಷಧಿಗಳನ್ನು ವಿತರಣೆ ಮಾಡಿದರು ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾದ ಶಿವಪ್ರಕಾಶ ರವರು ನನಗೆ ಸರ್ಕಾರ ವಹಿಸಿರುವ ಕೆಲಸವನ್ನು ಜವಾಬ್ದಾರಿ ತವಾಗಿ ನಾನು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ನಿಮ್ಮ ಯಾವುದೇ ಸಮಸ್ಯೆಗೆ ನಾನು ನಿಮ್ಮ ಸೇವೆಯಲ್ಲಿ ಇರುತ್ತೇನೆ ಎಂದು ಈ ಸಭೆಯಲ್ಲಿ ಮಾತನಾಡಿದರು ಹಾಗೂ ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾಂತೇಶ ಯ್ಯ ರವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಕೆ ಓಬಣ್ಣ. ಮತ್ತು ಓಬಣ್ಣ ರುದ್ರೇಶ್. ಪಾಪಣ್ಣ. ಹಾಗೂ ಆರೋಗ್ಯ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಊರಿನ ಜನರು ಹಾಗೂ ಯುವಕರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend