ಅನಾಥ ಜೀವಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಂತಿ ಆಸ್ಪತ್ರೆ.
ಸಿಂಧನೂರು : ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ವೃದ್ದರು ಇಬ್ಬರು ಸಕ್ಕರೆ ರೋಗ ಇಬ್ಬರಿಗೆ ಆರೋಗ್ಯದಲ್ಲಿ ಏರುಪೇರಾ ದ ಹಿನ್ನೆಲೆಯಲ್ಲಿ ಐದು ದಿನಗಳಿಂದ ನಗರದ ಗಂಗಾವತಿ ರಸ್ತೆಯಲ್ಲಿರುವ ಶಾಂತಿ ಆಸ್ಪತ್ರೆಯ ವ್ಯವಸ್ಥಾಪಕರಾದ ನರೇಶ ವೈದ್ಯರಾದ ಡಾ. ಸಂದೇಶ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿ ಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಂತಿ ಆಸ್ಪತ್ರೆಯ ವ್ಯವಸ್ಥಾಪಕರಾದ ನರೇಶ ಅವರು ಆಶ್ರಮದ ವೃದ್ದರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ನಮ್ಮ ಆಸ್ಪತ್ರೆಯಲ್ಲಿ ಐದು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಇವರ ಚಿಕಿತ್ಸೆಗೆ 40 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವರು ಅನಾಥ ವೃದ್ದರಾಗಿರುವುದರಿಂದ ಅವರಿಂದ ನಾವು ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ಚಿಕಿತ್ಸೆ ಜೊತೆಗೆ ಔಷಧಿಗಳನ್ನುವಿತರಿಸಿ ಅವರನ್ನು ಗುಣಮುಖಕರನ್ನಾಗಿ ಮಾಡಿ ಆಶ್ರಮಕ್ಕೆ ಕಳಸಿ ಕೊಟ್ಟಿದ್ದೇವೆ ಎಂದು ಹೇಳಿದರು.

ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಮಾತನಾಡಿ ಕಾರುಣ್ಯ ಕುಟುಂಬದ ಸೇವೆ ಪ್ರಾರಂಭವಾದಾಗಿನಿಂದಲೂ ಸಹ ಆಶ್ರಮದಲ್ಲಿ ಇರುವವರಿಗೆ ಉಚಿತವಾಗಿ ಚಿಕಿತ್ಸೆ ಮಾಡುವುದರ ಮೂಲಕ ನಮಗೆ ಇನ್ನು ಹೆಚ್ಚಿನ ಅನಾಥಪರ ಸೇವೆ ಮಾಡಲು ಕಾರಣೀಕರ್ತರಾಗಿದ್ದಾರೆ. ಹಾಗೂ ಈ ಸೇವೆಯಲ್ಲದೇ ರಿಯಾಯಿತಿ ದರದಲ್ಲಿ ಬಡ ರೋಗಿ ಗಳಿಗೆ ಚಿಕಿತ್ಸೆ ನೀಡಿ ತಾಲೂಕಿನ ಬಡವರಿಗೆ ಸಹಕಾರಿ ಯಾಗಿದ್ದಾರೆ. ಇಂತಹ ಆಸ್ಪತ್ರೆಯ ಸೇವೆಯನ್ನು ಬಡ ರೋಗಿಗಳು ಪಡೆದುಕೊಳ್ಳಲಿ ಎಂಬುವುದು ನಮ್ಮ ಆಸೆ ಮತ್ತು ಆಸ್ಪತ್ರೆಯಲ್ಲಿ ಸೇವೆಗೈಯ್ಯುತ್ತಿ ರುವ ಸಿಬ್ಬಂದಿಗಳು ಸಹ ರೋಗಿಗಳನ್ನು ಮಗುವಿ ನಂತೆ ಲಾಲನೆ ಪೋಷಣೆ ಮಾಡುತ್ತಿದ್ದಾರೆ ಈ ಆಸ್ಪತ್ರೆಗೆ ಕಾರುಣ್ಯ ಕುಟುಂಬದಿಂದ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ನಂತರ ಮಾತನಾಡಿದ ಆಸ್ಪತ್ರೆಯ ವೈದ್ಯರಾದ ಡಾ. ಸಂದೇಶ ನಮ್ಮಉದ್ದೇಶ ಎಲ್ಲರನ್ನೂ ಸಮಾನತೆಯ ಭಾವನೆಯಿಂದ ನೋಡಿಕೊಳ್ಳುವುದು ಬಡವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವುದು ನಮ್ಮ ಆಸ್ಪತ್ರೆ ವತಿಯಿಂದ ಆಸ್ಪತ್ರೆಯ ವತಿಯಿಂದ ಕೈಯಿಂದಾದಂತಹ ಸೇವೆಯನ್ನು ನೀಡುವುದು ಕಾರುಣ್ಯ ಆಶ್ರಮದ ಜೀವಿಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಾತನಾಡಿದರು.
ಈ ಸಮಯದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳು ಹಾಗೂ ಕಾರುಣ್ಯ ಆಶ್ರಮದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಅಶೋಕ ನಲ್ಲ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ. ಅಮರಯ್ಯ ಸ್ವಾಮಿ. ದೇವಮ್ಮ ಗಿರಿಜಮ್ಮ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
