ಸ್ವಸಹಾಯ ಗುಂಪುಗಳಿಗೆ ಬಡತನ ನಿವಾರಣಾ ತರಬೇತಿ (VPRP)
ಸಿಂಧನೂರು : ಸ.13.ಗ್ರಾಮ ಪಂಚಾಯಿತಿ ಮಟ್ಟದ ಸ್ವಸಹಾಯ ಗುಂಪಿನ ಮಹಿಳಾ ಸಂಪನ್ಮೂಲ ವ್ಯಕ್ತಿಗಳು ಸದಸ್ಯೆಯರು ಇದರಿಂದ ಹೊರಗೆ ಉಳಿಯದಂತೆ ಪ್ರತಿಯೊಬ್ಬರ ಬೇಡಿಕೆ ಪಟ್ಟಿ ಪಡೆಯಲು ತಿಳಿಸಿ ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಮನೋಹರ್ ತಿಳಿಸಿದರು.
ನಗರದ ತಾಲ್ಲೂಕ ಪಂಚಾಯತಿ ಸಭಾಂಗಣದಲ್ಲಿ 30 ಪಂಚಾಯತಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿಯಲ್ಲಿ ಮಾತನಾಡಿದರು.
ತರಬೇತಿ ಪಡೆದುಕೊಂಡು ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡಲು ನಿಗದಿತ ಸಮಯದಲ್ಲಿ ವಿವರ ಪಡೆದು ವರದಿ ಮೂಲಕ ಸರ್ವೇ ಮುಗಿಸಲು ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕ ಶ್ರೀಕಾಂತ್ ಬನ್ನಿ ಗೊಳ ತಿಳಿಸಿದರು.

ಸ್ವಸಹಾಯ ಗುಂಪು (SHG) ನೆಟ್‌ವರ್ಕ್ ಮತ್ತು ಅವರ ಒಕ್ಕೂಟಗಳು ತಮ್ಮ ಬೇಡಿಕೆಗಳನ್ನು ಮತ್ತು ಸ್ಥಳೀಯ ಪ್ರದೇಶದ ಅಭಿವೃದ್ಧಿಯನ್ನು ಆಯೋಜಿಸಲು ಸಿದ್ಧಪಡಿಸಿದ ಸಮಗ್ರ ಬೇಡಿಕೆ ಯೋಜನೆ ಯಾಗಿದ್ದು, ಇದನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಯೊಂದಿಗೆ ಸಂಯೋಜಿಸಬೇಕಾಗಿದೆ. VPRP ಅನ್ನು ಪ್ರತಿ ವರ್ಷ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಗ್ರಾಮ ಸಭೆಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ ಸಾಮಾಜಿಕ ಸೇರ್ಪಡೆ ಎನ್. ಆರ್.ಎಲ್.ಎಂ ಅಡಿಯಲ್ಲಿ ದುರ್ಬಲ ಜನರು ಮನೆಯವರ ನ್ನು ಸ್ವಸಹಾಯ ಗುಂಪುಗಳಿಗೆ ಸೇರಿಸುವ ಯೋಜನೆ ಅರ್ಹತೆ MGNREGS, SBM, NSAP, PMAY, ಉಜ್ವಲ, ಪಡಿತರ ಚೀಟಿ ಮುಂತಾದ ವಿವಿಧ ಯೋಜನೆಗಳಿಗೆ ಬೇಡಿಕೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ಸೆರೆ ಹಿಡಿಯುವ ಮೂಲಕ ಸರ್ವೆ ಮಾಡುವುದಾಗಿದೆ ತಾಲೂಕ ಕಾರ್ಯಕ್ರಮದ ವ್ಯವಸ್ಥಾಪಕ ವೀರಭದ್ರಗೌಡ ಗಚ್ಚಿನ ಮನೆ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ತರಬೇತಿ ಸಂಪನ್ಮೂಲ ವ್ಯಕ್ತಿಯಾದ ಮೌನೇಶ್ ವಲಯ ಮೇಲ್ವಿಚಾರಕ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ MBK LCRP, ಕೃಷಿಸಖಿ ಪಶು ಸಖಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
