;

ಭಾರತವನ್ನು ಒಗ್ಗೂಡಿಸಿ ಅಭಿವೃದ್ಧಿಗಾಗಿ ಭಾರತ ಜೋಡೋ ಯಾತ್ರೆ – ಹಂಪನಗೌಡ ಬಾದರ್ಲಿ…!!!

ಭಾರತವನ್ನು ಒಗ್ಗೂಡಿಸಿ ಅಭಿವೃದ್ಧಿಗಾಗಿ ಭಾರತ ಜೋಡೋ ಯಾತ್ರೆ – ಹಂಪನಗೌಡ ಬಾದರ್ಲಿ.

ಸಿಂಧನೂರು : ಸ.10.ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ಹಾಗೂ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್‌ ಪಕ್ಷ 3,570 ಕೀ.ಮೀ ಭಾರತ ಜೋಡೋ ಯಾತ್ರೆ’ ಯ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಆಣೆಕಟ್ಟುಗಳು,ವಿಶ್ವವಿಧ್ಯಾಲಯಗಳು, ಯುದ್ಧ ವಿಮಾನಗಳು, ವಿದ್ಯುತ್, ರಾಷ್ಟ್ರೀಯ ಹೆದ್ದಾರಿಗಳು, ಆಸ್ಪತ್ರೆಗಳು, ರೈಲ್ವೆ ಇನ್ನೂ ಅನೇಕ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಆದರೆ ನರೇಂದ್ರ ಮೋದಿ ಸರಕಾರ ಇವೆಲ್ಲವುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ.

60 ಸಾವಿರ ಕೋಟಿ ಬೆಲೆಬಾಳುವ ವಿಮಾನ ನಿಲ್ದಾಣಗಳನ್ನು 18 ಸಾವಿರ ಕೋಟಿಗೆ ಮಾರಾಟ ಮಾಡಿದ್ದಾರೆ. ರೈಲ್ವೆಯಲ್ಲಿ 1 ಕೋಟಿ 68 ಲಕ್ಷ ಜನ ಒಡಾಡುತ್ತಿದ್ದರು. ಇದನ್ನು ಅಧಾನಿ ಗ್ರೂಪ್ ಗೆ ಮಾರಾಟ ಮಾಡಿದ್ದಾರೆ. ಎಂಟು ವರ್ಷದಲ್ಲಿ 10 ಲಕ್ಷ 75 ಸಾವಿರ ಕೋಟಿ ಆದಾಯ ಗಳಿಸಿದ್ದಾನೆ.ಆದರೆ ಇಡಿ,ಐಟಿ,ಯಾಕೆ ಹೋಗಲಿಲ್ಲ. ದೇಶದಲ್ಲಿ ದ‌ರ್ಮ ಧರ್ಮಗಳ ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ.ಇವೇಲ್ಲದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವೆಲ್ಲಾ ಮಾಡೋಣ. ಯುವ ನಾಯಕ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿ ರುವ ‘ಭಾರತ್ ಜೋಡೋ ಯಾತ್ರೆ’ 3,570 ಕಿಲೋ ಮೀಟರ್ ದೂರದ ಈ ಯಾತ್ರೆ ತಮಿಳುನಾಡಿನಿಂದ ಆರಂಭ ಗೊಂಡಿದೆ. ಅಕ್ಟೋಬರ್ 21 ರಂದು ರಾಯಚೂರಿಗೆ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಬರಲಿದ್ದು ಸಿಂಧನೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ ರ್ತರು, ಹಿರಿಯ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.

ಎಂಟು ವರ್ಷ ಬಿಜೆಪಿಯ ಆಡಳಿತ‌‌‌‌ ಸರ್ಕಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಇದೊಂದು 40 ಪರ್ಷೆಂಟೇಜ್ ಕಮೀಷನ್ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿದೆ. ಜನ ಬೀದಿ ಪಾಲಾಗಿದ್ದಾರೆ. ಇಂತಹ ಸಂಕಷ್ಟದಲ್ಲಿ ಒಳ್ಳೆಯವರು ಸುಮ್ಮನೆ ಇದ್ದರೆ ಕೆಟ್ಟವರ ಆಳ್ವಿಕೆ ಜಾಸ್ತಿಯಾಗುತ್ತದೆ ಅದಕ್ಕಾಗಿ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆ ಪಡೆದು ಈ ಭಾರತ ಜೋಡೊ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿಜಯಸಿಂಗ ಮಾತನಾಡಿದರು.

ಈ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪಂಪನಗೌಡ ಬಾದರ್ಲಿ,ಖಾಜಿ ಮಲಿಕ್, ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ,ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಡಾ. ನಾಗವೇಣಿ ಪಾಟೀಲ್, ನಗರ ಮಹಿಳಾ ಘಟಕ ಅಧ್ಯಕ್ಷೆ ದ್ರಾಕ್ಷಾಯಿಣಿ ಮಾ.ಪಾ‌, ಮುಖಂಡರಾದ ಎಂ ಕಾಳಿಂಗಪ್ಪ ವಕೀಲರು, ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್ ‌‌ಸದಸ್ಯರಾದ ಶೇಖರಪ್ಪ, ಶ್ರೀಮತಿ ಲಕ್ಷ್ಮಿ ತಿಮ್ಮಯ್ಯ ಬಂಗಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುಗೌಡ ಬಾದರ್ಲಿ. ಬಸವರಾಜ್ ಹಿರೇಗೌಡ್ರು, ಎಸ್ ಶರಣೇಗೌಡ, ಜಾಫರ್ ಅಲಿ ಜಾಗಿರ್ದಾರ್, ಲಿಂಗರಾಜ್ ಪಾಟೀಲ್ ಹಂಚಿನಾಳ, ನಿರುಪಾದೆಪ್ಪ ವಕೀಲರು ಗುಡಿಹಾಳ, ತಿಮ್ಮಯ್ಯ ನಾಯಕ,ಪಂಪನಗೌಡ, ಮೈಬೂಬಸಾಬ ಮುಳ್ಳೂರ್‌‌‌, ಟಿ ಸುಬ್ಬರಾವ್, ಶಿವನಗೌಡ ಎಲೆ ಕೂಡ್ಲಿಗಿ, ದೊಡ್ಡನಗೌಡ ಕಲ್ಲೂರ, ರಂಗನಗೌಡ ಗೊರೆಬಾಳ, ಡಾ.ರಾಮಣ್ಣ ಗೋನವಾರ, ರಾಮಣ್ಣ ಸಾಸಲಮರಿ, ಛತ್ರಪ್ಪ ಕುರುಕುಂದಿ, ಮುನೀರ್ ಪಾಷಾ,ನಳಿನಿ ಚಂದ್ರಶೇಖರ್ ಮೇಟಿ, ಮಂಜುಳಾ ಪ್ರಭುರಾಜ,ಹುಸೇನ್ ಬಿ ಖಾಜಾಸಾಬ,ಕರೀಂಸಾಬ, ಶಬ್ಬೀರ್ ನಾಯಕ, ಎಚ್ ಭಾಷಾ ವೆಂಕಟೇಶ್ ಬಂಡಿ, ಶೇಖರಪ್ಪ ಕೆಎಂಎಸ್, ಆಲಂಬಾಷಾ, ಮೈಬೂಬ್.‌‌ ಮೈಬೂಬ್ ಡೊಂಗ್ರಿ. ಸುರೇಶ್ ಜಾದವ್. ವೀರೇಶ್ ಹಟ್ಟಿ. ಅಮ್ಜದ್ ಖಾನ್. ಶರಣಪ್ಪ ಉಪ್ಪಲ್ ದೊಡ್ಡಿ. ಸಾಮಾಜಿಕ ಜಾಲತಾಣ ವಿಭಾಗದ ಬಸವರಾಜ ಪಾಟೀಲ, ವಾಗೇಶ್, ರಮೇಶ್ ಬಾಲಿ,ಬಸವರಾಜ ಗೊರೆಬಾಳ, ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು, ಮಹಿಳಾ ಘಟಕದ ಪದಾಧಿಕಾರಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;