ನಮ್ಮ ನಡೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಕಡೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಮ್ಮ ನಡೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಕಡೆ ಸಭೆ ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ರವರು ನಮ್ಮ ಪಂಚಾಯ್ತಿಯಲ್ಲಿ ಯಾವುದೇ ಅನುದಾನವಿಲ್ಲ ಮತ್ತು ಸದಸ್ಯರ ವೇತನವು ಸಹ ಬಂದಿರುವುದಿಲ್ಲ ಹಾಗೂ ವಾಟರ್ ಮ್ಯಾನ್ ಗಳ ಸರಿಯಾದ ರೀತಿಯಲ್ಲಿ ಸಂಬಳ ಸಿಗುತ್ತಿಲ್ಲ ಎಂದು ಆಕ್ರೋಶದ ಪಡಿಸಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಟಿ ಕಲ್ಲಳ್ಳಿ ಗ್ರಾಮದಲ್ಲಿ ನೀರಿನ ಅಭಾವವಿದೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿಸಿರುವ ಅದರ ಹಣವು ಸಮೇತ ಇದುವರೆಗೆ ನಾಪತ್ತೆಯಾಗಿದೆ ಇನ್ನೂ ಅನೇಕ ಸಮಸ್ಯೆಗಳ ಕುರಿತು ಎಲ್ಲಾ ಸದಸ್ಯರುಗಳು ಚರ್ಚೆ ಮಾಡಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಮರಳಿ ರಾಜ್ ಕೆ ರವರು ಸಮಸ್ಯೆಯನ್ನು ಹಂಚಿಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೂ ಹಾಗೂ ಸರ್ವ ಸದಸ್ಯರಿಗೆ ನೀವು ನೀಡಿರುವ ಎಲ್ಲ ಮಾಹಿತಿ ನಾನು ನಮ್ಮ ರಾಜ್ಯಾಧ್ಯಕ್ಷರಿಗೆ ಹಾಗೂ ಜಿಲ್ಲಾಧ್ಯಕ್ಷರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತೇನೆ ಎಂದು ಈ ಗ್ರಾಮ ಪಂಚಾಯಿತಿ ಸಮಸ್ಯೆಗಳಿಗೆ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಒಂದು ಸಭೆಯನ್ನು ಕರೆಯುತ್ತೇನೆ ಆ ಸಭೆಗೆ ತಾವುಗಳೆಲ್ಲರೂ ಆಗಮಿಸಿ ಮತ್ತು ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ ನಿಮ್ಮ ಯಾವುದೇ ಸಹಾಯಕ್ಕಾಗಿ ಯಾವುದೇ ಸಮಯದಲ್ಲಿ ನನ್ನನ್ನು ಸಂಪರ್ಕಿಸಿ ನನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತೇನೆ ಎಂದು ಈ ಸಭೆಯಲ್ಲಿ ಅಧ್ಯಕ್ಷರನ್ನು ಮತ್ತು ಉಪಾಧ್ಯಕ್ಷರನ್ನು ಸರ್ವ ಸದಸ್ಯರುಗಳ ಸಮಸ್ಯೆಯ ಕುರಿತು ಮಾತನಾಡಿದರು ಇದೇ ಸಂದರ್ಭದಲ್ಲಿ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ನಾರಾಯಣಪ್ಪ ರವರು ಒಕ್ಕೂಟದ ಅಧ್ಯಕ್ಷರನ್ನು ಉದ್ದೇಶಿಸಿ ನನಗೆ ಸರ್ಕಾರ ನೀಡಿರುವ ಕೆಲಸವನ್ನು ಶಕ್ತಿಮೀರಿ ಕೆಲಸ ಮಾಡುತ್ತಾ ಹೋಗುತ್ತಿದ್ದೇನೆ ಈ ಸಂದರ್ಭದಲ್ಲಿ ರವರು ಮಾತನಾಡಿದರು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಮುರಳಿ ರಾಜ್ ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ನಾರಾಯಣಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಪಂಚಾಯಿತಿ ಸಿಬ್ಬಂದಿಗಳು ಊರಿನ ಮುಖಂಡರು ಪತ್ರಿಕ ಮಾಧ್ಯಮದವರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
