;

ಕಾಂಗ್ರೆಸ್ ನ ” ಭಾರತ ಜೋಡೋ ಯಾತ್ರೆ ” ಹಾಸ್ಯಾಸ್ಪದ – ಕೆ. ವಿರೂಪಾಕ್ಷಪ್ಪ…!!!

ಕಾಂಗ್ರೆಸ್ ನ ” ಭಾರತ ಜೋಡೋ ಯಾತ್ರೆ ” ಹಾಸ್ಯಾಸ್ಪದ – ಕೆ. ವಿರೂಪಾಕ್ಷಪ್ಪ.

ಸಿಂಧನೂರು : ಸ. 9. ದೇಶದಲ್ಲಿ ಸಂಪೂರ್ಣವಾಗಿ ತಳಮಟ್ಟಕ್ಕೆ ಹೋಗಿರುವ ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ಒಂದು ಹಾಸ್ಯಾಸ್ಪದ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ದಿನೇ ದಿನೇ ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಬೆಳೆಸಿದ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದಾರೆ ಆದರೆ ಕಾಂಗ್ರೆಸ್ ನವರು ಭಾರತ ಜೋಡೊ ಯಾತ್ರೆ ಮಾಡುವುದಕ್ಕೆ ಯಾವ ನೈತಿಕತೆಯಿದೆ ಎಂದು ಪ್ರಶ್ನೆಸಿದರು.

70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಅಖಂಡ ಭಾರತ ತುಕಡಿ ತುಕಡಿಯಾಗಿ ಹೊಡೆದು ಹೋಗಿದೆ. ಯಾವ ಆಧಾರದ ಮೇಲೆ ಅರ್ಥವಿಲ್ಲದ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಗೆ ನಾಯಕತ್ವದ ಕೊರತೆಯಿದೆ ಮೊದಲು ಗುಲಾಮಗಿರಿಯಿಂದ ಹೊರಗೆ ಬರಲಿ ಒಬ್ಬ ಯುವಕ ರಾಹುಲ್ ಗಾಂಧಿಗೆ ಹಿರಿಯ ಮುಖಂಡರು ಸಲಾಮ ಮಾಡುವುದನ್ನು ಬಿಡಲಿ. ಅದಕ್ಕಾಗಿ 50 ವರ್ಷ ಕಾಂಗ್ರೆಸ್ ಪಕ್ಷವನ್ನು ಬೆಳೆಸಿದ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ‘ಗುಲಾಮ ನಹೀಬಿ’ ನಮಗೆ ಗುಲಾಮಗಿರಿ ಬೇಕಿಲ್ಲ ನಮಗೆ ಅಜಾದ್ ಬೇಕು ಎಂದು ಪಕ್ಷದಿಂದ ಹೊರ ಬಂದಿದ್ದಾರೆ ಎಂದರು.

ಕಾಂಗ್ರೆಸ್ ನ ಆಳ್ವಿಕೆಯಲ್ಲಿ ಯಶಸ್ವಿ ಪ್ರಜಾಪ್ರಭುತ್ವ ಎಲ್ಲಿದೆ.ದೇಶದಲ್ಲಿ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷದ ಅವಶ್ಯಕತೆಯಿದೆ ಆದರೆ ಕಾಂಗ್ರೆಸ್ ನೆಲಕಚ್ಚಿದೆ. ವಿರೋದ ಪಕ್ಷವಾಗಿ ಉಳಿದಿಲ್ಲ.ದೇಶದಲ್ಲಿ ಕಾಂಗ್ರೆಸ್ ಹಿನಾಯಸ್ಥಿತಿಯಲ್ಲಿದೆ. ಪಕ್ಷದಲ್ಲಿ ಯೋಗ್ಯರ ಕೊರತೆಯಿದೆ.ಕೇವಲ ಒಂದು ವರ್ಗದ,ದರ್ಮದ ಜನರ ಹೊಲೈಸುವ ಮತಭ್ಯಾಂಕ ಮಾಡಿಕೊಂಡಿದೆ.
ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ನಾಯಕತ್ವ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲು ಸಾಧ್ಯ. ಕಾಂಗ್ರೆಸ್ ಪಕ್ಷ ಇಂಗ್ಲಿಷ್ ರ ಗುಲಾಮಗಿರಿ ಯನ್ನು ಮುಂದುವರೆಸಿಕೊಂಡು ಬಂದಿದೆ. ಭಾರತ ಜೋಡೋ ಯಾತ್ರೆ ಕೈಬಿಟ್ಟು ಮೊದಲು ಕಾಂಗ್ರೆಸ್ ಜೋಡೋಯಾತ್ರೆ ಮಾಡಿ ಎಂದು ಕುಟುಕಿದರು.

ತಾಲೂಕಿನಲ್ಲಿ ಬಿಜೆಪಿ ಪಕ್ಷದಲ್ಲಿ ನಾನು ಒಬ್ಬ ಪ್ರಬಲ ಆಕಾಂಕ್ಷೆಯಾಗಿದ್ದು ಪಕ್ಷದ ತೀರ್ಮಾನಕ್ಕೆ ಬದ್ದ. ಕಾಂಗ್ರೇಸನ ಎರಡು ಬಣಗಳ ಕಿತ್ತಾಟ, ಜನರ ತೀರ್ಪು ಈ ಬಾರಿ ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗುವುದು ಖಚಿತ, ಚುನಾವಣಾ ಹತ್ತಿರ ಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ತೊರೆಯುತ್ತಾರೆ. ಒಂದು ವೇಳೆ ನಾಡಗೌಡ್ರ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಆದರೆ ಅವರು ಗೆಲ್ಲಲು ಸಾದ್ಯವಿಲ್ಲ. ತಾಲೂಕಿನಲ್ಲಿ ಬದಲಾವಣೆಯಾಗುವುದು ನಿಶ್ಚಿತ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;