;

ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಎಸ್ಎಫ್ಐ ನಿಂದ ರಾಜ್ಯ ಸರ್ಕಾರಕ್ಕೆ ಮನವಿ…!!!

“ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಎಸ್ಎಫ್ಐ ನಿಂದ ರಾಜ್ಯ ಸರ್ಕಾರಕ್ಕೆ ಮನವಿ.

ಹರಪನಹಳ್ಳಿ:ಭಾರತ ವಿದ್ಯಾರ್ಥಿ ಫೆಡರೇಷನ್ಎಸ್ಎಫ್ಐ*
ತಾಲ್ಲೂಕು ಸಮಿತಿಯ ವತಿಯಿಂದ.ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರವನ್ನು ತೀವ್ರವಾದ ಸಮಸ್ಯೆಗಳು ಕಾಡುತ್ತಿವೆ.

ಇದಕ್ಕೆಲ್ಲ ಕಾರಣ ರಾಜ್ಯ ಬಿಜೆಪಿ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳು ಕಾರಣ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ ರಾಜ್ಯ ಸಮಿತಿ ಆರೋಪಿಸಿದೆ.

ವಿವಿಧ ಶೈಕ್ಷಣಿಕ ಸಮಸ್ಯೆಗಳ ಈಡೇರಿಕೆಗಾಗಿ ಆಗ್ರಹಿಸಿ ದಿನಾಂಕ 07:09:2022 ರಂದು ರಾಜ್ಯಾದ್ಯಂತ ತಾಲ್ಲೂಕು ,
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಈ ಕೆಳಕಂಡ ಬೇಡಿಕೆಗಳ ಮನವಿ ಪತ್ರವನ್ನು ಮಾನ್ಯ ಮುಖ್ಯಮಂತ್ರಿ ರವರಿಗೆ ಸಲ್ಲಿಸುತ್ತಿದೆ.

*ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು:* ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಾದರಿ ಶಾಲೆ ನೆಪದಲ್ಲಿ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಟಿರುವುದನ್ನು ಎಸ್ಎಫ್ಐ ತೀವ್ರವಾಗಿ ವಿರೋಧಿಸುತ್ತದೆ. ಕೋವಿಡ್ ನಂತರ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಒಂದು ಕಡೆ ಹೆಚ್ಚಾಗಿದೆ. ಜೊತೆಗೆ ಈ ಶೈಕ್ಷಣಿಕ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಾಫ್ ಔಟ್ ಆಗಿದ್ದಾರೆ ಆದ್ದರಿಂದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿ ಮಾಡಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬದಲು ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ರಾಜ್ಯದ ಶೇ 31% ರಷ್ಟು ಗ್ರಾಮಗಳಲ್ಲಿ ಸರ್ಕಾರಿ ಶಾಲೆಯೇ ಇಲ್ಲದಂತಾಗುತ್ತದೆ. ಇದರಿಂದ ಬಡವರು, ತಳ ಸಮುದಾಯಗಳ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ.

*ಹಾಸ್ಟೆಲ್ ಪ್ರವೇಶಕ್ಕೆ ಕೌನ್ಸಿಲಿಂಗ್ ಕೈಬಿಟ್ಟು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟ್ ನೀಡಿ:* ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ ತೀವ್ರವಾಗಿದೆ ಹಾಸ್ಟೆಲ್ ಸೀಟಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ ಗಳ ಸಂಖ್ಯೆ ಹೆಚ್ಚು ಮಾಡಬೇಕಿತ್ತು ಆದರೆ ಬದಲಿಗೆ ವಸತಿ ಶಿಕ್ಷಣ ಸಂಸ್ಥೆಗಳ ಪದ್ದತಿಯಲ್ಲಿ ಎಸ್ಸಿ.ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಕ್ಕೆ ಅನಗತ್ಯ ಕೌನ್ಸಿಲಿಂಗ್ ಪದ್ದತಿ ತಂದಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ ಆದ್ದರಿಂದ ಕೌನ್ಸಿಲಿಂಗ್ ಪದ್ದತಿ ಕೈ ಬಿಟ್ಟು ಹಳೆ ಪದ್ದತಿ ಮುಂದುವರಿಸಬೇಕು ಹಾಗೂ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುವಂತಾಗಲು ಹಾಸ್ಟೆಲ್ ಗಳ ಸಂಖ್ಯೆ ಹೆಚ್ಚು ಮಾಡಬೇಕು, ಹೊಸ ಹಾಸ್ಟೆಲ್ ಗಳನ್ನು ಪ್ರಾರಂಭಿಸಬೇಕು, ಹಾಸ್ಟೆಲ್ ಗಳ ಸಮಗ್ರ ಅಭಿವೃದ್ದಿಗೆ ಅಗತ್ಯ ಅನುದಾನ ನೀಡಬೇಕು.

ಉತ್ತಮ ಗುಣಮಟ್ಟದ ಆಹಾರ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಕಾರಣ ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಮಾಸಿಕ 1650/ರೂ ತೀರಾ ಕಡಿಮೆಯಿದೆ ಆದ್ದರಿಂದ ಹಾಸ್ಟೆಲ್ ವಿದ್ಯಾರ್ಥಿಗಳ ತಿಂಗಳ ಆಹಾರ ಭತ್ಯೆ ಕೇರಳ ಮಾದರಿಯಲ್ಲಿ ಕನಿಷ್ಠ 3500/ರೂ ಗೆ ಹೆಚ್ಚಿಸಬೇಕು.

*ಶೈಕ್ಷಣಿಕ ಪ್ರೋತ್ಸಾಹ ಯೋಜನೆಗಳು ಸಮರ್ಪಕವಾಗಿಜಾರಿಗೊಳಿಸಿ:*
ವಿದ್ಯಾರ್ಥಿಗಳಿಗೆ ನೀಡದೆ ಬಾಕಿ ಇರುವ ಬೈಸಿಕಲ್, ಸಮವಸ್ತ್ರ, ವಿದ್ಯಾರ್ಥಿವೇತನ, ವಿದ್ಯಾಸಿರಿ, ಪಠ್ಯಪುಸ್ತಕ, ಫೆಲೋಶೀಫ್ ಮುಂತಾದ ಶೈಕ್ಷಣಿಕ ಪ್ರೋತ್ಸಾಹ ಯೋಜನೆಗಳನ್ನು ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿದೆ ಇವೆಲ್ಲ ನಿಗದಿತ ಶೈಕ್ಷಣಿಕ ವೇಳೆಯೊಳಗೆ ಸಮರ್ಪಕವಾಗಿ ನೀಡಬೇಕು ಅ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಹಾಗೂ ಈ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು.

*ಪಠ್ಯ ಪುಸ್ತಕಗಳ ಕೋಮುವಾದೀಕರಣ ಹಾಗೂ ಸಾವರ್ಕರ್ ಬುಲ್ ಬುಲ್ ಹಕ್ಕಿ ಮೇಲೆ ಪ್ರಯಾಣದ ಅವೈಜ್ಞಾನಿಕ ಪಾಠ ತೆಗೆಯಲು ಒತ್ತಾಯಿಸಿ:* ಪಠ್ಯಪುರಿಷ್ಕರಣೆ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೋಮುವಾದಿ ಮತ್ತು ಸಂಘ ಪರಿವಾರದ ವಿಚಾರಗಳನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದೆ ಇದು ನಿಲ್ಲಬೇಕು ಕೇಸರೀಕರಣಗೊಂಡಿರುವ ಪಠ್ಯಗಳನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ತುಮಕೂರು ಯೂನಿವರ್ಸಿಟಿಯಲ್ಲಿ ಸಂಘ ಪರಿವಾರದ ಪ್ರಭಾವದಿಂದ ಸ್ಥಾಪಿಸಿರುವ ಸಾವರ್ಕರ್ ಅಧ್ಯಯನ ಪೀಠವನ್ನು ಕೂಡಲೇ ಬೇಶರತ್ತಾಗಿ ರದ್ದುಪಡಿಸಬೇಕು.

*ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ, ಉಪನ್ಯಾಸಕ, ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಮಾಡಿ ಗುಣಮಟ್ಟದ ಬೋಧನೆ ಕಲ್ಪಿಸಲು ಆಗ್ರಹಿಸಿ:* ರಾಜ್ಯದ ಶಾಲೆಗಳಲ್ಲಿ ಸುಮಾರು 38,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಕಾಲೇಜುಗಳಲ್ಲಿ ಶೇ 56% ಉಪನ್ಯಾಸಕರ ಹುದ್ದೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಾಧ್ಯಪಕರ ಹುದ್ದೆಗಳು ಖಾಲಿಯಾಗಿವೆ.

ಬೆಂಗಳೂರು ಉತ್ತರ ವಿವಿ ಯಲ್ಲಂತೂ ಒಬ್ಬೇ ಒಬ್ಬರು ಖಾಯಂ ಪ್ರಾಧ್ಯಾಪಕರಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುತ್ತಿಲ್ಲ ಈ ಎಲ್ಲ ವಿಷಯಗಳು ಗೊತ್ತಿದ್ದರೂ ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾಗುತ್ತಿಲ್ಲ.

ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಸೆಪ್ಟೆಂಬರ್ -07 ,2022 ರಂದು ರಾಜ್ಯಾದ್ಯಂತ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಸಿ ರಾಜ್ಯ ಸರ್ಕಾರಕ್ಕೆ ಈ ಮನವಿ ಸಲ್ಲಿಸಿದೆ.
ಈ ಎಲ್ಲ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಬಗೆಹರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳಿಸಲಾಗುತ್ತದೆ.

ಎಸ್ ಎಫ್ ಐ ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್
ಉಪಾಧ್ಯಕ್ಷರು ಸಂಜು ನಾಯ್ಕ್
ಬಸವರಾಜ್ ಪ್ರಸನ್ನ ಲೋಕೇಶ್ ದೊಡ್ಡಮನಿ ಅಂಜು ಡ್ರಾವೀಡ್ ರಾಜು ಪ್ರವೀಣ್ ಪ್ರಭು ದಿವ್ಯಾ ವಿದ್ಯಾ ಪ್ರೀತಿ ಸರೋಜ ಕುಮಾರ್ ಅವಿನಾಶ್ ಇನ್ನಿತರರು ಇದ್ದರು
ಭಾರತ ವಿದ್ಯಾರ್ಥಿ ಫೆಡರೇಷನ್-ಎಸ್ಎಫ್ಐ
ತಾಲ್ಲೂಕು ಸಮಿತಿ ಹರಪನಹಳ್ಳಿ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *