;

ದೇವಿಕ್ಯಾಂಪಿನಲ್ಲಿ ಮಳೆಗಾಲದಲ್ಲಿಯೂ ನೀರಿಗಾಗಿ ಪರದಾಟ…!!!

ದೇವಿಕ್ಯಾಂಪಿನಲ್ಲಿ ಮಳೆಗಾಲದಲ್ಲಿಯೂ ನೀರಿಗಾಗಿ ಪರದಾಟ.

ಸಿಂಧನೂರು.ಸೆ.04 ದೇವರಗುಡಿ ಗ್ರಾಮ ಪಂಚಾ ಯಿತಿಯ ದೇವಿಕ್ಯಾಂಪಿನಲ್ಲಿ ಅಧಿಕಾರಿಗಳ ಹಾಗೂ ಅಧ್ಯಕ್ಷರ ಮಾಡಿದ ನಿರ್ಲಕ್ಷ್ಯತನದಿಂದ ಜನ ಕುಡಿ ಯುವ ನೀರಿಗಾಗಿ ದಿನನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಿಕ್ಯಾಂಪಿನಲ್ಲಿ ನಾಲ್ಕು ಜನ ಗ್ರಾಮ ಪಂಚಾಯತ್ ಸದಸ್ಯರಿದ್ದು, ಕ್ಯಾಂಪಿ ನಲ್ಲಿ ಒಂದು ಕುಡಿಯುವ ನೀರಿನ ಕೆರೆಯಿದೆ ಅದಕ್ಕೆ ಸುರಕ್ಷಿತವಿಲ್ಲದ ಕಾರಣ ಕೆರೆಯಲ್ಲಿ ದನಕರುಗಳು ಇಳಿದು ನೀರನ್ನು ಮಲಿನಗೊಳಿಸಿವೆ. ಹತ್ತು ದಿನಗ ಳಿಂದ ಕುಡಿಯುವ ನೀರು ಇಲ್ಲದೆ ಹತ್ತಿರದ ಕಾಲುವೆ ಗೆ ಬರುವ ಹೊಂಡು ನೀರು ತಂದು ಕುಡಿಯುವ ಪರಿಸ್ಥಿತಿ ನಮ್ಮದಾಗಿದೆ.ರೈತರು ಹೊಲಗಳಲ್ಲಿ ಬೆಳೆದ ಭತ್ತಕ್ಕೆ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡಿರು ತ್ತಾರೆ. ಅದೇ ನೀರು ಕಾಲುವೆಗಳ ಮೂಲಕ ಹರಿದು ಬರುತ್ತಿದ್ದು ಅನಿವಾರ್ಯವಾಗಿ ಅದೇ ನೀರನ್ನು ಕುಡಿಯುವಂತ ಪರಿಸ್ಥಿತಿಯಾಗಿದೆ.

ಕ್ಯಾಂಪಿನಲ್ಲಿ ಬಹಳಷ್ಟು ಬಡ ಕುಟುಂಬಗಳು ಹೆಚ್ಚು ವಾಸಿಸುವದ ರಿಂದ ಅವರಿಗೆ ಕಾಯಿಲೆ ಬಂದರೆ ಯಾರು ಹೋಣೆ. ಕೆರೆ ಸ್ವಚ್ಛಗೊಳಿಸುವರೆಗೆ ಕುಡಿಯುವ ನೀರಿಗಾಗಿ ಹಳ್ಳದಲ್ಲಿ ಒಂದು ಬೋರವೆಲ್ ಹಾಕಲಾಗಿದ್ದು, ಹಳ್ಳದಿಂದ ಬರುವ ನೀರಿನ ಪೈಪಲೈನ್ ಒಡೆದಿದ್ದು ಅದನ್ನು ರಿಪೇರಿ ಮಾಡಿಕೊಡಿ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ ಮೇಡಂ ರವರನ್ನು ಕೇಳಿದರೆ ಪಂಚಾಯಿತಿಯಲ್ಲಿ ಹಣವಿಲ್ಲ ಹೇಗೆ ರಿಪೇರಿ ಮಾಡಲು ಸಾಧ್ಯ,ಎಲೆಕ್ಟಿಕಲ್ ಅಂಗಡಿಯಲ್ಲಿ ಉದ್ರಿ ತರೋಣವೆಂದರೆ ಮೊದಲಿನ ಬಾಕಿ ಹಣ ಇನ್ನೂ ನೀಡಿಲ್ಲ, ಸರ್ಕಾರದಿಂದ ಹಣ ಬಂದ ಮೇಲೆ ರಿಪೇರಿ ಮಾಡೋಣ ಅಲ್ಲಿವರೆಗೆ ನನ್ನನ್ನುಕೇಳಬೇಡಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಅರೋಪಿಸಿದರು.

ದೇವಿಕ್ಯಾಂಪ್‌ನಲ್ಲಿ ಮಳೆಗಾಲದಲ್ಲಿ,ಕಾಲುವೆಗೆನೀರು ಇರುವಾಗಲೇ ಕುಡಿಯುವ ನೀರಿನ ಸಮಸ್ಯೆ ಬಗೆಹ ರಿಸದವರು,ಬೇಸಿಗೆಯಲ್ಲಿ ಹೇಗೆ ನಿಭಾಯಿಸುತ್ತಾರೇ ಎಂಬ ಪ್ರಶ್ನೆ ಜನರಲ್ಲಿ ಕಾಡತೋಡಗಿದೆ. ಜನರು ಕುಡಿಯುವ ನೀರು ಸಿಗದೆ ಹತ್ತು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಇದರ ಬಗ್ಗೆ ಗೊತ್ತಿ ದ್ದರು ಸಹ ಅಧಿಕಾರಿಗಳು ಕ್ರಮ ಕೈಗೊಳದೆನಿರ್ಲಕ್ಷ್ಯ ಮಾಡುತ್ತಿದ್ದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರ ಮೊದಲ ಆದ್ಯತೆ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿ ಕೊಳ್ಳಲು ಸಾವಿರಾರು ಕೋಟಿ ರೂಪಾಯಿಗಳು ಅನುದಾನ ನೀಡುತ್ತಿದೆ. ಕ್ಷೇತ್ರದ ಶಾಸಕರು ಕೂಡಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರ, ಪಿಡಿಓಗಳ ಸಭೆ ಕರೆದು ಎಲ್ಲಿಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ತಿಳಿಸಿ ಜನ ಮತ್ತುಜಾನುವಾರುಗಳಿಗೆ ಕುಡಿಯುಲು ನೀರಿನ ಸಮಸ್ಯಯಾಗದಂತೆ ನೋಡಿ ಕೊಳ್ಳಿ ಎಂದು ಖಡಕ್ಕಾಗಿ ಸೂಚನೆ ನೀಡುತ್ತಾರೆ. ಆದರೆ ಅವರ ಮಾತಿಗೆ ಕಿಮ್ಮತಿಲ್ಲ ಅನ್ನುವುದಕ್ಕೆ ದೇವರಗುಡಿ ಗ್ರಾಮ ಪಂಚಾಯತ್ ಪಿಡಿಓ ಸವಿತಾರವರೆ ಉದಾಹರಣೆ. ಯಾಕೆಂದರೆ ಕಳೆದ ಬಾರಿ ಶಾಸಕ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಬೆಯಲ್ಲಿ ದೇವರಗುಡಿ ಗ್ರಾಮಪಂಚಾಯತ್ ಪಿಡಿಓ ರವರನ್ನು ನಿಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೀಯಾ ಎಂದು ಕೇಳಿದಾಗ ಪಿಡಿಓ ಸವಿತಾರವರು ಇಲ್ಲಾ ಸರ್ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಿ ದ್ದೇವೆ. ಯಾವುದೇ ತರಹದ ಸಮಸ್ಯೆಗಳು ಇಲ್ಲಾ ಎಂದು ಹೇಳಿದ್ದುಂಟು,ಆದರೆ ಸಮಸ್ಯೆಯನ್ನು ನೋಡಿದರೆ ಶಾಸಕರಿಗೆ ಸುಳ್ಳು ಹೇಳಿರಬಹುದು ಅನಿಸುತ್ತಿದ್ದೆ, ಕ್ಷೇತ್ರದ ಶಾಸಕರಿಗೆ ಸುಳ್ಳು ಹೇಳಿದ ಇವರು ಜನಸಾಮಾನ್ಯರಿಗೆ ಸತ್ಯ ಹೇಳುವುದು ಯಾವಾಗ?ಎಂಬ ಪ್ರಶ್ನೆ ಸಹಜವಾಗಿ ಎಲ್ಲಾರಲ್ಲಿ ಯೂ ಕಾಡುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಇಂತಹ ಪಂಚಾಯಿತಿಗಳ ಕಡೆ ಗಮನ ಹರಿಸಿ ಜನರಿಗೆ ಶುದ್ಧವಾದ ನೀರು ಒದಗಿಸುವ ಕೆಲಸ ಮಾಡಬೇಕು. ಶಾಸಕರು ಕೂಡಾ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈ ಗೊಂಡಾಗ ಮಾತ್ರ ಬುದ್ದಿ ಕಲಿಯುತ್ತಾರೆ. ಇಲ್ಲದಿದ್ದರೆ ನಮ್ಮನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ದುರಂಹಕಾರದಿಂದ ನಡೆದುಕೊ ಳ್ಳುತ್ತಾರೆ. ಶಾಸಕರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕ್ರಮ ಕೈಗೊಳ್ಳುತ್ತಾರಾ ? ಅಥವಾ ಸುಮ್ಮನೆ ಆಗಿಬಿಡುತ್ತಾರಾ? ಕಾದು ನೋಡಬೇಕಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;