ಸಂತ್ರಸ್ತ ಬಾಲಕಿಯರ ರಕ್ಷಣೆಗೆ ದಲಿತ ಸಂಘರ್ಷ ಸಮಿತಿ ಒತ್ತಾಯ
ಕೂಡ್ಲಿಗಿ :- ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ತಹಸಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಕರ್ನಾಟಕ ದಲಿತ ಸಂಘರ್ಷ ( ಪ್ರೊ ಕೃಷ್ಣಪ್ಪ ಸ್ಥಾಪಿತ) ಸಮಿತಿ ತಾಲೂಕು ಘಟಕ ದಿಂದ ತಾಲೂಕು ಸಂಚಾಲಕರಾದ ಹೊಸಹಳ್ಳಿ ಟಿ ಗಂಗಾಧರ ಮುಖಂಡತ್ವ ದಲ್ಲಿ ಚಿತ್ರದುರ್ಗದ ಮುರುಘಾಮಠದ ಬಾಲಕಿಯರ ವಸತಿ ನಿಲಯದ ಸಂತ್ರಸ್ತ ಬಾಲಕಿಯರ ರಕ್ಷಣೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣ ಹೋರಾಟ ಹಮ್ಮಿಕೊಂಡಿತ್ತು.
ಚಿತ್ರದುರ್ಗದ ಮುರುಘಾ ಶ್ರೀ ಇವರು ಹಾಗೂ ಇವರ ಸಹಚಾರರು ತಮ್ಮ ಅನಾಥಾಲಯದ ವಿದ್ಯಾರ್ಥಿ ನಿಯರ ಮೇಲೆ ನಡೆಸಿದಂತಹ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪೋಕ್ಸೋ ಪ್ರಕರಣ ದಾಖಲಾದರೂ 6 ದಿನಗಳವರೆಗೆ ಅಪರಾಧಿಗಳನ್ನು ಬಂಧಿಸದೆ ಇರುವುದಕ್ಕೆ ವಿಳಂಬ ನೀತಿಯನ್ನು ಖಂಡಿಸಿ, ಡಿಎಸ್ಎಸ್ ಹೋರಾಟಗಾರರು ದಲಿತ ಹೆಣ್ಣು ಮಕ್ಕಳ ಮೇಲೆ ಆಗಿರುವಂತ ಅನ್ಯಾಯದ ವಿರುದ್ಧ ನಮ್ಮ ಭಾರತ ದೇಶದ ಕಾನೂನನ್ನು ಲೆಕ್ಕಿಸದೆ ಪ್ರಭಾವಿ ಮಠಾಧೀಶ ರಾಗಿರುವ ಇವರು ತಮ್ಮ ಪ್ರಭಾವಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬೆಂಬಲವನ್ನು ಉಪಯೋಗಿಕೊಂಡು ಬಂಧನಕ್ಕೆ ಒಳಗಾಗದೆ ಇಂತಹ ಹೇಗೆ ಕೃತ್ಯ ನಡೆದಿರುವಂತಹ ವಿಷಯವನ್ನು ತಿಳಿದು ತಕ್ಷಣವೇ ಸರ್ಕಾರ ಹೆಣ್ಣು ಮಕ್ಕಳ ಪರವಾಗಿ ಬೆನ್ನಿಗೆ ನಿಲ್ಲಬೇಕು . ಆದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವ ಹಾಗೆ ಕಾಣುತ್ತದೆ, ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ನಮ್ಮ ದೇಶದ ಸಂವಿಧಾನವು ಹಾಗೂ ಕಾನೂನು ವ್ಯವಸ್ಥೆಯನ್ನು ಕಾಪಾಡುವುದು ಸಾರ್ವಜನಿಕರು ಹಾಗೂ ಸರ್ಕಾರಗಳದ್ದಾಗಿದೆ . ಇಂತಹ ಘನ ಘೋರ ಅಪರಾಧಿಗಳಿಗೆ ಯಾರೂ ಸಹ ಬೆಂಬಲ ನೀಡದೆ ಸೂಕ್ತವಾದಂತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೋರಾಟಗಾರರ ಆಗ್ರಹವಾಗಿದೆ . ಆದ್ದರಿಂದ ಲೈಂಗಿಕ ದೌರ್ಜನ್ಯದಡಿಯಲ್ಲಿ ಅನ್ಯಾಯವಾದ ವಿಧ್ಯಾರ್ಥಿಗಳಿಗೆ ಬೆಂಬಲಿಸಿ ಸರ್ಕಾರವು ಸ್ವಾಮೀಜಿಗಳ ಬಗ್ಗೆ ಹಾಗೂ ಮುರುಘಾ ಮಠದಲ್ಲಿ ನಡೆದಿರುವಂತಹ ಎಲ್ಲಾ ಘಟನೆಗಳ ಬಗ್ಗೆ ಸಂಬಂಧಪಟ್ಟಂತಹ ಇಲಾಖೆಯವರು ಯಾವುದೇ ಪ್ರಭಾವಗಳಿಗೆ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ಕಾನೂನು ತನಿಖೆ ಮಾಡಬೇಕು. ಇಲ್ಲವಾದರೆ ನೊಂದ ಬಾಲಕಿಯರಿಗೆ ಸಾಕ್ಷಿಗಳನ್ನು ನಾಶ ಮಾಡುವ ಕುತಂತ್ರವು ನಡೆಯಬಹುದು ಎಂಬ ಸಂಶಯ ನಮಗಿದೆ ಯಾಕೆಂದರೆ ಕರ್ನಾಟಕದಲ್ಲಿ ಮುರುಘಾ ಶ್ರೀ ಮಠದ ಶ್ರೀ ಅವರು ಪ್ರಭಾವಿ ಸ್ವಾಮೀಜಿಗಳ ಆಗಿರುವುದರಿಂದ ತಮ್ಮ ಪ್ರಭಾವ ಶಕ್ತಿಯಿಂದ ತನಿಖೆಯ ಸಾಕ್ಷಿಗಳನ್ನು ಮುಚ್ಚಿ ಹಾಕಬಹುದು ಎಂದು ವಿಜಯನಗರ ಸಂಘಟನಾ ಸಂಚಾಲಕರಾದ ತಗ್ಗಿನಕೇರಿ ಕೊಟ್ರೇಶ್ , ಆರೋಪಿಸುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ್ ಈ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ್ತು ಜಿಲ್ಲಾ ಖಜಾಂಚಿ ಕುಮಾರ್ ಬಿ. ಮಹೇಶ್ ಅಕ್ಷಯ್ ಕುಮಾರ್ ದಂಡೆಪ್ಪ. ಚೌಡಾಪುರ ಬಸವರಾಜ್ ಕೂಡ್ಲಿಗಿ ಬಸವರಾಜ್, ಕರಿಬಸಪ್ಪ, ತಿಪ್ಪೆ ಹಳ್ಳಿಮಾರೇಶ್, ಹೂಡೇO ಮಂಜುನಾಥ್ ಸೇರಿದಂತೆ ತಾಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು ದಂಡೆಪ್ಪ ಇನ್ನು ಮುಂತಾದ ಹೋರಾಟಗಾರರು ಭಾಗವಹಿಸಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
