;

ಕೂಡ್ಲಿಗಿ ತಾಲೂಕಿನ ಹಲವು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ!!!

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ!! ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಈ ದಿನ 1-9-22ರ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 8 ಕೊಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಚಾಲನೆ ಕೊಟ್ಟು ಮಾತನಾಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ನಾನೂ ಕೆಲಸ ಮಾಡುತ್ತಿದ್ದೇನೆ ಪ್ರತಿಯೊಂದು ಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳು ನಡೆದಿವೆ ಮತ್ತು ತಾಲೂಕಿನ 74 ಕೆರೆಗಳಿಗೆ ತುಂಗಾಭದ್ರಾ ಡ್ಯಾಂನಿಂದ ನೀರು ತಂದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಾಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಟಿ.ಜಗದೀಶ್,ತಾ.ಪಂ.ಕಾ.ನಿ.ಅದಿಕಾರಿ ವೈ.ರವೀಕುಮಾರ್, ತಾಲೂಕು ಬಿಜೆಪಿ ಮುಖಂಡರುಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ರೇವಣ್ಣ ಹುರುಳಿಹಾಳು,ಗುಂಡುಮುಣುಗು ಪ್ರಕಾಶ್, ಅಶ್ವಮೇಧ ಗ್ರೂಫ್ ಮಾಲಿಕರು ಮತ್ತು ಬಿಜೆಪಿ ತಾಲೂಕು ಮಂಡಲದ ಮಾಜಿ ಅಧ್ಯಕ್ಷರಾದ ಟಿ. ಮಲ್ಲಿಕಾರ್ಜುನ್, ಸೂರ್ಯ ಪಾಪಣ್ಣ, ಹೂಡೇಂ ಪಾಪ ನಾಯಕ, ಇನ್ನಿತರರು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುಡೇಕೋಟೆ ಸ್ತಳೀಯ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ.ಬಸಪ್ಪ ಬಣವಿಕಲ್ಲು (ಅಂಗಡಿ )

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;