ವಾರ್ಷಿಕೋತ್ಸವದ ಸಂಭ್ರಮ:-ಬಯಲು ಸೀಮೆ ಬಳ್ಳಾರಿ ವಾರ ಪತ್ರಿಕೆ ತಂಡದಿಂದ ದಿನಾಂಕ 1-9-2022 ಗುರುವಾರ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಪತ್ರಿಕೆಯ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಾನ್ನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತ ಮಠದ ಶ್ರೀ ಶ್ರೀ ಪ್ರಭು ನಿರಂಜನ ಮಹಾ ಸ್ವಾಮಿಗಳು ಉದ್ಘಾಟನೆಯನ್ನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಪ್ರಾಸ್ತಾವಿಕ ಭಾಷಣವನ್ನು ಸಿದ್ದಲಿಂಗೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ನೆರವೇರಿಸಿದರು, ಆಶೀರ್ವಚನ ನೀಡಿದ ಪ್ರಭು ನಿರಂಜನ ಸ್ವಾಮೀಜಿ ಪತ್ರಕರ್ತರು ನೈಜ ಮತ್ತು ನಿಕರ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ನಿಮ್ಮ ಕೆಲಸವನ್ನು ನಿರ್ವಹಿಸಬೇಕು ಹಾಗೂ ತಾಲೂಕಿನಲ್ಲಿ ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈಗಿನ ಸರ್ಕಾರಗಳು ಮೀನಾಮೇಷ ಎಣಿಸುತ್ತಿದ್ದಾರೆ ಮತ್ತು ಏನ್ ಎಂ ಡಿ ಸಿ ಮತ್ತು ಜಿಂದಾಲ್ ಕಂಪನಿಯವರು ಸ್ಥಳೀಯರಿಗೆ ಉದ್ಯೋಗ ಕೊಡುವಲ್ಲಿ ವಿಫಲವಾಗಿವೆ ಹಾಗಾಗಿ ಪತ್ರಿಕಾ ಮಾಧ್ಯಮದವರು ಸ್ಥಳೀಯರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಮಾಧ್ಯಮದ ಮೂಲಕ ಬಿತ್ತರಿಸಿ ಈ ಎರಡು ಕಂಪನಿಯವರಿಗೆ ಮೊದಲು ಎಚ್ಚರಿಸಿ ಉದ್ಯೋಗ ಕೊಡಿಸುವ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿ ಅಂದಾಗ ಮಾತ್ರ ಇವೆರಡು ಕಂಪನಿಯವರು ಎಚ್ಚೆತ್ತು ಕೊಂಡು ಸ್ಥಳೀಯರಿಗೆ ಅವಕಾಶಗಳನ್ನು ನೀಡುತ್ತಾರೆ ಮಹಾತ್ಮ ಗಾಂಧೀಜಿಯವರು ಸಂಡೂರಿನ ಪರಿಸರವನ್ನ,ಮಹಾತ್ಮ ಗಾಂಧೀಜಿಯವರು ಸಂಡೂರಿನ ಪರಿಸರವನ್ನು ಕಂಡು ಆಗಿನ ಕಾಲದಲ್ಲಿ ಸಿ. ಸಂಡೂರ್ ಇನ್ ಸೆಪ್ಟಂಬರ್ ಎಂದು ಕರೆದಿದ್ದರು ಅದಕ್ಕಾಗಿಯೇ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನ ಇನ್ನಿತರ ಪ್ರವಾಸಿ ತಾಣಗಳನ್ನು ಕಂಡು ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿದ ಗಾಂಧೀಜಿಯವರ ಕೊಡುಗೆ ಅನನ್ಯ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಪತ್ರಕರ್ತ ಮಿತ್ರರಿಗೆ ಸನ್ಮಾನವನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರೆಗನ್ನು ತಂದುಕೊಟ್ಟರು,ಪ್ರಮುಖರಾದ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು.ಬಯಲು ಸೀಮೆ ಬಳ್ಳಾರಿ ಸಂಪಾದಕರಾದ ಸಿ.ಈಶ್ವರಪ್ಪ ಸೋವೇನಹಳ್ಳಿ, ವರದಿಗಾರರಾದ ಎಲೆ ನಾಗರಾಜ, ಬಿ. ರಾಘವೇಂದ್ರ, ಕೋಗಳಿ ಉಮೇಶ್, ಡಿ .ಈಶ್ವರಪ್ಪ ಸಿದ್ದಾಪುರ, ಜಿ. ಅನಿಲ್ ಕುಮಾರ್, ಮುರಳಿ ಕೃಷ್ಣ, ಬಡಗಿ ನಾಗರಾಜ್, ವೀರೇಶ್ ಕಾನ ಹೊಸಹಳ್ಳಿ, ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಗ್ರಾಮದ ಮುಖಂಡರುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು…
ವರದಿ. ಬಸಪ್ಪ ಬಣವಿಕಲ್ಲು (ಅಂಗಡಿ )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
