;

ರಾಮದುರ್ಗ ಕೆರೆ..! ಕೋಡಿ ಕಂಡು ಸಂಭ್ರಮಿಸಿದ ಜನತೆ..!

ರಾಮದುರ್ಗ ಕೆರೆ..! ಕೋಡಿ ಕಂಡು ಸಂಭ್ರಮಿಸಿದ ಜನತೆ..!
ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ರಾಮದುರ್ಗ ಗ್ರಾಮದ ಐತಿಹಾಸಿಕ ಕೆರೆ ತುಂಬಿ ಕೋಡಿ ಹರಿದಿದೆ.
ಎತ್ತ ನೋಡಿದರೂ ಕಾಣ ಸಿಗುವ ನೀರು,ನೀರಲ್ಲಿ ಆಟವಾಡುತ್ತಿರುವ ಸಾರ್ವಜನಿಕರು ಹಾಗು ಮಕ್ಕಳು.ರಾಮದುರ್ಗ ಕೆರೆಯಲ್ಲಿ ಈ ದೃಶ್ಯ ಕಾಣಸಿಗುತ್ತಿದೆ. ವಿಜಯನಗರ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದೆ.

ಗುಡೇಕೋಟೆ ಹೊಬಳಿ ಭಾಗದಲ್ಲಿ ಭರ್ಜರಿ ಸುರಿದ ಮಳೆಯಿಂದಾಗಿ ಕೆರೆ ಹಳ್ಳ ಕೊಳ್ಳಗಳು ತುಂಬಿ ಹಲವಾರು ಚೇಕ್ ಡ್ಯಾಂ ಗಳು ಕೋಡಿ ಹರಿದಿದೆ. ರಾಮದುರ್ಗ ಕೆರೆ ಕೋಡಿ ಹರಿಯುತ್ತಿರುವುದನ್ನ ವೀಕ್ಷಿಸಲು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಮಕ್ಕಳು ನೀರಲ್ಲಿ ಆಟವಾಡುತ್ತಾ ಸಂತಸಪಡುತ್ತಿದ್ದಾರೆ. ಯುವಕ ಯುವತಿಯರು ಕೆರೆ ಕೋಡಿ ಮೇಲೆ ನಿಂತು ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ…

ವರದಿ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;