;

ಚರಂಡಿ ಇಲ್ಲದೇ ರಸ್ತೆಗೆ ಹರಿದ ನೀರು, ಚರಂಡಿ ನೀರಿನಲ್ಲೇ ಜನರ ಓಡಾಟ…!!!

ಚರಂಡಿ ಇಲ್ಲದೇ ರಸ್ತೆಗೆ ಹರಿದ ನೀರು, ಚರಂಡಿ ನೀರಿನಲ್ಲೇ ಜನರ ಓಡಾಟ.

ಸಿಂಧನೂರು : ಅ. 27. ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾಪೂರು ಗ್ರಾಮದಲ್ಲಿ ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದಾಗಿ ಚರಂಡಿಯಲ್ಲಿ ಹರಿಯಬೇಕಾದ ನೀರು ಜನಸಾಮಾನ್ಯರ ಓಡಾಡುವ ರಸ್ತೆಯಲ್ಲಿ ಹಳ್ಳದ ರೀತಿಯಲ್ಲಿ ಹರಿಯುತ್ತಿವೆ.

ಗ್ರಾಮದ ಎಸ್ಸಿ ಎಸ್ಟಿ ಜನರು ವಾಸಿಸುವ ಕಾಲೋನಿಯಲ್ಲಿ 60 ರಿಂದ 70 ಕುಟುಂಬಗಳು ವಾಸಿಸುತ್ತಿದ್ದು, 30 ವರ್ಷಗಳ ಹಿಂದಿನ ಚರಂಡಿಯು ನಶಿಸಿ ಬಿದ್ದು ಹೋಗಿದ್ದು, ಇದೇ ಚರಂಡಿಗೆ ಗ್ರಾಮದ 70 ರಿಂದ 80 ಎಕರೆ ಜಮೀನುಗಳ ನೀರು ಚರಂಡಿಯಿಂದ ಹರಿದು ಹಳ್ಳಕ್ಕೆ ಹೋಗುವದರಿಂದ ಮಳೆಗಾಲದಲ್ಲಿ ಎಸ್ಸಿ ಎಸ್ಟಿ ಜನರು ನರಕಯಾತನೆ ಅನುಭವಿಸಬೇಕಾಗಿದೆ.

ಮಳೆ ಬಂದರೆ ಸಾಕು ಯಾಕಂಪ್ಪ ಮಳೆ ಬರುತ್ತದೆ ಎನ್ನುವ ಪರಿಸ್ಥಿತಿಯಾಗಿದೆ. ಯಾಕೆಂದರೆ ಮಳೆ ಬಂದರೆ ಒಂದರಿಂದ ಎರಡು ದಿನಗಳ ಕಾಲ ರಸ್ತೆಯಲ್ಲಿಯೇ ನೀರು ಹರಿಯುವದರಿಂದ ಸೊಳ್ಳೆಗಳ ಕಾಟ ವಿಪರೀತವಾಗುತ್ತದೆ. ದಿನನಿತ್ಯ ಮಕ್ಕಳು ಶಾಲೆಗಳಿಗೆ ಇದೇ ರಸ್ತೆಯಲ್ಲಿಯೇ ಓಡಾಡುವುದರಿಂದ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಜಾಸ್ತಿಯಾಗುತ್ತದೆ. ಹಲವು ಬಾರಿ ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಿಗೆ, ಅಧಿಕಾರಿಗಳಿಗೆ ತಿಳಿಸಿದರೂ, ಗ್ರಾಮಕ್ಕೆ ಬಂದು ಚರಂಡಿ ಅಳತೆ ಮಾತ್ರ ತೆಗೆದುಕೊಂಡು ಹೋಗುತ್ತಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಇನ್ನೂ ಮುಂದೆಯಾದರೂ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ರಸ್ತೆ ಹಾಗೂ ಚರಂಡಿ ನಿರ್ಮಾಣವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಿಕೊಡುತ್ತಾರ ಕಾದು ನೋಡಬೇಕಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;