ಶಾಂತಿ ಸಭೆ!! ಕೂಡ್ಲಿಗಿ:-ಕಾನಹೊಸಹಳ್ಳಿ ಪೊಲೀಸ್ ಠಾಣಾ ವತಿಯಿಂದ ದಿನಾಂಕ 26.08.2028ರ ಶುಕ್ರವಾರ ನಡೆದ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ನಡೆಸುವ ಗಣೇಶ ಮಿತ್ರ ಮಂಡಳಿಯ ಸದಸ್ಯರುಗಳು ಸೇರಿ ಕಡ್ಡಾಯವಾಗಿ ನಿಮ್ಮ ಠಾಣಾ ವ್ಯಾಪ್ತಿಯ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಕೂಡ್ಲಿಗಿ ಡಿವೈಎಸ್ಪಿ ಜಿ ಹರೀಶ್ ರೆಡ್ಡಿ ರವರು ತಿಳಿಸಿದರು. ಹೊಸಹಳ್ಳಿ ಪೊಲೀಸ್ ಸ್ಟೇಷನ್ ಆವರಣದಲ್ಲಿ ಸಭೆ ನಡೆಸಿದರು ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯು ತಾಲೂಕಿನಲ್ಲಿ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಪ್ರದೇಶವಾದ್ದರಿಂದ ಗಣೇಶ ಕೂಡಿಸುವವರು ಅನುಮತಿ ಪಡೆಯಬೇಕು ನಿಮ್ಮಗಳಿಗೆ ಅನುಕೂಲವಾಗಲು ಜೆಸ್ಕಾಂ, ಪಿಡಬ್ಲ್ಯೂಡಿ, ಸೇರಿ ಏಕಗವಾಕ್ಷಿ ಪದ್ಧತಿಯನ್ನು ಮಾಡಲಾಗಿದೆ ಗ್ರಾಮ ಪಂಚಾಯಿತಿ ಕಚೇರಿಯಿಂದಲೂ ಗಣೇಶ ಮೂರ್ತಿ ಕೂಡಿಸುವ ಜಾಗಕ್ಕೆ ಅನುಮತಿ ಪಡೆಯಬೇಕು, ಹಾಗೂ ನಿಮ್ಮ ಹಳ್ಳಿಗಳಲ್ಲಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ನಡೆಸಿ, ಸೌಹಾರ್ದತೆಯನ್ನು ಕಾಪಾಡಿ ಈ ದೇಶದಲ್ಲಿ ನಾವುಗಳು ಎಲ್ಲರೂ ಒಂದೇ ಎಂದು ಭಾವನೆಯಿಂದ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಇದನ್ನು ಅರಿತು ಹಬ್ಬವನ್ನು ಆಚರಿಸಿ ಯಾವುದೇ ಕಾರಣಕ್ಕೂ ಡೀಜೆ ಬಳಸುವ ಹಾಗಿಲ್ಲ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿದೆ ಇರುವವರನ್ನು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದರು.

ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ,ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಡಿವೈಎಸ್ಪಿ ಅವರು ಸೂಚಿಸಿದರು, ಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರು ಅವರು ಮಾತನಾಡಿ ನಿಮ್ಮ ಗ್ರಾಮಗಳಲ್ಲಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಿ ಎಂದು ಹೇಳಿದರು. ಈ ಸಭೆಗೆ ಹೊಸಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮಗಳ ಮುಖಂಡರುಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ ಶಶಿಧರ ಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಿ. ಓಬಣ್ಣ, ದಲಿತ ಮುಖಂಡರುಗಳಾದ ಎಳನೀರು ಗಂಗಣ್ಣ, ಬಯಲ ತುಂಬರಗುದ್ದಿ ದುರುಗೇಶ್, ಸೂರ್ಯಪ್ರಕಾಶ್, ಶ್ರೀರಾಮ್ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ, ಇತರರು ಹಾಜರಿದ್ದರು, ಈ ಶಾಂತಿ ಸಭೆಯಲ್ಲಿ ಹೊಸಹಳ್ಳಿ, ಬಣವಿಕಲ್ಲು, ಎಂ.ಬಿ ಅಯ್ಯನಹಳ್ಳಿ, ಚಿಕ್ಕಜೋಗಿಹಳ್ಳಿ, ತಾಯಕನಹಳ್ಳಿ, ಆಲೂರು, ಕಾನಮಡುಗು, ಹುಲಿಕೆರೆ ಹಾಗೂ ಅನೇಕ ಹಳ್ಳಿಗಳ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು (ಅಂಗಡಿ )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
