;

FTK Kit ,ನೀರಿನ ಗುಣಮಟ್ಟ ಪರೀಕ್ಷೆ ಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು…!!!

ಜಿಲ್ಲಾ ಪಂಚಾಯತ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ, ಇವರ ಸಹಯೋಗದಲ್ಲಿ ಇಂದು ಗುರುವಾರ ದಿನಾಂಕ 25/8/22 ರಂದು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಚಿಕ್ಕೋಡಿ ತಾಲೂಕಾ ಪಂಚಾಯತ್ ಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೇನ್, ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು,ಆಶಾ ಕಾರ್ಯಕರ್ತೆಯರ,ಅಂಗನವಾಡಿ ಕಾರ್ಯಕರ್ತೆಯರು, FTK Kit ,ನೀರಿನ ಗುಣಮಟ್ಟ ಪರೀಕ್ಷೆ ಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀ ಆನಂದ ಬಣಗಾರ ಮಾತನಾಡಿ,ಜೆ.ಜೆ.ಯಂ. ಯೋಜನೆಯ ಉದ್ದೇಶಗಳು, ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಅಗತ್ಯತೆ ಬಗ್ಗೆ , ನೀರಿನ ಮಿತ ಬಳಕೆ ಬಗ್ಗೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಬಗ್ಗೆ ವಿವರವಾಗಿ ತಿಳಿಸಿದರು.ಜಿಲ್ಲಾ ಯೋಜನಾ ವ್ಯವಸ್ಥಪಕರಾದ ಶ್ರೀ ದೀಪಕ ಕಾಂಬಳೆ ಮಾತನಾಡಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೇನ್, ಆಶಾ ಕಾರ್ಯಕರ್ತೆಯರ,ಅಂಗನವಾಡಿ ಕಾರ್ಯಕರ್ತೆಯರು,FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಯ ತರಬೇತಿ ಪಡೆದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಯಲ್ಲಿ ,FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಯ ಮಾಡಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀ ಆನಂದ ಬಣಗಾರ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀ ವಿಜಯಕುಮಾರ್ ಸಂಗಪ್ಪಗೋಳ, ಜಿಲ್ಲಾ ಯೋಜನಾ ವ್ಯವಸ್ಥಪಕರಾದ ಶ್ರೀ ದೀಪಕ ಕಾಂಬಳೆ ಪ್ರಯೋಗಾಲಯ ತಜ್ಞರಾದ ಶ್ರೀ ಮಹಾಂತೇಶ ಅಂಬಿ ,ಶ್ರೀ ಪ್ರವೀಣ ಮಾದರ ಹಾಗೂ ಭೂ ವಿಜ್ಞಾನ ಶ್ರೀ ಅಮೀತ ಬಳಿಗಾರ ಮತ್ತು ISRA ಸಮುದಾಯ ಸಂಘಟಕರಾದ ಶ್ರೀ ಮಹೇಶ್ ಹೊಸಮನಿ ಹಾಗೂ ಶ್ರೀ ಪ್ರಕಾಶ ಕರೋಶಿ ಹಾಗೂ ಚಿಕ್ಕೋಡಿ ತಾಲೂಕಿನ ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು, ನೀರು ನೈರ್ಮಲ್ಯ ಸಮಿತಿಯ ಸದ್ಯಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;